AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lifestyle Tips: ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ

ಕಡಿಮೆ ನಿದ್ರೆಯ ಪರಿಣಾಮ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇಲ್ಲಿ 6 ಗಂಟೆಗಿಂತಲೂ ಕಡಿಮೆ ನಿದ್ರೆಯ ದೇಹಕ್ಕೆ ಏನೇನು ಸಮಸ್ಯೆ ತಂದೊಡ್ಡಬಹುದು ಎಂದು ತಿಳಿಸಲಾಗಿದೆ.

Lifestyle Tips: ನೀವು 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತೀರಾ? ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on: Apr 18, 2022 | 12:17 PM

Share

ಮನುಷ್ಯನ ದೇಹ ಸಾಕಷ್ಟು ನಿದ್ದೆ ಪಡೆಯುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ, ಕಾರಣಾಂತರಗಳಿಂದ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದೇ ಇದ್ದರೆ ಅದರ ಕೆಟ್ಟ ಪರಿಣಾಮಗಳು, ಮೆದುಳು, ಮನಸಿನ ಮೇಲೆ ಬೀಳುತ್ತದೆ. ಅಂತಹ ಜನರು ಮಾನಸಿಕ ಒತ್ತಡಕ್ಕೆ ಒಳಗಾಗುವುದು, ಒತ್ತಡ, ಸುಸ್ತು ಎದುರಿಸಬೇಕಾಗಿ ಬರಬಹುದು. ಅದು ತಮ್ಮ ದೈನಂದಿನ ಕೆಲಸಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಕೂಡ ಒಂದು ಸಮಸ್ಯೆ ಆಗಿದೆ. 6 ಗಂಟೆಗಳಿಂತಲೂ ಕಡಿಮೆ ನಿದ್ದೆ ಮಾಡುವುದು ಸಮಸ್ಯೆ ತರುತ್ತದೆ. ತಜ್ಞರ ಪ್ರಕಾರ 6 ಗಂಟೆಯಾದರೂ ನಿದ್ದೆ ಬೇಕು. ಅದಕ್ಕಿಂತ ಕಡಿಮೆ ನಿದ್ದೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ.

ಈ ಕಾರಣಗಳಿಂದ ಕಡಿಮೆ ನಿದ್ದೆ ಮಾಡುವವರು ಆಗಾಗ್ಗೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ಶೀತ, ಜ್ವರ, ಸುಸ್ತು, ಆಯಾಸ, ಮುಂತಾದ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಿಬರಬಹುದು. ಕಡಿಮೆ ನಿದ್ರೆಯ ಪರಿಣಾಮ ದೇಹದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಇಲ್ಲಿ 6 ಗಂಟೆಗಿಂತಲೂ ಕಡಿಮೆ ನಿದ್ರೆಯ ದೇಹಕ್ಕೆ ಏನೇನು ಸಮಸ್ಯೆ ತಂದೊಡ್ಡಬಹುದು ಎಂದು ತಿಳಿಸಲಾಗಿದೆ.

ಒತ್ತಡ: ನೀವು 6 ಗಂಟೆಗಿಂತಲೂ ಕಡಿಮೆ ಅವಧಿ ನಿದ್ದೆ ಮಾಡಿದರೆ ಅದರಿಂದ ನಿಮ್ಮ ಮಾನಸಿಕ ಸ್ಥಿತಿಯು ಕ್ಷೀಣಿಸಲು ಆರಂಭವಾಗುತ್ತದೆ. ನೀವು ಒತ್ತಡಕ್ಕೆ ಒಳಗಾಗುವುದು ಹೆಚ್ಚುತ್ತದೆ. ಕೆಲವೊಮ್ಮೆ ಒತ್ತಡ ಅತಿಯಾಗಿ, ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ನಿದ್ರಾಹೀನತೆ ಹಾಗೂ ಖಿನ್ನತೆಯ ನಡುವೆ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಖಿನ್ನತೆ ಇದ್ದರೆ ನಿದ್ದೆ ಬರುವುದಿಲ್ಲ ಹಾಗೂ ನಿದ್ದೆ ಮಾಡದಿದ್ದರೆ ಖಿನ್ನತೆ ಉಂಟಾಗುತ್ತದೆ. ಆದ್ದರಿಂದ ಪೂರ್ಣ 8 ಗಂಟೆಗಳ ನಿದ್ದೆ ಮಾಡಲು ಪ್ರಯತ್ನಿಸಿ.

ಸ್ಮರಣ ಶಕ್ತಿಯ ಸಮಸ್ತೆ: 6 ಗಂಟೆ ಅಥವಾ ಅದಕ್ಕಿಂತಲೂ ಕಡಿಮೆ ನಿದ್ದೆ ಮಾಡುವವರು ಸ್ಮರಣ ಶಕ್ತಿಯ ಸಮಸ್ಯೆ ಹೊಂದಿರುವ ಸಾಧ್ಯತೆ ಇದೆ. ಅಂಥವರಿಗೆ ಆತಂಕವೂ ಹೆಚ್ಚಾಗಿರುತ್ತದೆ. ನಿದ್ರಾಹೀನತೆಯ ಸಮಸ್ಯೆ ಇದ್ದರೆ, ವೈದ್ಯರ ಬಳಿಗೆ ಹೋಗುವುದು ಒಳ್ಳೆಯದು. ಅಥವಾ ಮನೆಯಲ್ಲೇ ಕೆಲವು ಪರಿಹಾರ ಕ್ರಮಗಳನ್ನು ಗುರುತಿಸಿ, ಅದನ್ನು ಅಳವಡಿಸಿ ಸೂಕ್ತ ಅವಧಿಯ ನಿದ್ದೆ ಮಾಡುವುದು ಉತ್ತಮ.

ಏಕಾಗ್ರತೆಯ ಕೊರತೆ: ನಿದ್ರೆಯ ಕೊರತೆ ಅಥವಾ ನಿದ್ರಾಹೀನತೆ ಇರುವವರು ಕಡಿಮೆ ಏಕಾಗ್ರತೆ ಹೊಂದಿರುವ ಸಾಧ್ಯತೆ ಹೆಚ್ಚು. ಅಂಥವರಲ್ಲಿ ಏಕಾಗ್ರತೆಯು ದುರ್ಬಲವಾಗಿರುತ್ತದೆ. ಅವರು ಎಷ್ಟೇ ಬಯಸಿದರೂ ಅವರು ಯಾವುದೇ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯ ಆಗುವುದಿಲ್ಲ.

ಇದನ್ನೂ ಓದಿ: Health Tips: ಕಡಲೆಕಾಯಿಯ ದುಷ್ಪರಿಣಾಮಗಳು; ಈ ಸಮಸ್ಯೆ ಇರುವವರು ಹೆಚ್ಚು ಶೇಂಗಾ ತಿನ್ನುವುದು ಅಪಾಯಕಾರಿ

ಇದನ್ನೂ ಓದಿ: Health Tips: ಬಾಯಿ ತೆರೆದು ಮಲಗುವ ಅಭ್ಯಾಸ ಇದೆಯೇ? ಅದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯಿರಿ