AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಣ್ಣ ಬೆನ್ನಿಗೆ ನಿಂತ ಅಹಿಂದ ನಾಯಕರು, ಇವತ್ತು ತುಮಕೂರುನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಯೋಜನೆ

ರಾಜಣ್ಣ ಬೆನ್ನಿಗೆ ನಿಂತ ಅಹಿಂದ ನಾಯಕರು, ಇವತ್ತು ತುಮಕೂರುನಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಯೋಜನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 13, 2025 | 11:20 AM

Share

ತುಮಕೂರಿನ ರಾಜಣ್ಣ ಅಭಿಮಾನಿಗಳಲ್ಲಿ ನಿನ್ನೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಕೂಡ ಮಾಡಿದರು. ಒಬ್ಬ ಅಭಿಮಾನಿ ವಿಷ ಸೇವಿಸಲು ಯತ್ನಿಸಿದರೆ ಮತ್ತೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಳ್ಳುವ ಪ್ರಯತ್ನ ಮಾಡಿದರು. ರಾಹುಲ್ ಗಾಂಧಿಯವರು ಬೆಂಗಳೂರಲ್ಲಿ ಮತಗಳ್ಳತನ ನಡೆದಿದೆ ಅರೋಪಿಸಿ ಪ್ರತಿಭಟನೆ ನಡೆಸಿದ ಬಳಿಕ ರಾಜಣ್ಣ ಕಾಂಗ್ರೆಸ್ ಸಂಸದನ ನಡೆಯನ್ನು ಟೀಕಿಸಿದ್ದರು.

ಬೆಂಗಳೂರು, ಆಗಸ್ಟ್ 13: ಹಿರಿಯ ಕಾಂಗ್ರೆಸ್ ನಾಯಕ ಕೆಎನ್ ರಾಜಣ್ಣ ಅವರನ್ನು ಏಕಾಏಕಿ ಮಂತ್ರಿಸ್ಥಾನದಿಂದ ವಜಾ ಮಾಡಿದ ನಂತರ ಅವರ ಬೆಂಬಲಿಗರಲ್ಲಿ ಹುಟ್ಟಿಕೊಂಡಿರುವ ಆಕ್ರೋಶ ಮತ್ತು ಕಿಚ್ಚು ಬಹಳ ದಿನಗಳವರೆಗೆ ಮುಂದವರಿಯಲಿರೋದು ನಿಶ್ಚಿತ. ಕಾರಣ ಹೇಳದೆ ನೋಟೀಸ್ ಕೂಡ ಜಾರಿ ಮಾಡದೆ ಅವರನ್ನು ಸಂಪುಟದಿಂದ ಕಿತ್ತು ಹಾಕಿರುವುದಕ್ಕೆ ಬೆಂಬಲಿಗರು ನಿನ್ನೆ ಪ್ರತಿಭನೆ ನಡೆಸಿದ ಹಾಗೆ ಇವತ್ತು ಕೂಡ ತುಮಕೂರುನಲ್ಲಿ ಬೃಹತ್ ರ‍್ಯಾಲಿ ನಡೆಸಲಿದ್ದಾರೆ. ವಾಲ್ಮೀಕಿ ಸಮುದಾಯದ 10,000 ಕ್ಕೂ ಹೆಚ್ಚು ಜನ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಅಹಿಂದ ನಾಯಕರು ಸಹ ರಾಜಣ್ಣ ಅವರ ಬೆನ್ನಿಗೆ ನಿಲ್ಲಲು ನಿರ್ಧರಿಸಿದ್ದು ಇವತ್ತು ಪ್ರತಿಭಟನೆ ನಡೆಸುವ ಯೋಚನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಂಬಿದವರನ್ನು ರಾಜಣ್ಣ ಯಾವತ್ತೂ ಕೈಬಿಟ್ಟಿಲ್ಲ, ಸಿದ್ದರಾಮಯ್ಯ ಕೂಡ ತಮ್ಮ ಶಿಷ್ಯನ ರಕ್ಷಣೆಗೆ ನಿಲ್ಲಬೇಕು: ವಾಲ್ಮೀಕಿ ಸಮುದಾಯ ಮುಖಂಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ