Krishna Janmashtami 2025: ಶ್ರೀಕೃಷ್ಣನ ಮೈ ಬಣ್ಣ ನೀಲಿ ಯಾಕೆ? ಇದೇ ನೋಡಿ ಕಾರಣ
ಬಾಲ್ಯದಲ್ಲಿ ತನ್ನ ಲೀಲೆಗಳ ಮೂಲಕ ಅಚ್ಚರಿ ಮೂಡಿಸಿದ ಶ್ರೀ ಕೃಷ್ಣನನ್ನು ನೀಲಿ ಮೇಘ ಶ್ಯಾಮ ಎಂದು ಕರೆಯುತ್ತಾರೆ. ಹೌದು ಪುರಾಣಗಳಲ್ಲಿ ಶ್ರೀಕೃಷ್ಣನನ್ನು ಎಲ್ಲಾ ಕಡೆಯೂ ನೀಲಿ ಮೈಬಣ್ಣದಿಂದ ಚಿತ್ರಿಸುವುದನ್ನು ನೀವು ನೋಡಿರಬಹುದು. ಆದರೆ ಕೃಷ್ಣನ ಮೈ ಬಣ್ಣ ನೀಲಿ ಯಾಕೆ? ಏನಿದರ ಒಳ ಅರ್ಥ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲರ ಮನೆಯಲ್ಲಿ ಹಬ್ಬಕ್ಕೆ ಸಕಲ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಪ್ರತಿ ವರ್ಷವು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು (Shri Krishna Janmashtami) ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 16 ರಂದು ಆಚರಿಸಲಾಗುತ್ತಿದೆ. ಕೃಷ್ಣ ಎಂದರೆ ನಮ್ಮ ಕಣ್ಣ ಮುಂದೆ ಬರುವುದು ಕೈಯಲ್ಲಿ ಕೊಳಲನು ಊದುತಾ ಗೋಪಿಕೆಯರ ಮನಸ್ಸು ಕದ್ದ ಕಳ್ಳ ಕೃಷ್ಣ. ಆದರೆ ಈ ಕೃಷ್ಣನನ್ನು ನೀಲ ಮೇಘ ಶ್ಯಾಮ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ಮುಕುಂದನನ್ನು ನೀಲಿ ಬಣ್ಣದಿಂದ ಚಿತ್ರಿಸಲಾಗಿದ್ದು, ಎಲ್ಲರ ನೆಚ್ಚಿನ ಕೃಷ್ಣನ ಮೈ ಬಣ್ಣ ನೀಲಿ ಎಂಬ ಈ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದ್ರೆ ಕೃಷ್ಣನ ಮೈ ಬಣ್ಣ ನೀಲಿ ಯಾಕೆ? ಎನ್ನುವುದು ನಿಮಗೆ ತಿಳಿದಿದೆಯೇ, ಈ ಕುರಿತಾದ ಮಾಹಿತಿ ಇಲ್ಲಿದೆ.
ಕೃಷ್ಣನ ಮೈ ಬಣ್ಣ ನೀಲಿಯೇ?
ಶ್ರೀಕೃಷ್ಣನದ್ದು ಮೈ ಬಣ್ಣ ನೀಲಿ ಎನ್ನಲಾಗಿದೆ. ಆದರೆ ಕೃಷ್ಣನ ಮೈ ಬಣ್ಣ ಪೂರ್ಣ ನೀಲಿಯಲ್ಲವಂತೆ. ಹಾಗಂತ ಕಪ್ಪು ಬಣ್ಣವೂ ಅಲ್ಲ. ಆದರೆ ಕೃಷ್ಣನ ಶಕ್ತಿಯ ಹಾಗೂ ಪ್ರಭೆಯ ನೀಲಿ ಬಣ್ಣವನ್ನು ಕಂಡವರು ಕೃಷ್ಣನನ್ನು ನೀಲಿ ಬಣ್ಣದಲ್ಲಿಯೇ ಗುರುತಿಸಿದ್ದಾರೆ. ಹೀಗಾಗಿ ಶ್ರೀಕೃಷ್ಣ ಪರಮಾತ್ಮನನ್ನು ನೀಲ ಮೇಘ ಶ್ಯಾಮ ಎಂದು ಕರೆಯಲಾಗುತ್ತದೆ.
ಶ್ರೀಕೃಷ್ಣನನ್ನು ನೀಲಿ ಬಣ್ಣದಲ್ಲಿ ಚಿತ್ರಿಸಲು ಇದು ಕಾರಣ
- ಶ್ರೀಕೃಷ್ಣನು ವಿಷ್ಣುವಿನ ಅವತಾರ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ವಿಷ್ಣುವನ್ನು ನೀಲಿ ಬಣ್ಣದಿಂದ ಚಿತ್ರಿಸಲಾಗಿದೆ. ವಿಷ್ಣುವಿನ ಅವತಾರ ಶ್ರೀಕೃಷ್ಣನಾದ ಕಾರಣ ಆತನನ್ನು ಅದೇ ಬಣ್ಣದಿಂದ ಚಿತ್ರಿಸಲಾಗಿದೆ.
- ಕೃಷ್ಣನೆಂದರೆ ಆಧ್ಯಾತ್ಮಿಕ ಗುರು ಹಾಗೂ ಜ್ಞಾನದ ಮೂಲ ಎನ್ನಲಾಗಿದೆ. ಈ ನೀಲಿ ಬಣ್ಣವೂ ಆಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸುವ ಕಾರಣ, ಆತನಿಘು ನೀಲಿ ಬಣ್ಣದಲ್ಲೇ ಗುರುತಿಸುವುದರ ಉದ್ದೇಶವೇ ಇದಾಗಿದೆ.
- ಶಾಂತಿ, ಪ್ರಶಾಂತತೆ, ಆಂತರಿಕ ಶಾಂತಿಯನ್ನು ಪ್ರತಿನಿಧಿಸುವುದು ಈ ನೀಲಿ ಬಣ್ಣ. ಕೃಷ್ಣನೆಂದರೆ ನಮ್ಮ ಕಣ್ಣ ಮುಂದೆ ಬರುವುದೇ ಸಮಸ್ಯೆಗಳನ್ನು ಪರಿಹರಿಸುವ ಗುಣ. ಈ ಗುಣದಿಂದಲೇ ಆತನನ್ನು ನೀಲಿ ಬಣ್ಣದಿಂದ ಚಿತ್ರಿಸಲು ಪ್ರಮುಖ ಕಾರಣವಾಗಿದೆ ಎನ್ನಬಹುದು.
ಇದನ್ನೂ ಓದಿ: Krishna Janmashtami 2025: ರಾಧ-ಕೃಷ್ಣ ವೇಷ ತೊಡುವುದಕ್ಕೆ ವಯಸ್ಸಿನ ಮಿತಿಯಿದೆಯೇ?
- ನೀಲಿ ಬಣ್ಣದ ಆಕಾಶ ಹಾಗೂ ಸಾಗರವನ್ನು ಸಂಕೇತಿಸುತ್ತದೆ. ಇದು ಅನಂತತೆ ಹಾಗೂ ವಿಶಾಲತೆ ಸೂಚಕವಾಗಿದೆ. ಹೀಗಾಗಿ ಈ ಬಣ್ಣದಿಂದ ಗುರುತಿಸಿದ್ದು, ಇದು ಶ್ರೀಕೃಷ್ಣನು ಸರ್ವವ್ಯಾಪ್ತಿಯಾಗಿದ್ದಾನೆ ಎನ್ನುವುದನ್ನು ಸೂಚಿಸುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








