Swami Vivekananda Death Anniversary 2023: ಸ್ವಾಮಿ ವಿವೇಕಾನಂದರ ಪುಣ್ಯತಿಥಿ; ಸ್ಪೂರ್ತಿದಾಯಕ ‘ವಿವೇಕ’ವಾಣಿ ಇಲ್ಲಿದೆ
"ಯೋಗ" ಮತ್ತು "ವೇದಾಂತ" ಪರಿಕಲ್ಪನೆಗಳನ್ನು ಪಾಶ್ಚಿಮಾತ್ಯ ಜಗತ್ತಿಗೆ ಪಸರಿಸುವಲ್ಲಿ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ. 1893 ರಲ್ಲಿ ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ನೀಡಿದ ಉಪನ್ಯಾಸ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಹೆಸರುವಾಸಿಯಾದರು.
ಸ್ವಾಮಿ ವಿವೇಕಾನಂದರು(Swami Vivekananda) ಭಾರತ ಕಂಡ ಶ್ರೇಷ್ಠ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರು. ಯುವ ಜನತೆಗೆ ಅವರು ನೀಡಿರುವ ಸ್ಪೂರ್ತಿದಾಯಕ ನುಡಿಗಳು ಸಾಕಷ್ಟಿವೆ. 1902, ಜುಲೈ 4 ರಂದು ತನ್ನ 39 ನೇ ವಯಸ್ಸಿನಲ್ಲಿ ಸ್ವಾಮಿ ವಿವೇಕಾನಂದರು ನಿಧನರಾದರು. ಇಂದು(ಜುಲೈ 4) ವಿಶ್ವದಾದ್ಯಂತ ಸ್ವಾಮಿ ವಿವೇಕಾನಂದರ ಪುಣ್ಯತಿಥಿ(Death Anniversary)ಯನ್ನು ಆಚರಿಸಲಾಗುತ್ತಿದೆ. 1863, ಜನವರಿ 12ರಂದು ಕೋಲ್ಕತ್ತಾದಲ್ಲಿ ಜನಿಸಿದ ನರೇಂದ್ರನಾಥ ದತ್ತಾ ಮುಂದೆ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ತನ್ನ ಆಧ್ಯಾತ್ಮಿಕತೆಯ ಮಾರ್ಗದ ಮೂಲಕ ಸ್ವಾಮಿ ವಿವೇಕಾನಂದರರಾಗಿ ಹೆಸರು ಗಳಿಸಿದರು. ಇವರ ಗುರು ರಾಮಕೃಷ್ಣ ಪರಮಹಂಸರು.
“ಯೋಗ” ಮತ್ತು “ವೇದಾಂತ” ಪರಿಕಲ್ಪನೆಗಳನ್ನು ಪಾಶ್ಚಿಮಾತ್ಯ ಜಗತ್ತಿಗೆ ಪಸರಿಸುವಲ್ಲಿ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ. 1893 ರಲ್ಲಿ ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ನೀಡಿದ ಉಪನ್ಯಾಸ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಹೆಸರುವಾಸಿಯಾದರು. ಸ್ವಾಮಿ ವಿವೇಕಾನಂದರ ಪುಣ್ಯತಿಥಿಯಂದು, ಅವರ ಕೊಡುಗೆಯನ್ನು ಸ್ಮರಿಸೋಣ.
ಇದನ್ನೂ ಓದಿ: ಈ ಕೆಟ್ಟ ಅಭ್ಯಾಸಗಳು ನಿಮ್ಮ ಮನಸ್ಸಿನ ಶಾಂತಿಗೆ ಭಂಗ ಉಂಟುಮಾಡಬಹುದು
ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ‘ವಿವೇಕ’ವಾಣಿಗಳು:
- ಏಳಿ! ಎದ್ದೇಳಿ!! ಗುರಿ ಮುಟ್ಟುವ ವರೆಗೂ ನಿಲ್ಲದಿರಿ.
- ನಮ್ಮ ದು:ಖಗಳಿಗೆ ನಾವೇ ಜವಾಬ್ದಾರರು ಬೇರಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.
- ಯಾವುದಾದರೂ ನಿಮ್ಮನ್ನು ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ದುರ್ಬಲಗೊಳಿಸಿದರೆ, ಅದನ್ನು ವಿಷದಂತೆ ತಿರಸ್ಕರಿಸಿ.
- ನೀವು ಬಲಶಾಲಿ ಎಂದು ಭಾವಿಸಿದರೆ, ನೀವು ಬಲಶಾಲಿಯಾಗುತ್ತೀರಿ.
- ಸಾಧ್ಯವೇ ಇಲ್ಲ ಅಂದುಕೊಂಡರೆ ಏನನ್ನೂ ಸಾಧಿಸಲಾಗದು. ತನ್ನಿಂದ ಸಾಧ್ಯ ಎಂದು ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.
- ಗುರು ಎಂದರೆ ವ್ಯಕ್ತಿಯಲ್ಲ, ಅದು ಒಂದು ಶಕ್ತಿ. ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಬೆಳಕನ್ನು ನೀಡುವವರೇ ಗುರುಗಳು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:39 am, Tue, 4 July 23