ಮನುಷ್ಯ ತನ್ನ ಜೀವನದಲ್ಲಿ ಮೂರು ಬಾರಿ ವಿಐಪಿಯಾಗುತ್ತಾನೆ, ಯಾವಾಗ ಗೊತ್ತಾ?

ದೇವರು ಮನುಷ್ಯನಿಗೆ ನೀಡಿದ ಅಮೂಲ್ಯವಾದ ಉಡುಗೆಯೆಂದರೆ ಅದುವೇ ಜೀವನ. ಈ ಜೀವನವನ್ನು ಸಾರ್ಥಕಗೊಳಿಸಬೇಕಾದರೆ ಇದ್ದಷ್ಟು ದಿನ ನಾಲ್ಕು ಜನರಿಗೆ ಉಪಯೋಗವಾಗುವಂತೆ ಬದುಕಬೇಕು. ಆದರೆ ನಾವುಗಳು ನಾಲ್ಕು ದಿನದ ಬದುಕಿನಲ್ಲಿ ನಾವು ನಮ್ಮವರು ಎನ್ನುವುದಕ್ಕಿಂತ ನಾನು ನನ್ನದು ಎನ್ನುವ ಅಹಂನಲ್ಲಿ ಬದುಕುತ್ತೇವೆ. ಕೆಲವರು ಹುಟ್ಟುತ್ತಲೇ ವಿಪಿಐಗಳಾಗಿ ಹುಟ್ಟುತ್ತಾರೆ. ಕೆಲವು ಜೀವನದಲ್ಲಿ ಒಂದಷ್ಟು ಸಾಧನೆಗಳನ್ನು ಮಾಡಿ ವಿಐಪಿ ಪಟ್ಟವನ್ನು ಅಲಂಕರಿಸುತ್ತಾರೆ. ಆದರೆ ಪ್ರತಿಯೊಬ್ಬರು ಜೀವನದಲ್ಲಿ ಈ ಮೂರು ಸಮಯದಲ್ಲಿ ವಿಐಪಿಗಳಾಗುತ್ತಾರೆ ಎನ್ನಲಾಗಿದೆ.

ಮನುಷ್ಯ ತನ್ನ ಜೀವನದಲ್ಲಿ ಮೂರು ಬಾರಿ ವಿಐಪಿಯಾಗುತ್ತಾನೆ, ಯಾವಾಗ ಗೊತ್ತಾ?
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 19, 2024 | 5:37 PM

ಜೀವನ ಎನ್ನುವುದು ಸರಳವಾಗಿಲ್ಲ, ಜಟಿಲತೆಯಿಂದ ಕೂಡಿದೆ. ಕಷ್ಟ ಸುಖ ನೋವು ನಲಿವುಗಳ ನಡುವೆ ಜೀವನದಲ್ಲಿ ಒಂದೊಳ್ಳೆ ಪೊಸಿಷನ್ ಗೆ ತಲುಪಿ ನಾಲ್ಕು ಜನರು ಗುರುತಿಸುವಂತಾಗಲಿ ಎನ್ನುವುದು ಎಲ್ಲರ ಕನಸು. ಆದರೆ ಎಲ್ಲರಿಗೂ ಕೂಡ ಆ ಕನಸು ನನಸಾಗಲು ಸಾಧ್ಯವಿಲ್ಲ. ಕೆಲವರು ನಾಲ್ಕು ಗುರುತಿಸಿಕೊಳ್ಳಲು ಆಗದೇ ಇದ್ದರೂ ನಾಲ್ಕು ಜನರಿಗೆ ಒಳ್ಳೆಯದನ್ನು ಬಯಸುತ್ತಾ, ತಕ್ಕ ಮಟ್ಟಿಗೆ ಜೀವನ ನಡೆಸುತ್ತಾರೆ. ಆದರೆ ಕೆಲವರು ಸನ್ನಿವೇಶಗಳಲ್ಲಿ ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಇದು ನಿಮ್ಮ ಜೀವನದ ಪ್ರಮುಖ ಸಂದರ್ಭಗಳಾಗಿರಬಹುದು.

ನಿಮ್ಮ ಮುಖ ನೋಡಲು ನಿಮ್ಮವರು ಬರುವುದು ಈ ಮೂರು ಸನ್ನಿವೇಶಗಳಲ್ಲಿ ಮಾತ್ರ :

ಈ ಭೂಮಿಗೆ ಬಂದಾಗ : ಹುಟ್ಟು ಎನ್ನುವುದು ಪ್ರತಿಯೊಬ್ಬರ ಜೀವನ ಪ್ರಾರಂಭ. ಈ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಗಳು ಕೂಡ ವಿಐಪಿಯಾಗಿ ಬಿಡುತ್ತಾರೆ. ನೀವು ಭೂಮಿಗೆ ಬಂದ ಕೂಡಲೇ ಎಲ್ಲರೂ ನಿಮ್ಮ ಮುಖ ನೋಡಲು ಬಂದೇ ಬರುತ್ತಾರೆ. ಸಮಾಜದಲ್ಲಿ ನೀವು ಇಂತಹ ವ್ಯಕ್ತಿಯಾಗಿ ಗುರುತಿಸಲು ಚೆಂದದ ಹೆಸರನ್ನು ಇಡುತ್ತಾರೆ. ಆ ಹೆಸರಿನಿಂದಲೇ ಈ ಸಮಾಜವು ನಿಮ್ಮನ್ನು ಗುರುತಿಸುವಂತಾಗುತ್ತದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಈ ಸಮಯದಲ್ಲಿ ಮದುವೆಯಾಗುವ ಗಂಡು ಹೆಣ್ಣು ವಿಐಪಿಯಾಗುತ್ತಾರೆ. ಸಂಬಂಧಿಕರು ನೆಂಟರಿಷ್ಟರೂ ನಿಮ್ಮನ್ನು ಹುಡುಕಿಕೊಂಡು ಬಂದು ನವಜೋಡಿಗೆ ಶುಭಾಶಯಗಳನ್ನು ಕೋರುತ್ತಾರೆ. ಹೀಗಾಗಿ ಇದು ಜೀವನದಲ್ಲಿ ಎರಡನೇ ಸಲ ವಿಐಪಿಗಳಾಗುವ ಸಮಯ ಎನ್ನಬಹುದು.

ಇದನ್ನೂ ಓದಿ: 8+8+8 ನಿಯಮದ ಬಗ್ಗೆ ನಿಮಗೆ ತಿಳಿದಿದೆಯೇ? ಬದುಕಿನಲ್ಲಿ ಸಮಯದ ಸದುಪಯೋಗ ಪಡಿಸಿಕೊಳ್ಳಲು ಈ ಸರಳ ನಿಯಮ ಪಾಲಿಸಿ

ಮರಣ ಹೊಂದಿದಾಗ : ಸಾವು ಯಾರನ್ನು ಕೂಡ ಬಿಟ್ಟಿಲ್ಲ. ಹುಟ್ಟಿದ ಮನುಷ್ಯನು ಒಂದಲ್ಲ ಒಂದು ದಿನ ಸಾವಿನ ಕದ ತಟ್ಟಲೇಬೇಕು. ಆದರೆ ಜೀವನದ ಕೊನೆ ಘಳಿಗೆಯಲ್ಲಿಯೂ ವಿಐಪಿಯಾಗುತ್ತಾನೆ. ಆದ್ರೆ ನಿಮ್ಮನ್ನು ಕೊನೆಯ ಬಾರಿ ನಿಮ್ಮ ಮುಖ ನೋಡಲು ಬಂದಾಗ, ನಿಮ್ಮ ಜೊತೆಗೆ ಮಾತನಾಡಲು ಸಾಧ್ಯವಿಲ್ಲ ಎನ್ನುವುದು ಕಟು ವಾಸ್ತವ. ಆದರೆ ನಿಮ್ಮ ಒಳ್ಳೆಯ ಗುಣಗಳನ್ನು ಗುಣಗಾನ ಮಾಡುವುದು ಈ ಸಂದರ್ಭದಲ್ಲಿಯೇ. ಈ ವೇಳೆಯಲ್ಲಿ ನಿಮ್ಮ ಬಗೆಗಿನ ಒಳ್ಳೆಯ ಮಾತುಗಳನ್ನು ಕೇಳಿಸಿಕೊಳ್ಳಲು ನೀವೇ ಇರುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್