Monsoon Hacks: ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಈ ಅಪಾಯ ಖಂಡಿತ, ಇಲ್ಲಿದೆ ತಜ್ಞರ ಸಲಹೆ

ಮಳೆಗಾಲದಲ್ಲಿ ವಾತಾವರಣದಲ್ಲಿನ ತೇವಾಂಶದ ಕಾರಣ ಬಟ್ಟೆಗಳು ಹೆಚ್ಚಾಗಿ ಸರಿಯಾಗಿ ಒಣಗದೆ ವಾಸನೆ ಬರಲಾರಂಭಿಸುತ್ತದೆ.ಅಲ್ಲದೆ ಈ ಋತುವಿನಲ್ಲಿ ಸೂಕ್ಷ್ಮಾಣುಗಳು ಬಟ್ಟೆಯ ಮೇಲೆ ಹೆಚ್ಚು ಸಂಗ್ರಹವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಕೆಲವು ಸರಳ ಸಲಹೆಗಳನ್ನು ಪಾಲಿಸಿ.

Monsoon Hacks: ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತೀರಾ? ಈ ಅಪಾಯ ಖಂಡಿತ, ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 03, 2023 | 4:49 PM

ಮಳೆಗಾಲ ಯಾರಿಗೆ ಇಷ್ಟವಿಲ್ಲ ಹೇಳಿ. ಈ ಋತುವಿನಲ್ಲಿನ ತಂಪಾದ ವಾತಾವರಣ, ಜಿಟಿಜಿಟಿ ಮಳೆ ಇವೆಲ್ಲವನ್ನೂ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಇಂತಹ ತಂಪಿನ ವಾತವಾರಣದಲ್ಲಿ ಬಟ್ಟೆಗಳನ್ನು ಒಣಗಿಸುವುದು ಒಂದು ದೊಡ್ಡ ಸವಾಲಾಗಿದೆ. ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸುವುದು ಹೇಗೆ ಎಂಬ ಚಿಂತೆ ಒಂದೆಡೆಯಾದರೆ, ಆ ಬಟ್ಟೆಗಳು ದುರ್ವಾಸನೆ ಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬುದು ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ. ವಾಸ್ತವವಾಗಿ ಮಳೆಯ ಸಮಯದಲ್ಲಿ ಕೊಳಕು ಶಿಲೀಂದ್ರಗಳು ಮತ್ತು ಬ್ಯಾಕೀರಿಯಾಗಳು ನಮ್ಮ ಬಟ್ಟೆಗಳ ಮೇಲೆ ಹೆಚ್ಚು ಸಂಗ್ರಹವಾಗುತ್ತದೆ. ಮತ್ತು ಇದರಿಂದ ನಾವು ಅನಾರೋಗ್ಯಕ್ಕೂ ಒಳಗಾಗಬಹುದು. ಇದರೊಂದಿಗೆ ಬಟ್ಟೆಗಳನ್ನು ಸರಿಯಾಗಿ ಒಣಗಿಸದಿದ್ದರೆ ದುರ್ವಾಸನೆ ಬರಲಾರಂಭಿಸುತ್ತದೆ. ಹಾಗಾಗಿ ಈ ಮಾನ್ಸೂನ್ ಋತುವಿನಲ್ಲಿ ಅಗತ್ಯವಾಗಿ ಬಟ್ಟೆಗಳ ಸುಚಿತ್ವವನ್ನು ಕಾಪಾಡಿಕೊಳ್ಳಬೇಕು.

ಮಳೆಗಾಲದಲ್ಲಿ ಬಟ್ಟೆಗಳು ತೇವ ಹಾಗೂ ಶಿಲೀಂದ್ರ ಮುಕ್ತವಾಗಿರಲು ಈ ಸರಳ ಸಲಹೆಗಳನ್ನು ಪಾಲಿಸಿ:

ಒದ್ದೆಯಾದ ಬಟ್ಟೆಗಳನ್ನು ಆ ತಕ್ಷಣ ತೊಳೆಯಿರಿ:

ಮಳೆಗಾಲದಲ್ಲಿ ನೀವು ಹೊರಗಡೆ ಒದ್ದೆಯಾಗಿ ಬಂದರೆ, ಆ ಬಟ್ಟೆಗಳನ್ನು ತಕ್ಷಣ ಒಗೆಯಿರಿ. ಅಲ್ಲದೆ ಒದ್ದೆಯಾದ ಮತ್ತು ಕೊಳಕು ಬಟ್ಟೆಗಳನ್ನು ನಾಳೆ ಅಥವಾ ಮುಂದಿನ ಬಾರಿ ಒಗೆಯುವ ಸಲುವಾಗಿ ಲಾಂಡ್ರಿ ಬ್ಯಾಗ್ ಅಥವಾ ಬಕೆಟ್​​ಗಳಲ್ಲಿ ಹಾಕಿಡುವುದು ಕೆಟ್ಟ ಅಭ್ಯಾಸವಾಗಿದೆ. ವಾಸ್ತವವಾಗಿ ಹೀಗೆ ಮಾಡುವುದರಿಂದ, ಸೂಕ್ಷ್ಮಾಣು ಜೀವಿಗಳು ಮತ್ತು ಕೆಟ್ಟ ವಾಸನೆಯು ಬಟ್ಟೆಯ ಮೇಲೆ ಹಾಗೆಯೇ ಉಳಿದುಕೊಳ್ಳುತ್ತದೆ. ಅಲ್ಲದೆ ಇದರಿಂದ ಬಟ್ಟೆಯ ಗುಣಮಟ್ಟವೂ ಹಾಳಾಗಿಬಿಡುತ್ತದೆ. ಆದ್ದರಿಂದ ಒದ್ದೆ ಬಟ್ಟೆಗಳನ್ನು ತಕ್ಷಣ ಒಗೆಯುವ ಮೂಲಕ ಅವುಗಳ ಸ್ವಚ್ಛತೆಯನ್ನು ಕಾಪಾಡಿ.

ಪರಿಮಳಯುಕ್ತ ಫ್ಯಾಬ್ರಿಕ್ ಕಂಡಿಷನರ್ ಬಳಸಿ:

ಮಳೆಗಾಲದಲ್ಲಿ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು, ಬಟ್ಟೆ ಒಗೆದ ನಂತರ ಫ್ಯಾಬ್ರಿಕ್ ಕಂಡಿಷನರ್ ಬಳಸಿ. ಹೀಗೆ ಮಾಡುವುದರಿಂದ ಮಳೆಗಾಲದಲ್ಲಿ ಬಟ್ಟೆಗಳಿಂದ ಬರುವ ದುರ್ವಾಸನೆಯನ್ನು ತಡೆಯಬಹುದು. ಕಂಫರ್ಟ್, ಸಾಫ್ಟ್ ಟಚ್ ಇತ್ಯಾದಿ ಫ್ಯಾಬ್ರಿಕ್ ಕಂಡಿಷನರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಳೆಗಾಲದಲ್ಲಿ ಮಾತ್ರವಲ್ಲದೆ ಇತರ ಋತುವಿನಲ್ಲೂ ಬಟ್ಟೆಗಳಿಂದ ಸೂಸುವ ವಾಸನೆಯನ್ನು ತಡೆಗಟ್ಟಲು ಪರಿಮಳಯುಕ್ತ ಮಾರ್ಜಕಗಳನ್ನು ಬಳಸುವುದು ಸೂಕ್ತವಾಗಿದೆ.

ಇದನ್ನೂ ಓದಿ:Healthy soups for the Monsoon: ಮಳೆಗಾಲದಲ್ಲಿ ಈ ಸೂಪ್​​ಗಳನ್ನು ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ

ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಲು ಬಿಡಿ:

ಬಟ್ಟೆ ಒಗೆದ ಬಳಿಕ ಅವುಗಳನ್ನು ಕೈಗಳಿಂದ ಹಿಂಡುವ ಬದಲು ವಾಷಿಂಗ್ ಮೆಷಿನ್ ನಲ್ಲಿರುವ ಡ್ರೆಯರ್ ನಲ್ಲಿ ಹಾಕಿಬಿಡಿ. ಹೀಗೆ ಮಾಡುವುದರಿಂದ ಬಟ್ಟೆಗಳು ಬೇಗನೆ ಒಣಗುತ್ತವೆ. ಅಲ್ಲದೆ ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ತೊಳೆದ ಬಟ್ಟೆಗಳು ಸಂಪೂರ್ಣವಾಗಿ ಒಣಗಿದ ಬಳಿಕ ಅವುಗಳಿಗೆ ಇಸ್ತ್ರಿ ಮಾಡಿ ನಂತರವೇ ಅವುಗಳನ್ನು ಕಪಾಟುಗಳಲ್ಲ್ಲಿ ಜೋಡಿಸಿರಿ.

ಕರ್ಪೂರವನ್ನು ಬಳಸಲು ಮರೆಯದಿರಿ:

ಮಳೆಗಾಲದಲ್ಲಿ ಬಟ್ಟೆ, ಬೂಟುಗಳು ಸ್ವಲ್ಪ ಒದ್ದೆಯಾದರೂ ಅವುಗಳಿಂದ ದುರ್ವಾಸನೆ ಹೊರಸೂಸುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಸುಲಭವಾದ ಮಾರ್ಗವೆಂದರೆ ಕೆಲವು ಕರ್ಪೂರದ ತುಂಡುಗಳನ್ನು ಕಪಾಟುಗಳು, ಶೂ ಕ್ಯಾಬಿನೆಟ್ ಗಳಲ್ಲಿ ಇಡಿ. ಹೀಗೆ ಮಾಡುವುದರಿಂದ ದುರ್ವಾಸೆಯನ್ನು ಹೋಗಲಾಡಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ