Krishna Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಡಕೆ ಹೊಡೆಯುವುದು ಯಾಕೆ? ಇದೇ ನೋಡಿ ಕಾರಣ
ನಾಡಿನೆಲ್ಲೆಡೆ ಕೃಷ್ಣ ಜನ್ಮಾಷ್ಠಮಿ ಸಂಭ್ರಮ ಮನೆ ಮಾಡಿದೆ. ತಮ್ಮ ಮನೆಯ ಮುದ್ದು ಕಂದಮ್ಮಗಳಿಗೆ ಕೃಷ್ಣ ಹಾಗೂ ರಾಧೆಯ ವೇಷ ಹಾಕಿ ಹೆತ್ತವರು ಸಂಭ್ರಮಿಸುತ್ತಿದ್ದಾರೆ. ಇನ್ನು ಕೃಷ್ಣನು ಹುಟ್ಟಿದ ಮರುದಿನ ಮೊಸರು ಕುಡಿಕೆ, ಶ್ರೀಕೃಷ್ಣ ವೇಷ ಭೂಷಣ ಸ್ಪರ್ಧೆ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಕೃಷ್ಣನ ಹುಟ್ಟುಹಬ್ಬದ ಮರುದಿನ ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮೊಸರು ಕುಡಿಕೆ ಅಥವಾ ಮಡಕೆ ಹೊಡೆಯುವ ಆಚರಣೆಯ ಸಂಭ್ರಮ ಮನೆ ಮಾಡುತ್ತದೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೃಷ್ಣ ಎಂದರೆ ನಮಗೆಲ್ಲರಿಗೂ ನೆನಪಾಗುವುದೇ ಬಾಲ್ಯದ ತುಂಬೆಲ್ಲಾ ತುಂಟಾಟಗಳು ಸೇರಿದಂತೆ ಬೆಣ್ಣೆ ಕದ್ದು ತಿನ್ನುತ್ತಿದ್ದ ರೀತಿ. ವಿಷ್ಣುವಿನ ಏಂಟನೇ ಅವತಾರವಾದ ಶ್ರೀ ಕೃಷ್ಣ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯೂ ಹುಟ್ಟಿದ ದಿನ. ಈ ಕೃಷ್ಣ ಜನ್ಮಾಷ್ಟಮಿಯನ್ನು (Krishna Janmashtami) ಕೃಷ್ಣಾಷ್ಟಮಿ ಜನ್ಮಾಷ್ಟಮಿ, ಗೋಕುಲಾಷ್ಟಮಿ ಹೀಗ ನಾನಾ ಹೆಸರುಗಳಿಂದ ಕರೆಯುತ್ತಾರೆ. ಇನ್ನು ಕೃಷ್ಣ ಜನ್ಮಾಷ್ಟಮಿಯ ಮರುದಿನ ಮೊಸರು ಕುಡಿಕೆಯನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಮಡಕೆ ಹೊಡೆಯುವ ಈ ಆಚರಣೆಯ ಹಿಂದಿನ ಕಾರಣವೇನು? ಈ ಕುರಿತಾದ ಮಾಹಿತಿ ಇಲ್ಲಿದೆ.
ಮಡಕೆ ಹೊಡೆಯುವ ಆಚರಣೆಯ ಹಿಂದಿದೆ ಈ ಕಾರಣ
ಕೃಷ್ನ ಜನ್ಮಾಷ್ಟಮಿಯಂದು ಸಾಮಾನ್ಯವಾಗಿ ಕೆಲವು ಭಾಗಗಳಲ್ಲಿ ಮಡಿಕೆಯನ್ನು ದಾರಕ್ಕೆ ಕಟ್ಟಿ ಎತ್ತರಕ್ಕೆ ತೂಗು ಹಾಕಿ ಹೊಡೆಯುತ್ತಾರೆ. ಈ ಆಚರಣೆಯೂ ಕೃಷ್ಣನ ಬಾಲ್ಯದ ತುಂಟಾಟವನ್ನು ನೆನಪಿಸುತ್ತದೆ ಎನ್ನಲಾಗಿದೆ. ಹೌದು, ಶ್ರೀಕೃಷ್ಣನು ಅತೀ ತುಂಟ. ಹೀಗಾಗಿ ಸಣ್ಣವನು ಇದ್ದಾಗ ಎಲ್ಲರ ಮನೆಗೆ ನುಗ್ಗಿ ಬೆಣ್ಣೆ ಕದ್ದು ತಿನ್ನುತ್ತಿದ್ದನು. ಹೀಗಾಗಿ ಕೃಷ್ಣನ ಕೈಗೆ ಬೆಣ್ಣೆ ಸಿಗದಂತೆ ಮಾಡಲು ಬೆಣ್ಣೆಯನ್ನು ಮಡಿಕೆಯಲ್ಲಿ ಹಾಕಿ ಮೇಲಕ್ಕೆ ಕಟ್ಟಿ ಇಡುತ್ತಿದ್ದರು. ಇತ್ತ ತಾಯಿ ಯಶೋಧೆಯದ್ದು ಇದೇ ಪರಿಸ್ಥಿತಿ. ಹೀಗಾಗಿ ಮಡಕೆಯಲ್ಲಿ ಬೆಣ್ಣೆಯಿಟ್ಟು ಮೇಲಕ್ಕೆ ಕಟ್ಟಿ ತನ್ನ ಮುದ್ದಿನ ಮಗ ಕಳ್ಳ ಕೃಷ್ಣನ ಕೈಗೆ ಸಿಗದಂತೆ ಇಡುತ್ತಿದ್ದರು. ಈ ಶ್ರೀಕೃಷ್ಣನ ಬಾಲ್ಯದ ತುಂಟಾಟಗಳನ್ನು ನೆನಪಿಸಿಕೊಳ್ಳುವ ಸಲುವಾಗಿ ಅಷ್ಟಮಿಯ ಮಾರನೇ ದಿನ ಮೊಸರು ಕುಡಿಕೆ ಆಚರಣೆಯೂ ಚಾಲ್ತಿಯಲ್ಲಿದೆ.
ಇದನ್ನೂ ಓದಿ: Krishna Janmashtami 2025: ಶ್ರೀ ಕೃಷ್ಣನಿಗೆ ಪ್ರಿಯವಾದ ಈ ರವೆ ಉಂಡೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು
ಮೊಸರು ಕುಡಿಕೆ ಆಚರಣೆಯಲ್ಲಿದೆ ಹಲವು ಆರೋಗ್ಯ ಪ್ರಯೋಜನ
ಕೃಷ್ಣ ಜನ್ಮಾಷ್ಟಮಿಯಂದು ಹಗ್ಗಕ್ಕೆ ಕಟ್ಟಲಾದ ಮೊಸರಿನ ಕುಡಿಕೆ ಹೊಡೆಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
- ದೈಹಿಕ ಬಲವನ್ನು ಹೆಚ್ಚಿಸಿ ಶಕ್ತಿಯನ್ನು ನೀಡುತ್ತದೆ, ಮಾನಸಿಕ ಒತ್ತಡವನ್ನು ನಿವಾರಿಸಿ ಮನಸ್ಸಿಗೆ ಖುಷಿ ನೀಡುತ್ತದೆ.
- ದೇಹದ ನಾಡಿಗಳು ಶುದ್ಧವಾಗಿ ರಕ್ತವನ್ನು ನಿಯಂತ್ರಿಸುತ್ತದೆ. ಇದರಿಂದ ದೇಹಕ್ಕೆ ದೈಹಿಕ ವ್ಯಾಯಮವಾದಂತೆ ಆಗುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








