AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವೇಕೆ ಕೆಲವೊಮ್ಮೆ ಅತಿಯಾಗಿ ಯೋಚನೆ ಮಾಡುತ್ತೇವೆ?

ಇತರರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ, ಅವರು ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ ಎಂದು ಸದಾ ಅತಿಯಾಗಿ ಯೋಚನೆ ಮಾಡುವುದನ್ನು ಬಿಡಬೇಕು. ನಾವು ಯೋಗ್ಯರೆಂದು ಭಾವಿಸಲು ನಾವು ಪಾಸಿಟಿವ್ ರೀತಿಯಲ್ಲಿ ಯೋಚಿಸಬೇಕು.

ನಾವೇಕೆ ಕೆಲವೊಮ್ಮೆ ಅತಿಯಾಗಿ ಯೋಚನೆ ಮಾಡುತ್ತೇವೆ?
ಸಾಂದರ್ಭಿಕ ಚಿತ್ರ Image Credit source: iStock
ಸುಷ್ಮಾ ಚಕ್ರೆ
|

Updated on: Jan 19, 2024 | 4:40 PM

Share

ನಾವು ಕೆಲವೊಮ್ಮೆ ಗಂಭೀರವಾದ ವಿಷಯಗಳನ್ನು ನಿರ್ಲಕ್ಷ್ಯ ಮಾಡುತ್ತೇವೆ. ಇನ್ನು ಕೆಲವು ಸಣ್ಣಪುಟ್ಟ ವಿಷಯಗಳಿಗೆ ಕೂಡ ತೀರಾ ತಲೆ ಕೆಡಿಸಿಕೊಳ್ಳುತ್ತೇವೆ. ನಮ್ಮಲ್ಲಿ ಅನೇಕರಿಗೆ ಓವರ್ ಥಿಂಕ್ ಮಾಡುವ ಅಭ್ಯಾಸವಿದೆ. ಇದು ಕೂಡ ಒಂದು ಸಮಸ್ಯೆ. ಆಗಾಗ ಆಲೋಚನೆಗಳು ನಮ್ಮ ನಿಯಂತ್ರಣವನ್ನು ಮೀರುತ್ತವೆ. ನಾವು ವಿಷಯಗಳನ್ನು ಅತಿಯಾಗಿ ಯೋಚಿಸುವ ವಿಧಾನದಿಂದಾಗಿ ನಾವು ಒತ್ತಡ ಮತ್ತು ಆತಂಕವನ್ನು ಅನುಭವಿಸುತ್ತೇವೆ.

ಎಲ್ಲಾ ಸಮಯದಲ್ಲೂ ಇತರರನ್ನು ಮೆಚ್ಚಿಸಲೇಬೇಕೆಂದು ಬಯಸುವುದು ತಪ್ಪು. ನಮ್ಮ ಬಗ್ಗೆ ನಮಗೆ ಪಾಸಿಟಿವ್ ಅಭಿಪ್ರಾಯ ಇರಬೇಕು. ನಾವು ಯೋಗ್ಯರೆಂದು ಭಾವಿಸಲು ನಾವು ಪಾಸಿಟಿವ್ ರೀತಿಯಲ್ಲಿ ಯೋಚಿಸಬೇಕು. ಇತರರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ, ಅವರು ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ ಎಂದು ಸದಾ ಅತಿಯಾಗಿ ಯೋಚನೆ ಮಾಡುವುದನ್ನು ಬಿಡಬೇಕು. ಅದರ ಬದಲು ಬೇರೆಯವರು ಏನಾದರೂ ಅಂದುಕೊಳ್ಳಲಿ, ನಾವು ಏನು ಯೋಚಿಸುತ್ತೇವೆ ಮತ್ತು ನಮ್ಮ ಬಗ್ಗೆ ನಮಗೆ ಹೇಗೆ ಅನಿಸುತ್ತದೆ ಎಂಬುದರ ಮೇಲೆ ಹೆಚ್ಚು ಗಮನ ಹರಿಸಬೇಕು.

ಇದನ್ನೂ ಓದಿ: ನೊಣಗಳಿಂದ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗದಂತೆ ತಡೆಯುವುದು ಹೇಗೆ?

ಆದರೆ, ಬಹುತೇಕರು ಬೇರೆಯವರು ಏನಂದುಕೊಳ್ಳುತ್ತಾರೋ, ಅವರಿಗೆ ಇಷ್ಟವಾಗುತ್ತೋ ಇಲ್ಲವೋ ಎಂಬಿತ್ಯಾದಿ ವಿಷಯಗಳ ಬಗ್ಗೆಯೇ ಯೋಚನೆ ಮಾಡುತ್ತಾರೆ. ನಾವು ಅತಿಯಾಗಿ ಯೋಚಿಸಲು ಕೆಲವು ಕಾರಣಗಳು ಇಲ್ಲಿವೆ. ಸಣ್ಣಪುಟ್ಟ ವಿಷಯಗಳಲ್ಲೂ ನಾವು ಅವಮಾನಿತರಾಗಿಬಿಡುತ್ತೇವೇನೋ ಎಂಬ ಅಭದ್ರತೆ ನಮ್ಮನ್ನು ಕಾಡುತ್ತದೆ. ನಾವು ಇತರರ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತೇವೆ ಎಂದು ನಾವು ತುಂಬಾ ಹೆದರುತ್ತೇವೆ. ಅಥವಾ ಅವರು ನಮ್ಮನ್ನು ನಕಾರಾತ್ಮಕ ರೀತಿಯಲ್ಲಿ ನೋಡುತ್ತಿದ್ದಾರೆ ಎಂದು ಚಿಂತಿಸುತ್ತೇವೆ. ಈ ಆಲೋಚನೆಯು ನಮ್ಮನ್ನು ಅತಿಯಾಗಿ ಯೋಚಿಸುವಂತೆ ಮಾಡುತ್ತದೆ.

ಇದನ್ನೂ ಓದಿ: ಖಿನ್ನತೆಯಿಂದ ಪಾರಾಗಲು ಈ ಅಭ್ಯಾಸಗಳನ್ನು ಬಿಟ್ಟುಬಿಡಿ

ನಮ್ಮ ನಿಯಂತ್ರಣವಿಲ್ಲದೆ ನಡೆಯುವ ಕೆಲವು ತಪ್ಪು ಸಂಗತಿಗಳಿಗೆ ಯಾರಾದರೂ ನಮ್ಮನ್ನು ದೂಷಿಸಿದಾಗ ನಾವು ಯಾವ ಕೆಲಸ ಮಾಡಿದರೂ ಅಥವಾ ಏನು ಮಾತನಾಡಿದರೂ ಓವರ್ ಥಿಂಕ್ ಮಾಡುತ್ತೇವೆ. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಅನುಮಾನ, ಕೀಳರಿಮೆ ಉಂಟಾದಾಗ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವಾಗಲೂ ಅತಿಯಾಗಿ ಆಲೋಚನೆ ಮಾಡುತ್ತೇವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ