Monsoon health tip: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹಾರೋಗ್ಯವನ್ನು ಕಾಪಾಡಲು ಸಹಕಾರಿ ಈ ಯೋಗಭಂಗಿಗಳು

ಸಾಮಾನ್ಯವಾಗಿ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯು ಕುಂದಿಹೋಗುತ್ತದೆ. ಅದೇ ಕಾರಣದಿಂದ ಹೆಚ್ಚಾಗಿ ಜನರು ಕಾಲೋಚಿತ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸರಿಯಾದ ಆಹಾರಕ್ರಮವನ್ನು ಪಾಲಿಸಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಸರಿಯಾದ ಆಹಾರ ಕ್ರಮಗಳ ಜೊತೆಗೆ ಈ ಕೆಲವೊಂದು ಯೋಗಭಂಗಿಗಳೂ ಕೂಡಾ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಆರೋಗ್ಯಕರವಾಗಿರಲ ಬಯಸಿದರೆ ಇಂದಿನಿಂದಲೇ ಈ ಕೆಲವು ಯೋಗಾಸನವನ್ನು ಪ್ರಾರಂಭಿಸಿ.

Monsoon health tip: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹಾರೋಗ್ಯವನ್ನು ಕಾಪಾಡಲು ಸಹಕಾರಿ ಈ ಯೋಗಭಂಗಿಗಳು
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 04, 2023 | 7:11 PM

ಮಳೆಗಾಲವು ಮನಸ್ಸಿಗೆ ನೆಮ್ಮದಿ ಮತ್ತು ಆನಂದವನ್ನು ನೀಡುವ ಸಮಯವಾಗಿದೆ ನಿಜ. ಆದರೆ ಈ ತಂಪಾದ ವಾತಾವರಣ ಅನೇಕ ಕಾಲೋಚಿತ ಕಾಯಿಲೆಗಳನ್ನು ಕೂಡಾ ಹೊತ್ತು ತರುತ್ತದೆ. ಈ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯ ಕೊರತೆಯಿಂದಾಗಿ ಹಲವರು ಜ್ವರ, ಶೀತ, ಕೆಮ್ಮು, ನೆಗಡಿ, ಗಂಟಲು ನೋವು ಮುಂತಾದ ಕಾಲೋಚಿತ ಕಾಯಿಲೆಗಳು ಮತ್ತು ಸೋಂಕುಗಳಿಗೆ ತುತ್ತಾಗುತ್ತಾರೆ. ಇನ್ನೂ ಕೆಲವರು ಈ ರೋಗಗಳು ಬಾರದಂತೆ ಇರಲು ಹಲವು ಮುನ್ನಚ್ಚರಿಕಾ ಕ್ರಮಗಳನ್ನು ವಹಿಸುತ್ತಾರೆ. ನಿಮಗೆ ಗೊತ್ತಾ ಕೆಲವೊಂದು ಯೋಗಾಸನಗಳನ್ನು ಮಾಡುವ ಮೂಲಕ ಈ ಮಾನ್ಸೂನ್ ಸಮಯದಲ್ಲಿ ಕಾಯಿಲೆಗಳು ಸುಳಿಯದಂತೆ ನೋಡಿಕೊಳ್ಳಬಹುದು. ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಆಗುವ ಬಹುಮುಖ ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಂತೆ ಈ ಮಾನ್ಸೂನ್ ಸಮಯದಲ್ಲಿ ರೋಗನಿರೋಧಕ ಶಕ್ತಿಯ ಕುಗ್ಗುವಿಕೆಯ ಕಾರಣದಿಂದ ಹೆಚ್ಚಿನವರು ಕಾಲೋಚಿತ ಕಾಯಿಲೆಗಳಿಗೆ ಹಾಗೂ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಸೂಕ್ತ ಯೋಗಾಭ್ಯಾಸ ಮಾಡುವ ಮೂಲಕ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಹಾಗಿದ್ದರೆ ಮಳೆಗಾಲದಲ್ಲಿ ರೋಗಗಳಿಂದ ಮುಕ್ತಿ ಪಡೆಯಲು ಸೂಕ್ತವಾದ ಯೋಗಾಸನಗಳು ಯಾವುದೆಂಬುದನ್ನು ನೋಡೋಣಾ.

ಮಾನ್ಸೂನ್ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಈ ಯೋಗಭಂಗಿಗಳು:

ಕಪಾಲಭಾತಿ:

ಕಪಾಲಭಾತಿ ಉಸಿರಾಟದ ವ್ಯಾಯಾಮವಾಗಿದ್ದು, ಅದು ಉಸಿರಾಟ ವ್ಯವಸ್ಥೆಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ಮಾನ್ಸೂನ್ ಸಮಯದಲ್ಲಿ ಈ ಶಕ್ತಿಯುತ ಕಪಾಲಭಾತಿ ಪ್ರಾಣಾಯಾಮ ಮಾಡುವುದು ಅತ್ಯಗತ್ಯ. ಏಕೆಂದರೆ ಇದು ನಮ್ಮ ಶ್ವಾಸಕೋಶದ ಉಸಿರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಪ್ರಯೋಜನಗಳ ಹೊರತಾಗಿ ಕಪಾಲಭಾತಿ ನಮ್ಮ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

ಪ್ರಾಣಾಯಾಮ:

ಪ್ರಾಣಾಯಾಮವು ವ್ಯವಸ್ಥಿತ ಉಸಿರಾಟದ ವ್ಯಾಯಾಮವಾಗಿದ್ದು, ಅದು ಶ್ವಾಸಕೋಶವನನು ಬಲಪಡಿಸುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಸಂಪೂರ್ಣವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಪ್ರಾಣಾಯಾಮವು ಆಳವಾದ ಉಸಿರಾಟದ ಅಭ್ಯಾಸವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಹಾಗೂ ಎಲ್ಲಾ ರೀತಿಯ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ಸೋಂಕುಗಳು ಮತ್ತು ಅಲರ್ಜಿಗಳು ಶ್ವಾಸಕೋಶದ ಮೂಲಕ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ಪ್ರಾಣಾಯಾಮವನ್ನು ಮಾಡುವ ಮೂಲಕ ಸೋಂಕುಗಳು ದೇಹ ಪ್ರವೇಶಿಸದಂತೆ ನೋಡಿಕೊಳ್ಳಬಹುದು.

ಸ್ವನಾಸನಾ:

ಸ್ವನಾಸನವು ತಲೆಕೆಳಗಾದ ಯೋಗ ಭಂಗಿಯಾಗಿದ್ದು, ಇದು ನಮ್ಮ ದೇಹದ ಮೇಲೆ ಗುರುತ್ವಾಕರ್ಷಣೆಯ ಪ್ರಭಾವವನ್ನು ಹಿಮ್ಮೆಟ್ಟಿಸುತ್ತದೆ. ಹಾಗೂ ರಕ್ತ ಮತ್ತು ದುಗ್ಧರಸವನ್ನು ವಿರುದ್ಧ ದಿಕ್ಕಿಲ್ಲಿ ಹರಿಯುವಂತೆ ಮಾಡುತ್ತದೆ. ಇದು ಹೃದಯದ ಒತ್ತಡವನ್ನು ತೆಗದುಹಾಕಲು ಮತ್ತು ನಮ್ಮ ಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Monsoon Health Tips: ಮಳೆಯಲ್ಲಿ ನೆಂದ ಕೂಡಲೇ ಏನು ಮಾಡಬೇಕು? ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

ಬಂಧಾನಸ:

ಬಂಧಾಸನಕ್ಕೆ ಸ್ವಲ್ಪ ಅಭ್ಯಾಸದ ಅಗತ್ಯವಿದೆ. ಆದರೆ ಒಮ್ಮೆ ನೀವು ಅದನ್ನು ಕರಗತ ಮಾಡಿಕೊಂಡರೆ, ಅದು ನಿಮ್ಮ ದೇಹ ಮತ್ತು ಮನಸ್ಸಿಗೆ ಅಗಾಧ ಪ್ರಯೋಜನವನ್ನು ಒದಗಿಸುತ್ತದೆ. ಇದು ಎದೆ, ಕುತ್ತಿಗೆ, ಸೊಂಟ ಮತ್ತು ಬೆನ್ನುಮೂಳೆಯನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಲ್ಲದೆ ಆಸ್ತಮಾ, ಅಧಿಕ ರಕ್ತದೊತ್ತಡ, ಆತಂಕ, ಆಯಾಸವನ್ನು ನಿವಾರಿಸುತ್ತದೆ.

ನೌಕಾಸನ:

ನೌಕಾಸನವು ದೇಹದ ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಯೋಗಾಸನವಾಗಿದೆ. ನೌಕಾಸನ ನಮ್ಮ ಶ್ವಾಸಕೋಶ, ಯಕೃತ್ತು ಮತ್ತು ಮೇದೋಜ್ಜೀರಕಾಂಗ ಗ್ರಂಥಿಯನ್ನು ಬಲಡಿಸುತ್ತದೆ. ಅಲ್ಲದೆ ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಡುತ್ತದೆ. ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆa