AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ

ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್‌ 16 ರಂದು ಆಚರಿಸಲಾಗುತ್ತದೆ. ಜಗತ್ಪಾಲಕ ಶ್ರೀಕೃಷ್ಣನ ಈ ಹಬ್ಬದ ದಿನ ನಿಮ್ಮ ಪ್ರೀತಿಪಾತ್ರರಿಗೆ ಈ ಮುತ್ತಿನಂತಹ ಸಂದೇಶಗಳೊಂದಿಗೆ ಶುಭಾಶಯಗಳನ್ನು ತಿಳಿಸಿ.

Krishna Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ
ಶ್ರೀಕೃಷ್ಣ ಜನ್ಮಾಷ್ಟಮಿImage Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 14, 2025 | 6:11 PM

Share

ಶ್ರೀಕೃಷ್ಣನನ್ನು (Shree Krishna) ವಿಷ್ಣುವಿನ ಎಂಟನೇ ಅವತಾರವೆಂದು ಹೇಳಲಾಗುತ್ತದೆ. ಭೂಮಿಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ದುಷ್ಟರ ಸಂಹಾರಕ್ಕಾಗಿ ವಿಷ್ಣು ಮಾನವನ ರೂಪದಲ್ಲಿ ಶ್ರೀ ಕೃಷ್ಣನಾಗಿ ಜನಿಸಿದ ದಿನವೇ ಈ ಶ್ರೀಕೃಷ್ಣ ಜನ್ಮಾಷ್ಟಮಿ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಜಗತ್ಪಾಲಕ ಶ್ರೀಕೃಷ್ಣ ಜನಿಸಿದ ಎಂದು ಹೇಳಲಾಗುತ್ತದೆ, ಆದ್ದರಿಂದ ಪ್ರತಿವರ್ಷ ಈ ಅಷ್ಟಮಿಯ ದಿನದಂದು ಗೋಕುಲಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್‌ 16 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು (Krishna Janmashtami) ಆಚರಿಸಲಾಗುತ್ತಿದ್ದು, ಈ ಶುಭ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಶ್ರೀಕೃಷ್ಣನ ಈ ಮುತ್ತಿನಂತಹ ಸಂದೇಶದೊಂದಿಗೆ ಶುಭಾಶಯಗಳನ್ನು ತಿಳಿಸಿ.

ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭ ದಿನ ನಿಮ್ಮ ಪ್ರೀತಿಪಾತ್ರರಿಗೆ ಹೀಗೆ ಶುಭಾಶಯ ತಿಳಿಸಿ:

  • ಶ್ರೀಕೃಷ್ಣನ ದೈವಿಕ ಆಶೀರ್ವಾದದೊಂದಿಗೆ ನಿಮ್ಮ ಜೀವನವು ದೀಪದಂತೆ ಸದಾ ಬೆಳಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಜನ್ಮಾಷ್ಟಮಿಯ ಶುಭಾಶಯಗಳು.
  • ಶ್ರೀಕೃಷ್ಣಾಯ ವಾಸುದೇವಾಯ ದೇವಕಿ ನಂದನಾಯಚ ನಂದಗೋಪ ಕುಮಾರಾಯ ಗೋವಿಂದಾಯ ನವೋ ನಮಃ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
  • ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮದಿಂದ ನಡೆಯುವವರನ್ನು ಧರ್ಮವೇ ರಕ್ಷಿಸುತ್ತದೆ. ಯಾವಾಗಲೂ ಧರ್ಮದಿಂದ ನಡೆಯಿರಿ. ನಿಮಗೆಲ್ಲರಿಗೂ ಕೃಷ್ಣಾಷ್ಟಮಿಯ ಶುಭಾಶಯಗಳು.
  • ನಿಮಗೂ ನಿಮ್ಮ ಕುಟುಂಬಕ್ಕೂ ಶ್ರೀಕೃಷ್ಣ ಸುಖ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ. ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
  • ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ, ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ, ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ. ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
  • ಶ್ರೀ ಕೃಷ್ಣನು ನಿಮ್ಮ ಜೀವನದಲ್ಲಿನ ಕಷ್ಟ ಕಾರ್ಪಣ್ಯಗಳನ್ನು ದೂರಾಗಿಸಿ, ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ. ಗೋಕುಲಾಷ್ಟಮಿಯ ಶುಭಾಶಯಗಳು.
  • ಎಲ್ಲರನ್ನೂ ಪ್ರೀತಿ, ಕೆಲವರನ್ನೂ ಮಾತ್ರ ನಂಬಿ, ಪ್ರಪಂಚದಲ್ಲಿ ಎಲ್ಲವೂ ಸತ್ಯ, ಆದರೆ ಎಲ್ಲರೂ ಸತ್ಯವಂತರಲ್ಲ ಎಂಬ ಸತ್ಯವನ್ನು ಅರಿತು ಜೀವನ ಸಾಗಿಸಿ, ಶ್ರೀಕೃಷ್ಣನ ಆಶಿರ್ವಾದ ಸದಾ ನಿಮ್ಮ ಮೇಲಿರಲಿ.
  • ಕರ್ಮಾಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನ ಮಾ ಕರ್ಮಫಲ ಹೇತುರ್ಭುರ್ಮಾತೇ ಸಂಗೋಸ್ತ್ವ ಕರ್ಮಣಿ. ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು.
  • ನಿಮ್ಮ ಕೆಲಸವನ್ನು ನೀವು ನಿಷ್ಠೆ, ಪ್ರಾಮಾಣಿಕವಾಗಿ ಮಾಡಿ ಅದರಿಂದ ಯಾವುದೇ ಫಲಾಫಲಗಳನ್ನು ನಿರೀಕ್ಷಿಸಬೇಡಿ. ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
  • ಅಧರ್ಮದಿಂದ ಶತ್ರು ಹಲವು ಬಾರಿ ಗೆಲ್ಲಬಹುದು ಆದರೆ ಕರ್ಮ ಎದುರಾಗುವ ವೇಳೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ. ಹಾಗಾಗಿ ಯಾವಾಗಲೂ ಸತ್ಯದ ದಾರಿಯಲ್ಲಿಯೇ ನಡೆಯಿರಿ. ಶ್ರೀಕೃಷ್ಣ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಲಿ.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ದಿನ ತಪ್ಪದೇ ಭೇಟಿ ನೀಡಲೇಬೇಕಾದ ಕೃಷ್ಣ ದೇವಾಲಯಗಳಿವು

ಇದನ್ನೂ ಓದಿ
Image
ಕೃಷ್ಣ ಜನ್ಮಾಷ್ಟಮಿ ದಿನ ತಪ್ಪದೇ ಭೇಟಿ ನೀಡಲೇಬೇಕಾದ ಕೃಷ್ಣ ದೇವಾಲಯಗಳಿವು
Image
ಶ್ರೀಕೃಷ್ಣನ ಮೈ ಬಣ್ಣ ನೀಲಿ ಯಾಕೆ? ಇದೇ ನೋಡಿ ಕಾರಣ
Image
ರಾಧ-ಕೃಷ್ಣ ವೇಷ ತೊಡುವುದಕ್ಕೆ ವಯಸ್ಸಿನ ಮಿತಿಯಿದೆಯೇ?
Image
ಶ್ರೀಕೃಷ್ಣ ಜಗತ್ತಿಗೆ ಹೇಳಿದ ಈ ಮೂರು ಕಟು ಸತ್ಯಗಳ ಬಗ್ಗೆ ನಿಮಗೆ ತಿಳಿದಿದ್ಯಾ
  • ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಜಗತ್ಪಾಲಕನ ಆಶಿರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ ಎಂದು ನಾನು ಕೇಳಿಕೊಳ್ಳುತ್ತೇನೆ.
  • ವಸುದೇವ ಸುತಂ ದೇವಂ ಕಂಸ ಚಾರೂಣ ಮರ್ದನಂ ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ. ಸರ್ವರಿಗೂ ಶ್ರೀಕೄಣ ಜನ್ಮಾಷ್ಟಮಿಯ ಶುಭಾಶಯಗಳು.
  • ಶ್ರೀಕೃಷ್ಣ ನಿಮಗೆ ಆರೋಗ್ಯ, ಐಶ್ವರ್ಯ, ಸಂಪತ್ತು, ಸಮೃದ್ಧಿಯನ್ನು ಕರುಣಿಸಲಿ. ಎಲ್ಲರಿಗೂ ಗೋಕುಲಾಷ್ಟಮಿಯ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ