AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಶಾಸಕರು ಮತ್ತು ಎಮ್ಮೆಲ್ಸಿಗಳ ತಂಡ ಭಾನುವಾರ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳಲಿದೆ: ವಿಜಯೇಂದ್ರ

ಬಿಜೆಪಿ ಶಾಸಕರು ಮತ್ತು ಎಮ್ಮೆಲ್ಸಿಗಳ ತಂಡ ಭಾನುವಾರ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳಲಿದೆ: ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 13, 2025 | 12:17 PM

Share

ಧರ್ಮಸ್ಥಳದಲ್ಲಿ ನಡೆಯುತ್ತಿರುವ ತನಿಖೆಯ ಹಿಂದೆ ಸಮಾಜಘಾತುಕ ಶಕ್ತಿಗಳ ಕುಮ್ಮಕ್ಕಿದೆ ಅಂತ ಜನಸಾಮಾನ್ಯರು ಹೇಳುತ್ತಿದ್ದಾರೆ, ತನಿಖೆಗೆ ಸಂಬಂಧಿಸಿದಂತೆ ಅನೇಕ ಗೊಂದಲಗಳಿದ್ದು ಅವುಗಳಿಗೆಲ್ಲ ತೆರೆ ಬೀಳಬೇಕು, ಎಂದು ವಿಜಯೇಂದ್ರ ಹೇಳಿದರು. ಪಕ್ಷದ ಹಿರಿಯ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಮತ್ತು ವಿಧಾನ ಪರಿಷತ್ ನಲ್ಲಿ ವಿರೋಧಪಕ್ಷದ ನಾಯಕ ನಾರಾಯಣ ಸ್ವಾಮಿ ಚಲವಾದಿ ಬಿಜೆಪಿ ರಾಜ್ಯಾಧ್ಯಕ್ಷನೊಂದಿಗಿದ್ದರು.

ಬೆಂಗಳೂರು, ಆಗಸ್ಟ್ 13: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿಯ ಹಿರಿಯ ಶಾಸಕರು (senior BJP MLAs), ವಿಧಾನ ಪರಿಷತ್ ಸದಸ್ಯರನ್ನೊಳಗೊಂಡ ಒಂದು ತಂಡ ಭಾನುವಾರದಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯಲಿದೆ ಎಂದು ಹೇಳಿದರು. ನಾವು ಪಕ್ಷದ ಪ್ರತಿನಿಧಿಗಳಾಗಿ ಅಲ್ಲಿಗೆ ಹೋಗೋದಿಲ್ಲ, ಜನಸಾಮಾನ್ಯರಂತೆ ಹೋಗುತ್ತೇವೆ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ನಿಲ್ಲುವು ಸ್ಪಷ್ಟವಾಗಿದೆ, ಸರ್ಕಾರ ರಚಿಸಿರುವ ಎಸ್​ಐಟಿ ಆದಷ್ಟು ಬೇಗ ತನ್ನ ತನಿಖೆಯನ್ನು ಪೂರ್ತಿಗೊಳಿಸಬೇಕು, ಅದು ತನಿಖೆಯನ್ನು ವಿನಾಕಾರಣ ವಿಳಂಬಗೊಳಿಸುವಂತಿಲ್ಲ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ:   ಕೊಪ್ಪಳ ಗವಿಸಿದ್ದಪ್ಪ ನಾಯಕ ಕೊಲೆ ಪ್ರಕರಣ: ಎನ್​ಐಎ ತನಿಖೆಗೆ ವಿಜಯೇಂದ್ರ ಆಗ್ರಹ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ