AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2025: ಶ್ರೀಕೃಷ್ಣ ಜಗತ್ತಿಗೆ ಹೇಳಿದ ಈ ಮೂರು ಕಟು ಸತ್ಯಗಳ ಬಗ್ಗೆ ನಿಮಗೆ ತಿಳಿದಿದ್ಯಾ?

ಭಗವಾನ್ ಶ್ರೀಕೃಷ್ಣ ಒಬ್ಬ ಅದ್ಭುತ ರಾಜಕಾರಣಿ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಶ್ರೀಕೃಷ್ಣನು ನೀಡಿದ ಸಂದೇಶವು ಜೀವನಕ್ಕೆ ಸ್ಫೂರ್ತಿದಾಯಕ, ಹೀಗಾಗಿ ಶ್ರೀಕೃಷ್ಣ ಪರಮಾತ್ಮನು ಬದುಕಿದ ರೀತಿ ಹಾಗೂ ಆತನ ಸಂದೇಶಗಳನ್ನು ನಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಆದರೆ ಜಗತ್ತಿಗೆ ಹೇಳಿದ ಈ ಮೂರು ಸಂದೇಶಗಳಾವುವು ಗೊತ್ತಾ?. ನೀವು ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಅದನ್ನು ಅಳವಡಿಸಿಕೊಳ್ಳುವುದು ಸೂಕ್ತ.

Krishna Janmashtami 2025: ಶ್ರೀಕೃಷ್ಣ ಜಗತ್ತಿಗೆ ಹೇಳಿದ ಈ ಮೂರು ಕಟು ಸತ್ಯಗಳ ಬಗ್ಗೆ ನಿಮಗೆ ತಿಳಿದಿದ್ಯಾ?
ಶ್ರೀ ಕೃಷ್ಣ ಜನ್ಮಾಷ್ಠಮಿ
ಸಾಯಿನಂದಾ
|

Updated on:Aug 12, 2025 | 6:06 PM

Share

ಶ್ರೀ ಕೃಷ್ಣ ಜನ್ಮಾಷ್ಠಮಿಗೆ (Shree Krishna Janmashtami) ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ಬಾರಿ ಆಗಸ್ಟ್ 16 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ವಿಷ್ಣುವಿನ ಏಂಟನೇ ಅವತಾರವಾದ ಶ್ರೀ ಕೃಷ್ಣ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನಿಸಿದ ದಿನವು ಇದಾಗಿದೆ. ಈಗಾಗಲೇ ಎಲ್ಲರೂ ಈ ಹಬ್ಬದ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಆದರೆ ಈ ಶ್ರೀ ಕೃಷ್ಣನ ಬಾಲಲೀಲೆಯಲ್ಲಿ ಬದುಕಿಗೆ ಬೇಕಾದ ಸಾಕಷ್ಟು ಜೀವನ ಸಂದೇಶವಿದೆ. ಹೌದು, ಪರಮಾತ್ಮ ಶ್ರೀಕೃಷ್ಣ ಹುಟ್ಟುಹಬ್ಬ ಆಚರಿಸುವ ನಾವುಗಳು ಬದುಕಿಗೆ ನೀಡಿದ ಸಂದೇಶಗಳು ಹಾಗೂ ಜಗತ್ತಿಗೆ ಈ ಮೂರು ಸತ್ಯಗಳನ್ನು ತಿಳಿದುಕೊಳ್ಳುವುದು ಸೂಕ್ರತ. ಅದರಲ್ಲೂ ಶ್ರೀಕೃಷ್ಣನು ಹೇಳಿದ ದೇವರಲ್ಲಿ ಭಕ್ತಿ, ಕೋಪ ನಿಯಂತ್ರಣವಿರಲಿ, ದುರಾಸೆ ಬೇಡ ಈ ಮೂರು ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ಬದುಕು ಪರಿಪೂರ್ಣವಾಗುತ್ತದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಪರಿಪೂರ್ಣ ಬದುಕಿಗೆ ಅಗತ್ಯ ಕೃಷ್ಣನ ಈ ಸಂದೇಶಗಳು:

  • ದೇವರಲ್ಲಿ ಭಕ್ತಿಯಿಡಿ: ಶ್ರೀಕೃಷ್ಣನು ದೇವರ ಮೇಲಿನ ಭಕ್ತಿಯು ಜೀವನದಲ್ಲಿ ಸಂತೋಷ ಹಾಗೂ ನೆಮ್ಮದಿ ಸಿಗುತ್ತದೆ. ಸುಖದ ಸಮಯದಲ್ಲಿ ದೇವರನ್ನು ಮರೆಯಬಾರದು.
  • ಕೋಪದ ಮೇಲೆ ನಿಯಂತ್ರಣವಿರಲಿ, ದುರಾಸೆ ಬೇಡ: ಶ್ರೀಕೃಷ್ಣನು ಕ್ರೋಧ, ಲೋಭ ಹಾಗೂ ಮೋಹಗಳಿಂದ ದೂರವಿರಿ. ಈ ಮೂರು ವಿಚಾರಗಳು ಕೆಟ್ಟ ಕೆಲಸವನ್ನು ಮಾಡಲು ಅನುವು ಮಾಡಿಕೊಡುತ್ತದೆ. ಇದು ಬದುಕು ಹಾಗೂ ಸಂಬಂಧವನ್ನು ಹಾಳು ಮಾಡುತ್ತವೆ.
  •  ಸಾವಿನ ಬಗ್ಗೆ ಭಯ ಬೇಡ: ಹುಟ್ಟಿನ ಪ್ರತಿಯೊಬ್ಬ ವ್ಯಕ್ತಿಗೂ ಸಾವು ಖಚಿತ. ಸಾವಿಗೆ ಭಯ ಪಡಬೇಡಿ, ಎಲ್ಲವನ್ನು ಧೈರ್ಯದಿಂದ ಸ್ವೀಕರಿಸಿ.
  •  ಪ್ರೀತಿ ಸ್ನೇಹದಿಂದ ಬದುಕಿ: ಬದುಕಿಗೆ ಹಣ ಅಂತಸ್ತು ಮುಖ್ಯವಲ್ಲ, ಪ್ರೀತಿ ಸ್ನೇಹದಿಂದ ಬದುಕಿದರೆ ಜೀವನದಲ್ಲಿ ಸಂತೋಷವೇ ತುಂಬಿರುತ್ತದೆ. ತಮ್ಮವರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸಿ.
  •  ಸದಾ ಸಂತೋಷವಾಗಿರಿ: ಬದುಕು ಎಂದ ಮೇಲೆ ಕಷ್ಟ ಸುಖವು ಸಾಮಾನ್ಯ. ಹೀಗಾಗಿ ಕಷ್ಟಗಳು ಬಂದರೆ ಕುಗ್ಗಬೇಡಿ, ಎಲ್ಲವನ್ನು ಧೈರ್ಯದಿಂದ ಎದುರಿಸಿ. ಸದಾ ಸಂತೋಷವಾಗಿರಲು ಪ್ರಯತ್ನ ಪಡಿ.
  • ನಿಸ್ವಾರ್ಥ ಸೇವಾ ಭಾವವಿರಲಿ: ಸ್ವಾರ್ಥವಿಲ್ಲದೇ ಯಾವುದೇ ಪ್ರತಿಫಲ ಅಪೇಕ್ಷೆಯಿಲ್ಲದೇ ಕೆಲಸ ಮಾಡಿ. ನಿಸ್ವಾರ್ಥ ಸೇವಾ ಭಾವದಿಂದ ಬದುಕು ಸುಂದರವಾಗಲು ಸಾಧ್ಯ.
  • ಕರ್ತವ್ಯ ಪಾಲನೆ: ತಮ್ಮ ಕರ್ತವ್ಯ ಏನಿದೆ ಅದನ್ನು ತಪ್ಪದೇ ಪಾಲಿಸಬೇಕು. ಕರ್ತವ್ಯದಿಂದ ಹಿಂದೆ ಸರಿಯುವುದು, ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು.
  • ಅನುಮಾನ ಬದುಕಿನತ್ತ ಸುಳಿಯದಿರಿ : ಅನುಮಾನ ಸಂಬಂಧವನ್ನು ನಾಶ ಮಾಡುತ್ತದೆ. ಹೀಗಾಗಿ ಯಾವುದೇ ಸಂಬಂಧವಿರಲಿ ಯಾರ ಮೇಲು ಅನುಮಾನ ಪಡಬೇಡಿ, ನಂಬಿಕೆಯನ್ನು ಇಟ್ಟುಕೊಳ್ಳಿ.

ಇದನ್ನೂ ಓದಿ: Raksha Bandhan 2025: ಕೈಗೆ ಕಟ್ಟಿದ ರಾಖಿಯನ್ನು ಎಷ್ಟು ದಿನಗಳ ಬಳಿಕ ತೆಗೆಯಬೇಕು?

ಇದನ್ನೂ ಓದಿ
Image
ಕೈಗೆ ಕಟ್ಟಿದ ರಾಖಿಯನ್ನು ಎಷ್ಟು ದಿನಗಳ ಬಳಿಕ ತೆಗೆಯಬೇಕು?
Image
ರಕ್ಷಾ ಬಂಧನ ಹಬ್ಬಕ್ಕೆ ಮನೆಯಲ್ಲೇ ರಾಖಿ ತಯಾರಿಸುವುದು ಹೇಗೆ? ಇಲ್ಲಿದೆ ಸಲಹೆ
Image
ರಕ್ಷಾ ಬಂಧನದ ದಿನ ನಿಮ್ಮ ಪ್ರೀತಿಯ ಸಹೋದರಿಗೆ ಈ ಉಡುಗೊರೆಗಳನ್ನು ನೀಡಿ
Image
ರಕ್ಷಾ ಬಂಧನ ಹಬ್ಬದ ಶುಭ ಸಂದೇಶಗಳು
  • ವರ್ತಮಾನದಲ್ಲಿ ಬದುಕಿ : ಪ್ರಸ್ತುತ ಬದುಕು ಹೇಗಿದೆ ಅದನ್ನು ಒಪ್ಪಿಕೊಂಡು ಬದುಕುವ ಕಲೆ ಗೊತ್ತಿರಲಿ. ಭೂತ ಕಾಲದಲ್ಲಿ ಘಟಿಸಿ ಹೋದದ್ದನ್ನು ಹೆಚ್ಚು ಯೋಚಿಸಬೇಡಿ, ಭವಿಷ್ಯದ ಬಗ್ಗೆ ಯೋಚನೆ, ಇಂದಿನ ಬದುಕನ್ನು ಆನಂದಿಸಿ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Tue, 12 August 25