Funny Video: ಇರಲಾರದೆ ಇರುವೆ ಬಿಟ್ಟುಕೊಂಡು ಪಜೀತಿಗೆ ಸಿಲುಕಿದ ಚಿಂಪಾಂಜಿ; ಇಲ್ಲಿದೆ ನೋಡಿ ಹಾಸ್ಯಮಯ ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಪ್ರತಿನಿತ್ಯ ಕಾಣಸಿಗುತ್ತವೆ. ಕೆಲವೊಂದು ವಿಡಿಯೋಗಳು ಹಾಸ್ಯಮಯವಾಗಿದ್ದರೆ, ಇನ್ನೂ ಕೆಲವು ವಿಡಿಯೋಗಳು ನಮ್ಮ ಮನ ಮುಟ್ಟುವಂತಿರುತ್ತವೆ. ಈಗ ಅದೇ ರೀತಿಯ ತಮಾಷೆಯ ವಿಡಿಯೋವೊಂದು ಹರಿದಾಡುತ್ತಿದ್ದು, ಚಿಂಪಾಂಜಿಯೊಂದು ಇರಲಾರದೆ ಇರುವೆ ಬಿಟ್ಟುಕೊಂಡು ಪೇಚಿಗೆ ಸಿಲುಕಿಕೊಂಡಿದೆ.
ಚಿಂಪಾಂಜಿಗಳು, ಗೊರಿಲ್ಲಾಗಳು ಮತ್ತು ಕೋತಿಗಳ ಹಾವಭಾವ ವರ್ತನೆಗಳು ಮನುಷ್ಯರನ್ನೇ ಹೋಲುತ್ತವೆ. ಮನುಷ್ಯ ಮತ್ತು ಚಿಂಪಾಂಜಿಗಳ ನಡುವೆ ಸಾಮ್ಯತೆ ಇದೆ ಎಂಬುದನ್ನು ಹಲವು ಅಧ್ಯಯನಗಳೂ ದೃಢಪಡಿಸಿವೆ. ಅವುಗಳು ನಮ್ಮಂತೆಯೆ ಭಾವನೆಗಳನ್ನು ವ್ಯಕ್ತಪಡಿಸುವುದರ ಜೊತೆಗೆ, ಅವುಗಳು ಮಾನವರಂತೆಯೇ ತರ್ಲೆ ತಮಾಷೆಗಳನ್ನು ಮಾಡುತ್ತಿರುತ್ತವೆ. ಹೀಗೆ ಚಿಂಪಾಂಜಿಗಳು ಇತರೆ ಪ್ರಾಣಿಗಳನ್ನು ಗೋಳು ಹೊಯ್ದುಕೊಳ್ಳುವ, ಇತರ ಪ್ರಾಣಿಗಳಿಗೆ ತರ್ಲೆ, ತಂಟೆ ಮಾಡುವ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈಗ ಅದೇ ರೀತಿಯ ಹಾಸ್ಯಮಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿಂಪಾಂಜಿಯೊಂದು ಇರಲಾರದೆ ಇರುವೆ ಬಿಟ್ಟುಕೊಂಡು ಪಜೀತಿಗೆ ಸಿಲುಕಿಹಾಕಿಕೊಂಡಿದೆ. ಹೌದು, ನಾವು ಕೆಲವೊಮ್ಮೆ ಬೋರ್ ಆಗ್ತಿದೆ ಅಂತ ನಮ್ಮ ಸ್ನೇಹಿತರಿಗೆ ಕೀಟಲೆ ಮಾಡುವಂತೆ, ಈ ಚಿಂಪಾಂಜಿಯು ಅದರ ಪಕ್ಕದಲ್ಲೇ ಕುಳಿತಿದ್ದ ಮುಳ್ಳುಹಂದಿಗೆ ಕೀಟಲೆ ಮಾಡಲು ಹೋಗಿ, ಪೇಚಿಗೆ ಸಿಲುಕಿದೆ. ಈ ಹಾಸ್ಯಮಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ನಾರಾಯಣ ಲಾಲ್ ಧಮಾನಿಯ (@narayan_lal_rj27) ಎಂಬವರು ಈ ಹಾಸ್ಯಯಮ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿಂಪಾಂಜಿಯೊಂದು ಮುಳ್ಳು ಹಂದಿಗೆ ತರ್ಲೆ ಮಾಡಲು ಹೋಗಿ ಪಜೀತಿಗೆ ಸಿಳುಕಿರುವ ದೃಶ್ಯವನ್ನು ಕಾಣಬಹುದು.
View this post on Instagram
ಇದನ್ನೂ ಓದಿ: ಭಯ ಪಡ್ಕೊಂಡ್ರಾ, ನನ್ ಜಸ್ಟ್ ಪ್ರಾಂಕ್ ಮಾಡಿದ್ದು ಅಷ್ಟೆ, ಆನೆ ಚೇಷ್ಟೆ ನೋಡಿ
ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ಮೃಗಾಲಯದಲ್ಲಿ ಚಿಂಪಾಂಜಿಯೊಂದು ಸುಮ್ಮನೆ ಕುಳಿತಿರುತ್ತೆ. ಹೀಗೆ ಸುಮ್ಮನೆ ಎಷ್ಟು ಹೊತ್ತು ಕೂತಿರಲು ಸಾಧ್ಯ, ಸುಮ್ಮನೆ ಕೂತ್ಕೊಂಡ್ರೆ ಸಿಕ್ಕಾಪಟ್ಟೆ ಬೋರ್ ಆಗುತ್ತೇ, ಅದಕ್ಕಾಗಿ ಏನಾದ್ರೂ ಸ್ವಲ್ಪ ಮಜಾ ತೆಗೆದುಕೊಳ್ಳೊಣ ಎನ್ನುತ್ತಾ, ಅಲ್ಲೇ ಪಕ್ಕದಲ್ಲಿ ಕುಳಿತಿದ್ದಂತಹ ಮುಳ್ಳುಹಂದಿಗೆ ಕೀಟಲೆ ಮಾಡಲು ಹೋಗುತ್ತೆ. ಇದರಿಂದ ಕೋಪಗೊಂಡ ಮುಳ್ಳು ಹಂದಿ, ನನ್ನನ್ನೇ ಮುಟ್ತೀಯಾ, ಇರು ನಿಂಗಿದೆ ಮಾರಿ ಹಬ್ಬ ಎನ್ನುತ್ತಾ, ಚಿಂಪಾಂಜಿಯನ್ನು ಅಟ್ಟಾಡಿಸಿಕೊಂಡು ಹೋಗುತ್ತದೆ. ಅಯ್ಯೋ ದೇವ್ರೆ, ಈ ಕೋಪಿಷ್ಟ ಮುಳ್ಳುಹಂದಿಯಿಂದ ಹೇಗಪ್ಪಾ ತಪ್ಪಿಸಿಕೊಳ್ಳೊದು ಅಂತ ಯೋಚ್ನೆ ಮಾಡಿ ಓಡುತ್ತಾ ಈ ತರ್ಲೆ ಚಿಂಪಾಜಿ ಮರದ ಕೊಂಬೆಯ ಮೇಲೆ ಜಿಗಿಯುವಂತಹ ಹಾಸ್ಯಮಯ ದೃಶ್ಯವನ್ನು ಕಾಣಬಹುದು.
ಜನವರಿ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಮನೆಯಲ್ಲಿ ನಾನು ಮತ್ತು ನನ್ನ ಸಹೋದರ ಇದೇ ರೀತಿ ಜಗಳವಾಡೋದುʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮನುಷ್ಯರಿಗಿಂತ ಈ ಚಿಂಪಾಂಜಿಯೇ ಸಿಕ್ಕಾಪಟ್ಟೆ ತರ್ಲೆ ಮಾಡುತ್ತೆ ಅಂತ ಹೇಳಿದ್ದಾರೆ. ಇನ್ನೂ ಅನೇಕರು ಅಯ್ಯೋ ದೇವ್ರೆ ಈ ಚಿಂಪಾಂಜಿಯ ತರ್ಲೆ ಕೆಲಸವನ್ನು ಕಂಡು ನಕ್ಕು ನಕ್ಕು ಸುಸ್ತಾಯ್ತು ಅಂತ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ