Krishna Janmashtami
ಶ್ರೀ ಕೃಷ್ಣ ಜನ್ಮಾಷ್ಟಮಿ ದೇಶದಾದ್ಯಂತ ಆಚರಿಸಲ್ಪಡುವ ಹಿಂದೂಗಳ ಹಬ್ಬಗಳಲ್ಲಿ ಒಂದು. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿಯಂದು ಬೆಣ್ಣೆ ಕಳ್ಳ ಕೃಷ್ಣನು ಹುಟ್ಟಿದ ದಿನವಾಗಿದ್ದು, ಈ ಬಾರಿ ಆಗಸ್ಟ್ 26 ರಂದು ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದೆ. ಈಗಾಗಲೇ ಎಲ್ಲರ ಮನೆಯಲ್ಲಿ ಈ ಹಬ್ಬಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ. ಈ ದಿನದಂದು ಭಕ್ತರು ಉಪವಾಸವಿರುವ ಮೂಲಕ ಕೃಷ್ಣನನ್ನು ಆರಾಧಿಸುತ್ತಾರೆ. ಮನೆಯಲ್ಲಿ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ಮಾಡಿ ದೇವರಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ತಮ್ಮ ಮನೆಯ ಪುಟಾಣಿ ಮಕ್ಕಳಿಗೆ ರಾಧಾ ಕೃಷ್ಣ ವೇಷಗಳನ್ನು ಹಾಕಿ ಹೆತ್ತವರು ಸಂಭ್ರಮಿಸುತ್ತಾರೆ. ನಾಡಿನೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷ ಸ್ಟೋರಿಗಳನ್ನು ಓದಲು ಟಿವಿ 9 ನ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.