Personality Test: ನೀವು ಮುಗ್ಧರೇ; ನಿಮ್ಮ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮೆದುಳಿಗೆ ವ್ಯಾಯಾಮವನ್ನು ನೀಡುವ ಮೋಜಿನ ಆಟ ಮಾತ್ರವಲ್ಲದೆ ಇದು, ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಸುವ ವ್ಯಕ್ತಿತ್ವ ಪರೀಕ್ಷೆಯ ಒಂದು ವಿಧವೂ ಆಗಿದೆ. ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಇಂತಹ ಸಾಕಷ್ಟು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ನಿಮಗೆ ಮೊದಲು ಯಾವ ಅಂಶ ಕಾಣಿಸಿತು ಎಂಬುದರ ಮೇಲೆ ನಿಮ್ಮ ಮನಸ್ಥಿತಿ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.

ಈಗಂತೂ ವ್ಯಕ್ತಿತ್ವ ಪರೀಕ್ಷೆಗಳು (Personality Test) ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿವೆ. ವೈಜ್ಞಾನಿಕವಾಗಿ ಸಾಬೀತಾಗಿಲ್ಲದಿದ್ದರೂ ಇದು ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ತಿಳಿಯುವ ಆಕರ್ಷಕ ಮತ್ತು ಮೋಜಿನ ಪರೀಕ್ಷೆಯಾಗಿದೆ. ದೇಹಕಾರ, ಫೋನ್ ಹಿಡಿದುಕೊಳ್ಳುವ ಶೈಲಿ, ನಡಿಗೆ, ಬರವಣಿಗೆಯ ಶೈಲಿಯಿಂದ ಹಿಡಿದು ಆಪ್ಟಿಕಲ್ ಇಲ್ಯೂಷನ್ (Optical illusion) ಪರ್ಸನಾಲಿಟಿ ಟೆಸ್ಟ್‌ವರೆಗೆ ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳಿವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಅದರಲ್ಲಿ ತಲೆ ಬುರುಡೆ ಅಥವಾ ಕಿಟಕಿಯಿಂದ ಹೊರ ನೋಡುತ್ತಿರುವ ಹುಡುಗಿ ಇವೆರಡರಲ್ಲಿ ನಿಮಗೆ ಯಾವ ಅಂಶ ಮೊದಲು ಕಾಣಿಸಿತು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿ.
ನಿಮ್ಮ ಮನಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು:
ಈ ಮೇಲಿನ ಚಿತ್ರದಲ್ಲಿ ತಲೆ ಬುರುಡೆ ಮತ್ತು ಕಿಟಕಿಯಿಂದ ಹೊರ ನೋಡುತ್ತಿರುವ ಹುಡುಗಿ ಇವೆರಡು ಅಂಶಗಳಿವೆ. ಇದರಲ್ಲಿ ಕೆಲವರಿಗೆ ಹುಡುಗಿ ಕಾಣಿಸಿದರೆ, ಇನ್ನೂ ಕೆಲವರಿಗೆ ಮೊದಲ ನೋಟದಲ್ಲಿ ತಲೆಬುರುಡೆ ಕಾಣಿಸಬಹುದು. ಇದರಲ್ಲಿ ನಿಮಗೆ ಯಾವ ಅಂಶ ಕಾಣಿಸಿತು ಎಂಬುದ ಮೇಲೆ ನೀವು ಮುಗ್ಧರೇ, ವಾಸ್ತವಿಕ ಮನಸ್ಥಿತಿಯ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.
ತಲೆ ಬುರುಡೆ:

ಈ ಚಿತ್ರದಲ್ಲಿ ನೀವು ಮೊದಲು ತಲೆ ಬುರುಡೆಯನ್ನು ಗಮನಿಸಿದರೆ, ನೀವು ನೀವು ಪ್ರಾಯೋಗಿಕ ಮನಸ್ಥಿತಿಯನ್ನು ಹೊಂದಿರುವ ವಾಸ್ತವವಾದಿಗಳೆಂದು ಅರ್ಥ. ಬಲವಾದ ಬುದ್ಧಿಶಕ್ತಿಯನ್ನು ಹೊಂದಿರುವ ಹಾಗೂ ತೀಕ್ಷ್ಣ ಚಿಂತಕರಾಗಿರುವ ನೀವು ಪ್ರಾಯೋಗಿಕ ದೃಷ್ಟಿಕೋನವನ್ನು ಹೊಂದಿರುವವರಾಗಿದ್ದೀರಿ. ತಂತ್ರ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುವ ನೀವು ಕೆಲಸ ಅಥವಾ ಸಂಬಂಧವೇ ಆಗಿರಬಹುದು, ಇವೆರಡರಲ್ಲೂ ಬಹಳ ಸಂಯಮವನ್ನು ಹೊಂದಿರುತ್ತೀರಿ. ಅಲ್ಲದೆ ನೀವು ನೀವು ಸವಾಲುಗಳನ್ನು ಎದುರಿಸುವ ಹಾಗೂ ಹೊಸ ಹೊಸ ವಿಷಯಗಳನ್ನು ಕಲಿಯುವ ಹೆಚ್ಚಿನ ಬಯಕೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದೀರಿ.
ಇದನ್ನೂ ಓದಿ: ಈ ಚಿತ್ರದಲ್ಲಿ ನಿಮ್ಗೆ ಅತಿ ಸುಂದರವಾಗಿ ಕಾಣಿಸುವ ಯುವತಿ ನಿಮ್ಮ ಜೀವನದ ರಹಸ್ಯವನ್ನು ಬಹಿರಂಗಪಡಿಸುತ್ತಾಳಂತೆ
ಕಿಟಕಿಯಿಂದ ಹೊರ ನೋಡುತ್ತಿರುವ ಹುಡುಗಿ:

ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೆ ಕಿಟಕಿಯಿಂದ ಹೊರ ನೋಡುತ್ತಿರುವ ಹುಡುಗಿ ಕಾಣಿಸಿದರೆ, ನೀವು ಮುಗ್ಧತೆಯನ್ನು ಹೊಂದಿರುವ ವ್ಯಕ್ತಿಯೆಂದು ಅರ್ಥ. ಅಪಾಯವನ್ನು ನಿರ್ಲಕ್ಷ್ಯಿಸುವ ನೀವು ನಕಾರಾತ್ಮಕ ಪರಿಣಾಮಗಳನ್ನು ಎದುರಿಸಲು ಸಿದ್ಧರಿರುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ನೀವು ತುಂಬಾ ಮುಗ್ಧತೆಯ ಸ್ವಭಾವವನ್ನು ಹೊಂದಿರುವವರು. ಇನ್ನೊಂದು ಏನೆಂದರೆ ನೀವು ತುಂಬಾ ವಿಶ್ವಾಸಾರ್ಹ ಮತ್ತು ಮುಕ್ತ ಮನಸ್ಸಿನವರೂ ಹೌದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







