Sign In

By signing in or creating an account, you agree with Associated Broadcasting Company's Terms & Conditions and Privacy Policy.

Pregnancy Kit: ಲಾಲಾರಸದ ಮೂಲಕ ಗರ್ಭಧಾರಣೆ ಪರೀಕ್ಷೆ ಮಾಡುವ ವಿಶ್ವದ ಮೊದಲ ಕಿಟ್ ಬಿಡುಗಡೆ

ಜೆರುಸಲೇಂ ಮೂಲದ ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್ ಅಭಿವೃದ್ಧಿ ಪಡಿಸಿದ ಈ ಉತ್ಪನ್ನವು ಕೇವಲ ಲಾಲಾರಸ ಪರೀಕ್ಷೆಯೊಂದಿಗೆ ಗರ್ಭಧಾರಣೆಯನ್ನು ಪತ್ತೆಹಚ್ಚುವ ಮೊದಲ ಉತ್ಪನ್ನವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Pregnancy Kit: ಲಾಲಾರಸದ ಮೂಲಕ ಗರ್ಭಧಾರಣೆ ಪರೀಕ್ಷೆ ಮಾಡುವ ವಿಶ್ವದ ಮೊದಲ ಕಿಟ್ ಬಿಡುಗಡೆ
ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 20, 2023 | 5:01 PM

ಯುಕೆ ಇತ್ತೀಚೆಗೆ ಹೊಸ ಗರ್ಭಧಾರಣೆ ಪರೀಕ್ಷಾ ಕಿಟ್​​​ನ್ನು (Pregnancy Kit) ಬಿಡುಗಡೆ ಮಾಡಿದೆ. ಇದು ಮಹಿಳೆಯ ಲಾಲಾರಸ (ಸಲೈವಾ) ಮಾತ್ರ ಉಪಯೋಗಿಸಿಕೊಂಡು ಗರ್ಭಧಾರಣೆಯನ್ನು ಖಚಿತ ಪಡಿಸುತ್ತದೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ. ಜೆರುಸಲೇಂ ಮೂಲದ ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್ ಅಭಿವೃದ್ಧಿ ಪಡಿಸಿದ ಈ ಕ್ರಾಂತಿಕಾರಿ ಉತ್ಪನ್ನವು ಕೇವಲ ‘ಲಾಲಾರಸ (ಉಗುಳು) ಪರೀಕ್ಷೆ’ಯೊಂದಿಗೆ ಗರ್ಭಧಾರಣೆಯನ್ನು ಪತ್ತೆ ಹಚ್ಚುವ ಮೊದಲ ಉತ್ಪನ್ನವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪರೀಕ್ಷಾ ಕಿಟ್ ದೇಶದ ಔಷಧ ಉದ್ಯಮಕ್ಕೆ ಹೊಡೆತ ನೀಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ದಿ ಸನ್ ವರದಿಯ ಪ್ರಕಾರ, ಗರ್ಭಧಾರಣೆಯನ್ನು ಕಂಡು ಹಿಡಿಯುವಲ್ಲಿ ಈ ಪರೀಕ್ಷಾ ಕಿಟ್ ಶೇಕಡಾ 97 ರಷ್ಟು ನಿಖರವಾಗಿದೆ. ತಂತ್ರಜ್ಞಾನವು ವರ್ಧಿತ ಬಳಕೆದಾರ ಅನುಭವವಾಗಿದೆ ಮತ್ತು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ, ಪರೀಕ್ಷೆಯ ಫಲಿತಾಂಶಗಳು 15 ನಿಮಿಷಗಳಲ್ಲಿ ನೀಡುತ್ತವೆ ಎಂದು ಕಂಪೆನಿಗೆ ಸಂಬಂಧಪಟ್ಟವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಮೊದಲು ಬಳಸುತ್ತಿರುವ ಸಾಂಪ್ರದಾಯಿಕ ಮೂತ್ರ ಪರೀಕ್ಷೆಗಳಲ್ಲಿ ಫಲಿತಾಂಶಗಳನ್ನು ಮೂರು ನಿಮಿಷಗಳಲ್ಲಿ ದೃಢೀಕರಿಸಬಹುದಾಗಿದೆ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Pregnancy Diet: ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಬೇಕಾದ ಅಗತ್ಯ ಪೋಷಕಾಂಶ ಆಹಾರಗಳು ಯಾವುವು? ಇಲ್ಲಿದೆ ತಜ್ಞರ ಸಲಹೆ 

ಹೇಗೆ ಬಳಸುವುದು?

ಮನೆಯಲ್ಲಿಯೇ ಮಾಡಲಾಗುತ್ತಿದ್ದ ಕೋವಿಡ್ ಪರೀಕ್ಷಾ ಕಿಟ್​​ಗಳಿಂದ ಈ ಐಡಿಯಾ ಸ್ಫೂರ್ತಿ ಪಡೆದಿದೆ ಎಂದು ಕಂಪನಿಯು ಹೇಳಿಕೊಂಡಿದ್ದು. ಮೆಟ್ರೋದಲ್ಲಿನ ವರದಿ ಹೇಳುವ ಪ್ರಕಾರ, ನಾವು ಥರ್ಮಾಮೀಟರ್ ಅನ್ನು ಬಳಸುವಂತೆಯೇ, ಬಳಕೆದಾರರು ಕೆಲವು ಕ್ಷಣಗಳ ಕಾಲ ಈ ಕಿಟ್ ಬಾಯಿಯಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ. ಬಳಿಕ ಇದು ಗ್ರಾಹಕರ ಲಾಲಾರಸವನ್ನು ಸಂಗ್ರಹಿಸಲು ಕಿಟ್ ಗೆ ಸಹಾಯ ಮಾಡುತ್ತದೆ. ನಂತರ ಪರೀಕ್ಷಾ ಕಿಟ್ ಜೈವಿಕ ರಾಸಾಯನಿಕ ಕ್ರಿಯೆ ನಡೆಯುವ ಪ್ಲಾಸ್ಟಿಕ್ ಟ್ಯೂಬ್ ನಲ್ಲಿ ಇಟ್ಟ ಬಳಿಕ ಈ ಪರೀಕ್ಷೆಯು ಗರ್ಭಧಾರಣೆಗೆ ಅಗತ್ಯವಾಗಿರುವ ನಿರ್ದಿಷ್ಟವಾದ ಹಾರ್ಮೋನ್ ಅನ್ನು ಕಂಡುಹಿಡಿಯುತ್ತದೆ. ಲಾಲಾರಸದಲ್ಲಿರುವ ಭ್ರೂಣದ ಬೆಳವಣಿಗೆಯು ಗರ್ಭಾಶಯವನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಯನ್ನು ಈ ಕಿಟ್ನ ಹಿಂಬದಿಯಲ್ಲಿ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ.

ಪರೀಕ್ಷಾ ಕಿಟ್ ಇನ್ನೂ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಯುಎಸ್ ಎಫ್ಡಿಎ) ಮಾರುಕಟ್ಟೆ ಅನುಮೋದನೆಯನ್ನು ಪಡೆಯದಿದ್ದರೂ, ಕಳೆದ ವರ್ಷ ಯುರೋಪಿಯನ್ ಒಕ್ಕೂಟದಲ್ಲಿ ಮಾರಾಟ ಮಾಡಲು ಪ್ರಮಾಣೀಕರಣವನ್ನು ಪಡೆದಿದೆ ಎಂದು ಹಳೆಯ ಟೈಮ್ಸ್ ಆಫ್ ಇಸ್ರೇಲ್ ವರದಿ ತಿಳಿಸಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 4:47 pm, Tue, 20 June 23

50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ