AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pregnancy after age 35: 35ರ ನಂತರದ ಗರ್ಭಧಾರಣೆ, ಹುಟ್ಟುವ ಮಗು ಅಪಾಯಕಾರಿ ರೋಗಕ್ಕೆ ತುತ್ತಾಗಲು ಕಾರಣವಾಗಬಹುದು

35ರ ನಂತರದ ಗರ್ಭಧಾರಣೆ ತಾಯಿ ಹಾಗೂ ಹುಟ್ಟಿಲಿರುವ ಮಗುವಿನ ಮೇಲೆ ನೇರವಾಗಿ ಅಪಾಯವನ್ನು ತಂದೊಡ್ಡಬಹುದು. 35 ವರ್ಷದ ನಂತರ ಗರ್ಭಧಾರಣೆಯು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಗರ್ಭಪಾತದ ಸಾಧ್ಯತೆಯಿದೆ ಎಂದು ದೆಹಲಿಯ ಸ್ತ್ರೀರೋಗತಜ್ಞ ಡಾ.ಚಂಚಲ್ ಶರ್ಮಾ ಎಚ್ಚರಿಸುತ್ತಾರೆ. ಇನ್ನಷ್ಟು ವಿವರ ಇಲ್ಲಿದೆ.

Pregnancy after age 35: 35ರ ನಂತರದ ಗರ್ಭಧಾರಣೆ, ಹುಟ್ಟುವ ಮಗು ಅಪಾಯಕಾರಿ ರೋಗಕ್ಕೆ ತುತ್ತಾಗಲು ಕಾರಣವಾಗಬಹುದು
35ರ ನಂತರದ ಗರ್ಭಧಾರಣೆImage Credit source: Pinterest
ಅಕ್ಷತಾ ವರ್ಕಾಡಿ
|

Updated on:Sep 26, 2023 | 3:23 PM

Share

ಇಂದಿನ ಯುಗದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದು, ಸಂಸಾರಿಕ ಜೀವನಕ್ಕೆ ಹೆಚ್ಚಿನ ಆಸಕ್ತಿಯನ್ನು ತೋರದೆ ತಮ್ಮ ವೃತಿಜೀವನ, ಗುರಿ ಸಾಧನೆಯ ಕಡೆಗೆ ಹೆಚ್ಚಿನ ಒಲವನ್ನು ತೋರುತ್ತಾರೆ. ಇದರಿಂದಾಗಿ ಮದುವೆ ಹಾಗೂ ಗರ್ಭಧಾರಣೆಗೆ ವಿಳಂಬ ಮಾಡುತ್ತಾರೆ. ಆದರೆ 35 ವರ್ಷ ವಯಸ್ಸಿನ ನಂತರ ಗರ್ಭಧಾರಣೆ(Pregnancy) ಯನ್ನು ಬಯಸುವುದು ಅಷ್ಟು ಸುಲಭವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಏಕೆಂದರೆ ವಯಸ್ಸಾದಂತೆ, ಮಹಿಳೆಯ ಫಲವತ್ತತೆಯ ಸಾಮರ್ಥ್ಯದ ಜೊತೆಗೆ ಮೊಟ್ಟೆಯ ಗುಣಮಟ್ಟ ಕಡಿಮೆಯಾಗುತ್ತದೆ.ಈ ಕಾರಣದಿಂದಾಗಿ, ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ ಮತ್ತು ಐವಿಎಫ್ ಅನ್ನು ಆಶ್ರಯಿಸಬೇಕಾಗುತ್ತದೆ. ಇದರ ಹೊರತಾಗಿಯೂ ಗರ್ಭಧರಿಸಿದರೆ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗಿಂತ ಎರಡು ಪಟ್ಟು ಗರ್ಭಪಾತದ ಸಾಧ್ಯತೆಯಿದೆ. ಮತ್ತೊಂದೆಡೆ ಮಗು ಹುಟ್ಟಿದ್ದರೆ ಬಾಲ್ಯದಲ್ಲಿಯೇ ಮಗು ಕೆಲವು ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ದೆಹಲಿಯ ಸ್ತ್ರೀರೋಗತಜ್ಞ ಡಾ.ಚಂಚಲ್ ಶರ್ಮಾ ಎಚ್ಚರಿಸುತ್ತಾರೆ.

35 ನೇ ವಯಸ್ಸಿನ ನಂತರ ಗರ್ಭಧಾರಣೆ:

ವೈದ್ಯರ ಪ್ರಕಾರ 35 ವರ್ಷದ ನಂತರ ಮಹಿಳೆಯರು ಗರ್ಭಿಣಿಯಾಗುವ ಸಾಧ್ಯತೆ ಕೇವಲ 15 ರಿಂದ 30 ಪ್ರತಿಶತ ಎಂದು ಹೇಳುತ್ತಾರೆ. ಮಹಿಳೆಯು ಗರ್ಭಿಣಿಯಾಗಿದ್ದರೂ ಸಹ, ಮಗುವಿಗೆ ಆನುವಂಶಿಕ ಕಾಯಿಲೆಯ ಅಪಾಯವಿದೆ. 32 ನೇ ವಯಸ್ಸಿಗಿಂತ ಮೊದಲು ಗರ್ಭಧಾರಣೆಯ ಬಗ್ಗೆ ಯೋಜಿಸಬೇಕು. ಏಕೆಂದರೆ ಈ ವಯಸ್ಸಿನಲ್ಲಿ ಗರ್ಭಿಣಿಯಾಗುವ ಸಂಭವನೀಯತೆಯು 80 ಪ್ರತಿಶತದವರೆಗೆ ಇರುತ್ತದೆ.

ಇದನ್ನೂ ಓದಿ: ಹದಿಹರೆಯದವರಲ್ಲಿ ಪಿಸಿಓಎಸ್​​​​​ನ ಆರಂಭಿಕ ಚಿಹ್ನೆಗಳು ಹೀಗಿರುತ್ತದೆ

ಗರ್ಭಪಾತದ ಅಪಾಯ:

35 ವರ್ಷದ ನಂತರ ಗರ್ಭಧಾರಣೆಯನ್ನು ಯೋಜಿಸುವ ಮಹಿಳೆಯರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗಿಂತ ಎರಡು ಪಟ್ಟು ಗರ್ಭಪಾತದ ಸಾಧ್ಯತೆಯಿದೆ ಎಂದು ದೆಹಲಿಯ ಸ್ತ್ರೀರೋಗತಜ್ಞ ಡಾ.ಚಂಚಲ್ ಶರ್ಮಾ ಹೇಳುತ್ತಾರೆ. ಈ ವಯಸ್ಸಿನಲ್ಲಿ, ಸ್ಥೂಲಕಾಯತೆಯು ಮಹಿಳೆಯರಲ್ಲಿ ವೇಗವಾಗಿ ಹೆಚ್ಚಾಗುತ್ತದೆ, ಇದರಿಂದಾಗಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವೂ ಹೆಚ್ಚಾಗುತ್ತದೆ. ವಯಸ್ಸು ಹೆಚ್ಚಾದಂತೆ ಸಾಮಾನ್ಯ ಹೆರಿಗೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಿ ಸೆಕ್ಷನ್ ಸರ್ಜರಿ ಮಾಡಬೇಕಾಗುತ್ತದೆ. ಇದರಿಂದಾಗಿ ಅಪಾಯ ಹೆಚ್ಚು.

ಮಗು ಈ ರೋಗಗಳಿಂದ ಬಳಲಬಹುದು:

ಡಾ. ಚಂಚಲ್ ಶರ್ಮಾ ಅವರು, 35 ವರ್ಷದ ನಂತರ ನೀವು ಗರ್ಭಿಣಿಯಾಗಿದ್ದರೆ, ಮಗುವಿಗೆ ಕೆಲವು ಕಾಯಿಲೆಗಳ ಅಪಾಯವಿದೆ ಎಂದು ಹೇಳುತ್ತಾರೆ. ಟೈಪ್ 1 ಮಧುಮೇಹದಂತಹ ಅನುವಂಶಿಕ ಕಾಯಿಲೆಗಳ ಅಪಾಯವಿದೆ. ಕೆಲವು ಸಂದರ್ಭಗಳಲ್ಲಿ ಮಗು ಡೌನ್ ಸಿಂಡ್ರೋಮ್(ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ದೋಷ) ನಂತಹ ಕಾಯಿಲೆಗೆ ಬಲಿಯಾಗಬಹುದು. ಈ ಕಾಯಿಲೆಯಿಂದಾಗಿ, ಮಗುವಿಗೆ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥತೆ ಅಥವಾ ಥೈರಾಯ್ಡ್ ಅಪಾಯವಿದೆ, ಆದರೂ ಇದು ಎಲ್ಲಾ ಸಂದರ್ಭಗಳಲ್ಲಿ ಸಂಭವಿಸುವುದಿಲ್ಲ. 35 ವರ್ಷ ವಯಸ್ಸಿನ ನಂತರ, ಪ್ರತಿ 150 ಮಕ್ಕಳಲ್ಲಿ ಒಬ್ಬರು ಈ ರೋಗಗಳ ಅಪಾಯದಲ್ಲಿದ್ದಾ. ಅಂತಹ ಪರಿಸ್ಥಿತಿಯಲ್ಲಿ, ತಡವಾಗಿ ಮಗುವನ್ನು ಯೋಜಿಸದಂತೆ ಮಹಿಳೆಯರಿಗೆ ಸಲಹೆ ನೀಡಲಾಗುತ್ತದೆ.

ನೀವು 35ರ ನಂತರ ಗರ್ಭಧರಿಸಲು ಬಯಸಿದರೆ ಈ ಅಂಶ ನೆನಪಿನಲ್ಲಿಡಿ:

  • ಸಾಕಷ್ಟು ನಿದ್ರೆ ಪಡೆಯಿರಿ
  • ಆರೋಗ್ಯಕರ ಆಹಾರ
  • ಮಾನಸಿಕ ಒತ್ತಡದಿಂದ ದೂರವಿರಿ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:21 pm, Tue, 26 September 23

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ