ಅಡುಗೆ ಮನೆಯಲ್ಲಿ ಸಿಗುವ ಈ ಸಾಮಗ್ರಿಗಳೇ ಮೊಡವೆಗಳಿಗೆ ಔಷಧ, ಒಮ್ಮೆ ಈ ಮನೆ ಮದ್ದನ್ನು ಟ್ರೈ ಮಾಡಿ!
ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಕಾಳಜಿ. ತ್ವಚೆ ಹಾಗೂ ಚರ್ಮದ ಆರೈಕೆಯ ವಿಚಾರದಲ್ಲಿ ತುಂಬಾನೇ ಸೆನ್ಸಿಟಿವ್ ಆಗಿಬಿಡುತ್ತಾರೆ. ಈ ಮುಖದ ಮೇಲಿರುವ ಮೊಡವೆ ಹಾಗೂ ಕಪ್ಪು ಕಲೆಗಳು ಮುಖದ ಅಂದವನ್ನು ಹಾಳುಗೆಡಿಸುತ್ತವೆ. ಹೀಗಾಗಿ ಹೆಚ್ಚಿನವರು ಮುಖದ ಮೇಲಿನ ಮೊಡವೆಯ ನಿವಾರಣೆಗೆ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ಗಳನ್ನು ಬಳಸುತ್ತಾರೆ. ಆದರೆ ಮೊಡವೆಗಳಿಗೆ ಮನೆಯಲ್ಲಿ ಸಿಗುವ ಈ ಪದಾರ್ಥಗಳನ್ನು ಬಳಸಿ ಮೊಡವೆಯನ್ನು ದೂರವಾಗಿಸಿಕೊಳ್ಳಬಹುದು ಎನ್ನವುದನ್ನು ತಿಳಿಯೋಣ ಬನ್ನಿ.
ಮುಖವು ಕ್ಲೀನ್ ಆಗಿದ್ದು, ಕಪ್ಪು ಕಲೆ ಸೇರಿದಂತೆ ಯಾವುದೇ ಸಮಸ್ಯೆಯಿಲ್ಲದೇ ಪಳಪಳನೇ ಹೊಳೆಯಬೇಕು ಎನ್ನುವುದು ಎಲ್ಲಾ ಹೆಣ್ಣು ಮಕ್ಕಳ ಆಸೆ. ಆದರೆ ಆ ಆಸೆಯು ಎಲ್ಲರಿಗೂ ಈಡೇರುವುದಿಲ್ಲ. ಹೆಣ್ಣು ಮಕ್ಕಳು ಮುಖದ ಮೇಲಿನ ಮೊಡವೆಗಳಿಂದ ಹೆಚ್ಚು ಚಿಂತಿತರಾಗುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಪ್ರಾಡಕ್ಟ್ಗಳ ಬಳಕೆ ಮುಂದಾಗುತ್ತಾರೆ. ಕೈಗೆ ಸಿಗುವ ಕ್ರೀಂಗಳನ್ನು ಹಚ್ಚುವ ಬದಲು ಅಡುಗೆ ಮನೆಯಲ್ಲೇ ಸಿಗುವ ಈ ಪದಾರ್ಥಗಳಿಂದಲೇ ಮನೆ ಮದ್ದನ್ನು ಮಾಡಿ ಮೊಡವೆಗಳಿಂದ ಮುಕ್ತಿ ಹೊಂದಬಹುದುದು.
ಮೊಡವೆಗಳ ನಿವಾರಣೆಗೆ ಈ ಮನೆಮದ್ದನ್ನು ಟ್ರೈ ಮಾಡಿ:
* ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ನಿಂಬೆರಸ ಮಿಶ್ರಣ ಮಾಡಿ, ಕ್ರಮವಾಗಿ ಹಚ್ಚುತ್ತಿದ್ದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಇಲ್ಲವಾಗುವುದು.
* ಬಾದಾಮಿ ಬೀಜಗಳನ್ನು ಶುದ್ಧವಾದ ಹಸುವಿನ ಹಾಲಿನಲ್ಲಿ ಅರೆದು, ಹತ್ತಿಯೊಂದಿಗೆ ಆ ಮಿಶ್ರಣವನ್ನು ಅದ್ದಿ ಮೊಡವೆಯ ಮೇಲೆ ಸವರುತ್ತಿದ್ದರೆ, ಮೊಡವೆಯ ಕಲೆಯು ಮಾಯಾವಾಗುವುದು.
* ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ, ನುಣ್ಣಗೆ ಅರೆದು ಪುಡಿ ಮಾಡಿ, ಚೂರ್ಣವನ್ನು ಹಾಲಿನಲ್ಲಿ ಬೆರೆಸಿ, ಮೊಡವೆಗಳಿಗೆ ಹಚ್ಚಿದರೆ ಮೊಡವೆಗಳಿಂದ ಮುಕ್ತಿ ಹೊಂದಬಹುದು.
* ಸೇಬಿನ ತಿರುಳನ್ನು ಅರೆದು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಮೊಡವೆ ಗುಳ್ಳೆಗಳು ಮಾಯವಾಗಿ ಮುಖದ ಕಾಂತಿ ಹೆಚ್ಚುತ್ತದೆ.
* ಎಳೆನೀರಿನಲ್ಲಿ ವಾರಗಳ ಕಾಲ ಮುಖ ತೊಳೆಯುತ್ತಿದ್ದರೆ ಮೊಡವೆಗಳ ಹಾಗೂ ಮುಖದ ಮೇಲೆ ಕಪ್ಪುಕಲೆಗಳು ಕಡಿಮೆಯಾಗಿ ಮುಖವು ಕಾಂತಿಯುಕ್ತವಾಗುತ್ತದೆ.
ಇದನ್ನೂ ಓದಿ: ಮೊಡವೆ ನಿವಾರಣೆಗೆ ಜೀರಿಗೆ ಎಷ್ಟು ಪ್ರಯೋಜನಕಾರಿ ಗೊತ್ತಾ?
* ಕಿತ್ತಲೆ ಸಿಪ್ಪೆಯನ್ನು ಮುಖದ ಮೇಲೆ ಉಜ್ಜುತ್ತಿದ್ದರೆ ಅದರಿಂದ ಸುವಾಸನೆಯ ದ್ರವ ಹೊರ ಬಂದು, ಮೊಡವೆಗಳು ಕಡಿಮೆಯಾಗುತ್ತದೆ.
* ನಿಂಬೆರಸದಲ್ಲಿ ದಾಲ್ಟಿನಿಯನ್ನು ತೇಯ್ದು, ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುತ್ತದೆ.
* ಗರಿಕೆ ಹುಲ್ಲಿನ ರಸವನ್ನು ಮುಖದ ಮೇಲೆ ಲೇಪಿಸುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
* ಹಿಂಗನ್ನು ನೀರಿನಲ್ಲಿ ತೇಯ್ದು ಮೊಡವೆಗಳಿಗೆ ಹಚ್ಚಿದರೆ ಮೊಡವೆ ಗುಳ್ಳೆಗಳು ಕಡಿಮೆಯಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ