Optical Illusion: ನೀವು ಜೀವನದಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ಕೊಡುತ್ತೀರಿ ಎಂಬುದನ್ನು ತಿಳಿಸುವ ಚಿತ್ರವಿದು
ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಈ ಟೆಸ್ಟ್‌ಗಳ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ತಿಳಿದುಕೊಳ್ಳಬಹುದು. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಸೌಂದರ್ಯ, ಸ್ವಾತಂತ್ರ್ಯ ಸ್ವಾಭಿಮಾನ ನೀವು ಜೀವನದಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ನೀಡುವವರು ಎಂಬುದನ್ನು ಪರೀಕ್ಷಿಸಿ.

ವ್ಯಕ್ತಿತ್ವ ಪರೀಕ್ಷೆಯ (Personality Test) ವಿಧಾನಗಳ ಮೂಲಕ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷಿಸಿಕೊಳ್ಳಬಹುದು. ನಾನು ಅಂತರ್ಮುಖಿಯೇ, ಬಹಿರ್ಮುಖಿಯೇ, ದೃಢ ನಿಶ್ಚಯವನ್ನು ಹೊಂದಿರುವವರೇ, ಸ್ವಾಭಿಮಾನಿಗಳೇ, ಕೋಷಿಷ್ಠರೇ ಹೀಗೆ ನಮ್ಮೊಳಗಿನ ನಿಗೂಢ ವ್ಯಕ್ತಿತ್ವವನ್ನು ನಾವು ತಿಳಿದುಕೊಳ್ಳಬಹುದು. ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ನಿಮಗೆ ಮೊದಲು ಯಾವ ಅಂಶ ಕಾಣಿಸುತ್ತದೆ ಎಂಬುದರ ಮೇಲೆ ಸೌಂದರ್ಯ, ಸ್ವಾಭಿಮಾನ, ಸ್ವಾತಂತ್ರ್ಯ ಇವುಗಳಲ್ಲಿ ನೀವು ಯಾವುದಕ್ಕೆ ಹೆಚ್ಚು ಬೆಲೆ ನೀಡುತ್ತೀರಿ ಎಂಬುದನ್ನು ಪರೀಕ್ಷಿಸಿ.
ಈ ಚಿತ್ರದ ಮೂಲಕ ನೀವು ಜೀವನದಲ್ಲಿ ಯಾವುದಕ್ಕೆ ಬೆಲೆ ಕೊಡುತ್ತೀರಿ ತಿಳಿಯಿರಿ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮಹಿಳೆ, ನದಿ ಮತ್ತು ಸೇತುವೆ ಈ ಮೂರು ಅಂಶಗಳಿದ್ದು, ಇದರಲ್ಲಿ ನೀವು ಯಾವುದನ್ನು ಮೊದಲು ಗಮನಿಸುತ್ತೀರಿ ಎಂಬುದರ ಆಧಾರದ ಮೇಲೆ ನೀವು ನಿಮ್ಮ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ನೀಡುತ್ತೀರಿ ಎಂಬುದನ್ನು ಪರೀಕ್ಷಿಸಿ.
ಮಹಿಳೆಯನ್ನು ನೋಡಿದರೆ: ಈ ಚಿತ್ರದಲ್ಲಿ ನೀವು ಮೊದಲು ಮಹಿಳೆಯನ್ನು ಗಮನಿಸಿದರೆ ನೀವು ಸೌಂದರ್ಯ, ವೈಯಕ್ತಿಕ ಅಭಿವ್ಯಕ್ತಿ ಮತ್ತು ಭಾವನೆಗಳಿಗೆ ಬೆಲೆ ಕೊಡುವವರು ಎಂದರ್ಥ. ಅಲ್ಲದೆ ನೀವು ಆತ್ಮವಿಶ್ವಾಸವನ್ನು ಸಹ ಗೌರವಿಸುವ ವ್ಯಕ್ತಿಯಾಗಿರುತ್ತೀರಿ. ವೈಯಕ್ತಿಕ ಘನೆತ ಮತ್ತು ಸ್ವಾಭಿಮಾನವನ್ನು ಗೌರವಿಸುವ ನೀವು ಯಾವಾಗಲೂ ನಿಮ್ಮ ಅತ್ಯುತ್ತಮ ಆವೃತ್ತಿಯನ್ನು ಎಲ್ಲರೆದುರಲ್ಲೂ ಪ್ರಸ್ತುತಪಡಿಸುತ್ತೀರಿ.
ನದಿಯನ್ನು ನೋಡಿದರೆ: ನೀವು ಈ ಚಿತ್ರದಲ್ಲಿ ಮೊದಲು ನದಿಯನ್ನು ಗಮನಿಸಿದರೆ ನೀವು ಕೆಲಸ, ಗುರಿಗಳು ಮತ್ತು ಸಾಧನೆಗೆ ಹೆಚ್ಚಿನ ಬೆಲೆ ನೀಡುವವರು ಎಂದರ್ಥ. ನೀವು ಎಷ್ಟೇ ಕಷ್ಟವಾದರೂ ಸಹ ಕೆಲಸ, ವೈಯಕ್ತಿಕ ಆದ್ಯತೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುವವರು. ನೀವು ಯಾವಾಗಲೂ ನಿಮ್ಮ ಗಮನವನ್ನು ಪ್ರಗತಿ, ಸಾಧನೆಯತ್ತ ಕೇಂದ್ರೀಕರಿಸುತ್ತೀರಿ. ಆದ್ದರಿಂದ ನಿಮಗೆ ನಿಮ್ಮ ಸುತ್ತಮುತ್ತಲಿನವರೊಂದಿಗೆ ಸಂಪರ್ಕದಲ್ಲಿರಲು ಸ್ವಲ್ಪ ಕಷ್ಟಕರವಾಗಬಹುದು.
ಇದನ್ನೂ ಓದಿ: ಮರ, ಸಿಂಹ; ಈ ಚಿತ್ರವೇ ಹೇಳುತ್ತೆ ನೀವು ನಿಮ್ಮ ಪ್ರೇಮ ಸಂಬಂಧ, ವ್ಯಕ್ತಿತ್ವ ಹೇಗಿದೆಯೆಂದು
ಸೇತುವೆಯನ್ನು ನೋಡಿದರೆ: ನೀವು ಈ ಚಿತ್ರದಲ್ಲಿ ಸೇತುವೆಯನ್ನು ಗಮನಿಸಿದರೆ ನೀವು ಸ್ವಾತಂತ್ರ್ಯ ಮತ್ತು ಭಾವನಾತ್ಮಕ ಅಂತರವನ್ನು ಗೌರವಿಸುವ ವ್ಯಕ್ತಿ ಎಂದರ್ಥ. ತಾರ್ಕಿಕ ಚಿಂತಕರು ಹಾಗೂ ಸ್ವಾಭಿಮಾನಿಗಳಾದ ನೀವು ನಿಮ್ಮ ಭಾವನೆಗಳನ್ನು ಅಷ್ಟು ಬೇಗ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಇತರರಿಂದ ಸಾಧ್ಯವಾದಷ್ಟು ಅಂತರವನ್ನು ಕಾಪಾಡಿಕೊಳ್ಳಲು ನೀವು ಇಷ್ಟಪಡುತ್ತೀರಿ. ಇದರರ್ಥ ನೀವು ಇತರರ ಬಗ್ಗೆ ಕಾಳಜಿ ಹೊಂದಿಲ್ಲವೆಂದಲ್ಲ. ನೀವು ಇತರರೊಂದಿಗೆ ಬೆರೆಯಲು, ಭಾವನೆಗಳನ್ನು ಹಂಚಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








