Lifestyle Tips: 8+8+8 ನಿಯಮದ ಬಗ್ಗೆ ನಿಮಗೆ ತಿಳಿದಿದೆಯೇ? ಬದುಕಿನಲ್ಲಿ ಸಮಯದ ಸದುಪಯೋಗ ಪಡಿಸಿಕೊಳ್ಳಲು ಈ ಸರಳ ನಿಯಮ ಪಾಲಿಸಿ

ಕಡಿಮೆ ಕೆಲಸ ಮಾಡುವ ಮೂಲಕ ಹೆಚ್ಚಿನ ಸಾಧನೇ ಮಾಡಬಹುದು ಎಂಬುದನ್ನು ನಂಬುತ್ತೀರಾ? ಹಾಗಾದರೆ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ.

Lifestyle Tips: 8+8+8 ನಿಯಮದ ಬಗ್ಗೆ ನಿಮಗೆ ತಿಳಿದಿದೆಯೇ? ಬದುಕಿನಲ್ಲಿ ಸಮಯದ ಸದುಪಯೋಗ ಪಡಿಸಿಕೊಳ್ಳಲು ಈ ಸರಳ ನಿಯಮ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 04, 2023 | 12:55 PM

ಇತ್ತೀಚಿನ ವರ್ಷಗಳಲ್ಲಿ ನಮ್ಮೆಲ್ಲರ ಜೀವನಶೈಲಿ ಬದಲಾಗಿದೆ. ಒತ್ತಡ, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇವೆ ಇದೆಲ್ಲದರಿಂದಾಗಿ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ನಾವು ಮರೆತಿದ್ದೇವೆ. ಕೆಲಸ, ನಿದ್ರೆ ಮತ್ತೆ ಅದೇ ಪುನರಾವರ್ತನೆ ಅದಕ್ಕೂ ಮಿಗಿಲಾಗಿ ಬೆಳ್ಳಿಗ್ಗೆಯಿಂದ ಸಂಜೆ ವರೆಗೆ ಕೆಲಸ ಬಿಟ್ಟರೆ ಜೀವನ ಬೇರೇನಿಲ್ಲ ಎಂಬ ಭಾವನೆ ನಮ್ಮ ಮನಸ್ಸಿಗೆ ಬಂದು ಬಿಟ್ಟಿದೆ. ಆದರೆ ಇದು ಅಕ್ಷರಶಃ ಸುಳ್ಳು. ಅತೀಯಾದ ಕೆಲಸದಿಂದ ಆರೋಗ್ಯದ ಅಪಾಯಗಳು ಹೆಚ್ಚುತ್ತವೆ. ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡುವುದರಿಂದ ಅನೇಕ ರೀತಿಯ ಖಾಯಿಲೆ ದಂಡೆತ್ತಿ ಬರುತ್ತವೆ. ಅದರಲ್ಲಿ 60% ರಷ್ಟು ಹೃದಯ ಸಂಬಂಧಿತ ಸಮಸ್ಯೆ, ಒತ್ತಡದ ಹೆಚ್ಚಳ, ಸ್ಥೂಲಕಾಯತೆ, ಟೈಪ್ 2 ಡಯಾಬಿಟಿಸ್ ಇವೆಲ್ಲವೂ ಮೊದಲ ಸಾಲಿನಲ್ಲೆಯೇ ಬರುವ ಕೆಲವು ಆರೋಗ್ಯ ಸಮಸ್ಯೆಗಳಾಗಿವೆ. ಹಾಗಾದರೆ ಇದಕ್ಕೆಲ್ಲಾ ಪರಿಹಾರವೇನು? ಎಂಬ ಪ್ರಶ್ನೆ ಮೂಡಿದಲ್ಲಿ ಇದಕ್ಕೆ ಪರಿಹಾರ ಇಲ್ಲಿದೆ.

8+8+8 ನಿಯಮದ ಬಗ್ಗೆ ತಿಳಿದಿದೆಯಾ? ಇದು ನಮ್ಮ ಜೀವನದ 24 ಗಂಟೆಗಳ ಅಸ್ತಿತ್ವವನ್ನು ಪ್ರತಿನಿಧಿಸುವ ನಿಯಮವಾಗಿದೆ. ಅಂದರೆ ಪ್ರತಿ ಮನುಷ್ಯನ ಜೀವನದ ದಿನದಲ್ಲಿ 8 ಗಂಟೆಗಳ ಮಹತ್ವವನ್ನು ತಿಳಿಸಿ ಮಾರ್ಗದರ್ಶನ ನೀಡುತ್ತದೆ.

8+8+8 ನಿಯಮ:

ಇದು ಅನೇಕ ಜನರಿಗೆ ಸಮಯವನ್ನು ಸದುಪಯೋಗಿಸಿಕೊಂಡು ತಮ್ಮ ಜೀವನವನ್ನು ಸಮತೋಲನಗೊಳಿಸಲು ಸಹಾಯ ಮಾಡಿದ ಸರಳ ನಿಯಮವಾಗಿದೆ. ಪ್ರತಿದಿನ ನಮಗಿರುವುದು 24 ಗಂಟೆಗಳ ಸಮಯ. ಅದನ್ನು ಸರಿಯಾಗಿ ಬಳಸಿಕೊಳ್ಳಲು 8, 8, 8 ನಿಯಮವನ್ನು ಪಾಲಿಸಬೇಕು. ಇದರಿಂದ ಸಮತೋಲಿತ ಜೀವನವನ್ನು ಸಾಧಿಸಲು ಸಾಧ್ಯವಾಗುತ್ತದೆ. ಹಾಗಾಗಿ ನಾವು 24 ಗಂಟೆಗಳನ್ನು ಮೂರು ಭಾಗಗಳಾಗಿ ವಿಂಗಡಿಸ ಬೇಕಾಗಿದೆ. ಯಾವ ರೀತಿಯಲ್ಲಿ ವಿಂಗಡಣೆ ಮಾಡಬಹುದು? ಇಲ್ಲಿದೆ ಮಾಹಿತಿ.

8 ಗಂಟೆ ಕೆಲಸ ಮಾಡಲು

8 ಗಂಟೆಗಳು ನಿಮಗಾಗಿ ಮೀಸಲು

8 ಗಂಟೆ ನಿದ್ರೆಗೆ

8 ಗಂಟೆಗಳ ಕೆಲಸ\ ಅಧ್ಯಯನ:

ನಿಯಮದ ಮೊದಲ ಭಾಗವು ದಿನಕ್ಕೆ 8 ಗಂಟೆಗಳ ಕಾಲ ಕೆಲಸಕ್ಕಾಗಿ ಕಳೆಯಬೇಕೆಂದು ಹೇಳುತ್ತದೆ. ನೀವು ನಿಮ್ಮ ಸಮಯವನ್ನು ಸರಿಯಾಗಿ ನಿರ್ವಹಿಸಿದರೆ ಇದು ಸಂಪೂರ್ಣವಾಗಿ ಸಾಧ್ಯವಾಗುತ್ತದೆ ಮತ್ತು ಇದನ್ನು ಅಳವಡಿಸಿಕೊಳ್ಳಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ. 8 ಗಂಟೆಗಳು ಸತತವಾಗಿ ಕೆಲಸ ಮಾಡಲು ನಿಮ್ಮನ್ನು ಮೊದಲು ನೀವು ಸಿದ್ದ ಮಾಡಿಕೊಳ್ಳಬೇಕು. ಏಕೆಂದರೆ ನಿಮ್ಮ ಮನಸ್ಸು ಹಿಡಿತದಲ್ಲಿದ್ದರೆ ಯಾವುದೇ ಕೆಲಸವನ್ನಾದರೂ ಮಾಡಬಹುದು. ಮೊದಲು ಆ ದಿನ ನೀವು ಏನೇನು ಕೆಲಸ ಮಾಡಬೇಕು ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಅದೇ ರೀತಿಯಲ್ಲಿ ಕೆಲಸ ಮಾಡಿ. ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡಬೇಡಿ. ಕೆಲಸ ಮಾಡುವಾಗ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಯಾವುದೇ ವಸ್ತು ಅಥವಾ ಕೆಲಸವಿದ್ದರೂ ಅದನ್ನು ಮಾಡಬೇಡಿ. ಉದಾಹರಣೆಗೆ, ನಿಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ಪರಿಶೀಲಿಸುವುದು. ಹೀಗೆ ಅನೇಕ ರೀತಿಯಲ್ಲಿ ನಿಮ್ಮ ಗಮನ ಯಾವುದೇ ಕಾರಣಕ್ಕೂ ಬೇರೆ ಕೆಲಸಕ್ಕೆ ಹೋಗದಂತೆ ನೋಡಿಕೊಳ್ಳಿ. ಇನ್ನೊಂದು ಮುಖ್ಯವಾದ ವಿಷಯವೆಂದರೆ “ಇಲ್ಲ” ಎಂದು ಹೇಳಲು ಕಲಿಯಿರಿ. ಎಲ್ಲದಕ್ಕೂ “ಹೌದು” ಎಂದು ಹೇಳುವುದು ಸುಲಭ, ಆದರೆ “ಇಲ್ಲ” ಎಂದು ಹೇಳುವುದು ನಿಜವಾಗಿಯೂ ಕಷ್ಟ. ಆಗಾಗ ತಿರಸ್ಕರಿಸಲು ಕಲಿಯಿರಿ, ಮತ್ತು ದಿನಕ್ಕೆ ನಿಮ್ಮ 8 ಗಂಟೆಗಳನ್ನು ಅಷ್ಟು ಸುಲಭವಾಗಿ ಬೇರೆಯವರಿಗೆ ನೀಡಬೇಡಿ.

ಇದನ್ನೂ ಓದಿ:Lifestyle Tips: ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ

ನಿಮಗಾಗಿ 8 ಗಂಟೆಗಳು:

ಈ 8 ಗಂಟೆ ನಿಮಗಾಗಿ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೆಲವು ಹವ್ಯಾಸಗಳಿರುತ್ತವೆ. ಹಾಗಾಗಿ ದಿನದ ಈ ಅವಧಿಯಲ್ಲಿ ಅದನ್ನು ಸಕ್ರಿಯಗೊಳಿಸಿ. ಬ್ಲಾಗಿಂಗ್, ಪುಸ್ತಕ ಓದುವುದು, ಗಿಟಾರ್ ನುಡಿಸುವುದು, ಚಲನಚಿತ್ರ ನೋಡುವುದು, ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವುದು, ಜಿಮ್​​ಗೆ ಹೋಗುವುದು. ಹೊಸ ವಿಷಯಗಳನ್ನು ಕಲಿಯುವುದು. ಹೀಗೆ ನಿಮಗಿಷ್ಟವಾಗುವಂತ ಕೆಲಸಗಳನ್ನು ಮಾಡಿ. ಈ ಸಮಯವು ನಿಮ್ಮ ಖಾಸಗಿ ಜೀವನಕ್ಕಾಗಿಯೇ ಮೀಸಲಾಗಿರಬೇಕು. ನಿಮ್ಮ ಕುಟುಂಬ, ಸ್ನೇಹಿತರು ಹೀಗೆ ನಿಮ್ಮವರಿಗೆ ನೀಡಲು ಈ ಸಮಯವನ್ನು ಬಳಸಿಕೊಳ್ಳಬೇಕು. ಜೊತೆಗೆ ನಿಮ್ಮ ದಿನದ ಒತ್ತಡವನ್ನು ಕಡಿಮೆ ಮಾಡುವ ಮತ್ತು ನಿಮ್ಮ ಆರೋಗ್ಯವನ್ನು ಹೆಚ್ಚಿಸುವ ಕೆಲಸಗಳನ್ನು ಮಾಡುವುದು ಒಳ್ಳೆಯದು. ಅಥವಾ ಸಣ್ಣ ಪ್ರಯಾಣ, ಅಡುಗೆ ಹೀಗೆ ನೀವು ಬಯಸಿದ ಕೆಲಸಗಳನ್ನು ಈ ಸಮಯದಲ್ಲಿ ನೀವು ಮಾಡಬಹುದು.

8 ಗಂಟೆಗಳ ನಿದ್ರೆ

ಯಾವುದೇ ವೈದ್ಯರು ಮತ್ತು ವೈದ್ಯಕೀಯ ಸಂಶೋಧನೆಗಳು ಮನುಷ್ಯನಿಗೆ ಒಂದು ದಿನದಲ್ಲಿ ಸುಮಾರು 8 ಗಂಟೆಗಳ ನಿದ್ರೆಯ ಅಗತ್ಯವಿದೆ ಎಂದು ಸೂಚಿಸುತ್ತಿವೆ. ನಿಯಮಿತವಾಗಿ 8 ಗಂಟೆಗಳ ನಿದ್ರೆ ಮಾಡದಿರುವುದು ಆರೋಗ್ಯಕ್ಕೆ ಸಾಕಷ್ಟು ಅಪಾಯಗಳನ್ನು ತರುತ್ತದೆ. ಹಾಗಾಗಿ ದಿನದ ಈ ಗಂಟೆಯನ್ನು ನೀವು ಚೆನ್ನಾಗಿ ನಿದ್ರೆ ಮಾಡಲು ಬಳಸಿಕೊಳ್ಳಿ. ಈ 8+8+8 ಸೂತ್ರಗಳನ್ನು ಸರಿಯಾಗಿ ಪಾಲಿಸುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಜೊತೆಗೆ ಸಮಯದ ಸದುಪಯೋಗವೂ ಆಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ