Health Tips: ಬಾಯಿ ತೆರೆದು ಮಲಗುವ ಅಭ್ಯಾಸ ಇದೆಯೇ? ಅದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯಿರಿ
ಬಾಯಿ ತೆರೆದು ಮಲಗುವುದರಿಂದ ಗೊರಕೆಯ ಸಮಸ್ಯೆ ಹೆಚ್ಚಾಗಿ ಕಾಡಬಹುದು. ನಿದ್ರೆಯ ಅವಧಿಯೂ ಕಡಿಮೆ ಆಗಬಹುದು. ಈ ಲೇಖನದಲ್ಲಿ ಬಾಯಿ ತೆರೆದು ಮಲಗುವ ಅಭ್ಯಾಸ ನಿಮಗೆ ಇದ್ದರೆ ಅದರ ಬಗ್ಗೆ ಜಾಗರೂಕರಾಗಿ ಇರಲು ತಿಳಿಸಲಾಗಿದೆ.
ಆರೋಗ್ಯವಾಗಿರಲು ಉತ್ತಮ ಮತ್ತು ಸಂಪೂರ್ಣ ನಿದ್ರೆಯನ್ನು ಪಡೆಯುವುದು ಬಹಳ ಮುಖ್ಯ. ತಜ್ಞರ ಪ್ರಕಾರ ಸಂಪೂರ್ಣ ನಿದ್ರೆಯಿಂದ ದೇಹದಲ್ಲಿ ಶಕ್ತಿ ಉಳಿಯುತ್ತದೆ. ನಾವು ಕ್ರಿಯಾಶೀಲರಾಗಿರಲು ಸಹಾಯವಾಗುತ್ತದೆ. ಕೆಲವು ಜನರು ಚೆನ್ನಾಗಿ ನಿದ್ರೆ ಮಾಡಿದರೂ ಕೆಲವು ಕೆಟ್ಟ ಸಮಸ್ಯೆಗಳಿಂದ ಅವರಿಗೆ ತೊಂದರೆ ಉಂಟಾಗಬಹುದು. ಹೊಟ್ಟೆಯ ಮೇಲೆ ಮಲಗುವುದು ಅಥವಾ ಬಾಯಿ ತೆರೆದು ಮಲಗುವುದು ತಪ್ಪು. ಬಾಯಿ ತೆರೆದು ಮಲಗುವುದರಿಂದ ಕೆಲವು ಸಮಸ್ತೆಗಳನ್ನು ಎದುರಿಸಬೇಕಾಗಿ ಬರಬಹುದು.
ಈ ರೀತಿ ಬಾಯಿ ತೆರೆದು ಮಲಗುವುದರಿಂದ ಗೊರಕೆಯ ಸಮಸ್ಯೆ ಹೆಚ್ಚಾಗಿ ಕಾಡಬಹುದು. ನಿದ್ರೆಯ ಅವಧಿಯೂ ಕಡಿಮೆ ಆಗಬಹುದು. ಈ ಲೇಖನದಲ್ಲಿ ಬಾಯಿ ತೆರೆದು ಮಲಗುವ ಅಭ್ಯಾಸ ನಿಮಗೆ ಇದ್ದರೆ ಅದರ ಬಗ್ಗೆ ಜಾಗರೂಕರಾಗಿ ಇರಲು ತಿಳಿಸಲಾಗಿದೆ.
ಬಾಯಿಯ ದುರ್ವಾಸನೆ
ಬಾಯಿ ತೆರೆದು ಮಲಗುವುದರಿಂದ ಬಾಯಿಯ ದುರ್ವಾಸನೆ ಉಂಟಾಗಬಹುದು. ಬಾಯಿಯ ವಾಸನೆ ಕೆಲವೊಮ್ಮೆ ನಮಗೆ ಮುಜುಗರ ಉಂಟುಮಾಡುತ್ತದೆ. ಆದರೆ ಅದರ ಹಿಂದೆ ಈ ಕಾರಣವೂ ಇದೆ ಎಂದು ಬಹಳ ಜನರಿಗೆ ಗೊತ್ತಿರುವುದಿಲ್ಲ. ತಜ್ಞರ ಪ್ರಕಾರ ಬಾಯಿ ತೆರೆದು ಮಲಗುವುದರಿಂದ ಗಾಳಿಯಲ್ಲಿ ಇರುವ ಬ್ಯಾಕ್ಟೀರಿಯಾಗಳು ನಮ್ಮ ಹಲ್ಲು ಮತ್ತು ಬಾಯಿಯೊಳಗೆ ನೆಲೆಗೊಳ್ಳುತ್ತದೆ. ಈ ಬ್ಯಾಕ್ಟೀರಿಯಾ ಮತ್ತು ಕೊಳೆ ನಂತರ ದುರ್ವಾಸನೆಯ ರೂಪ ಪಡೆಯುತ್ತದೆ.
ಹಲ್ಲಿನ ಸಮಸ್ಯೆಗಳು
ತಜ್ಞರ ಪ್ರಕಾರ ಬಾಯಿ ತೆರೆದು ಮಲಗುವುದರಿಂದ ಹಲ್ಲುಗಳಿಗೆ ಕೂಡ ಹಾನಿ ಆಗುತ್ತದೆ. ಬಾಯಿಯಲ್ಲಿ ಇರುವ ಲಾಲಾರಸವೂ ಒಣಗಲು ಆರಂಭವಾಗುತ್ತದೆ. ಇದರಿಂದ ಹಲ್ಲುಗಳಿಂದ ರಕ್ತಸ್ರಾವ ಸೇರಿದಂತೆ ಇತರ ಬಾಯಿಯಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಸುಸ್ತು
ಬಾಯಿ ತೆರೆದು ಮಲಗುವುದರಿಂದ ಶ್ವಾಸಕೋಶದ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಹಾಗೆ ನಿದ್ರೆ ಮಾಡುವುದರಿಂದ ಶ್ವಾಸಕೋಶದಲ್ಲಿನ ಆಮ್ಲಜನಕದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಬಳಲಿಕೆ ಉಂಟಾಗಬಹುದು. ಆಯಾಸ ಅನುಭವಿಸಬೇಕಾಗಿ ಬರಬಹುದು.
ಒಡೆದ ತುಟಿಗಳು
ಬಾಯಿ ತೆರೆದು ಮಲಗುವುದರಿಂದ ತುಟಿ ಒಣಗಲು ಆರಂಭವಾಗುತ್ತದೆ. ಹೀಗೆ ತುಟಿಗಳು ದೀರ್ಘಕಾಲದ ವರೆಗೆ ಒಣಗಿದ್ದರೆ ಅವು ಬಿರುಕು ಬಿಡುತ್ತವೆ. ಅಷ್ಟೇ ಅಲ್ಲ, ಬಾಯಿಯ ಲಾಲಾರಸ ಒಣಗುವುದರಿಂದ ಗಂಟಲಿನಲ್ಲೂ ಸಮಸ್ಯೆ ಶುರು ಆಗಬಹುದು. ಆದ್ದರಿಂದ ಹೀಗೆ ಮಲಗುವ ಬಗ್ಗೆ ಜಾಗರೂಕರಾಗಿರಿ.
ಇದನ್ನೂ ಓದಿ: Beauty Tips: ಬೀಟ್ರೂಟ್ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಸೌಂದರ್ಯ ಹೆಚ್ಚಿಸಲು ಬೀಟ್ರೂಟ್ ಸಹಕಾರಿ
ಇದನ್ನೂ ಓದಿ: Skin Care Tips: ಬೇಸಿಗೆಯಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್