Pregnancy Diet: ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಬೇಕಾದ ಅಗತ್ಯ ಪೋಷಕಾಂಶ ಆಹಾರಗಳು ಯಾವುವು? ಇಲ್ಲಿದೆ ತಜ್ಞರ ಸಲಹೆ 

ಗರ್ಭಾವಸ್ಥೆಯಲ್ಲಿ ಆರೊಗ್ಯಕರ ಆಹಾರವನ್ನು ಸೇವನೆಯು ಮಗುವಿನ ಸರಿಯಾದ ಬೆಳವಣಿಗೆಗೆ ಅವಶ್ಯಕವಾಗಿದೆ. ಗರ್ಭಿಣಿಯರು ತಮ್ಮ ಆಹಾರದಲ್ಲಿ ಸೇರಿಸಬೇಕಾದ ಕೆಲವು ಅಗತ್ಯ ಪೋಷಕಾಂಶಗಳ ಕುರಿತ ಮಾಹಿತಿ ಇಲ್ಲಿದೆ.

Pregnancy Diet: ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಬೇಕಾದ ಅಗತ್ಯ ಪೋಷಕಾಂಶ ಆಹಾರಗಳು ಯಾವುವು? ಇಲ್ಲಿದೆ ತಜ್ಞರ ಸಲಹೆ 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 14, 2023 | 4:36 PM

ಪ್ರತಿಯೊಬ್ಬ ಗರ್ಭಿಣಿಯು ಸರಿಯಾದ ರೀತಿಯ ಆಹಾರಕ್ರಮಗಳನ್ನು ಪಾಲಿಸಬೆಕಾಗುತ್ತದೆ. ಏಕೆಂದರೆ ತಾಯಿ ಸೇವಿಸುವ ಆಹಾರದಿಂದ ಗರ್ಭದೊಳಗಿನ ಮಗುವಿನ ಆರೋಗ್ಯ ನಿರ್ಧರಿತವಾಗುತ್ತದೆ. ತಾಯಿ ಪೋಷಕಾಂಶಯುಕ್ತ ಹಾಗೂ ಆರೋಗ್ಯಕರ ಆಹಾವನ್ನು ಸೇವಿಸಿದರೆ ಗರ್ಭದೊಳಗಿನ ಮಗುವಿನ ಆರೋಗ್ಯವೂ ಉತ್ತಮವಾಗಿರುತ್ತದೆ ಮತ್ತು ಇದು ಆರೋಗ್ಯಕರ ಬೆಳವಣಿಗೆಗೂ ಸಹಕಾರಿಯಾಗಿದೆ. ಆರೋಗ್ಯ ತಜ್ಞರ ಪ್ರಕಾರ, ವಿಟಮಿನ್​​ಗಳು ಮತ್ತು ಮಿನರಲ್​​ಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಊಟವನ್ನು ಗರ್ಭಿಣಿಯರು ಸೇವಿಸುವುದು ಗರ್ಭದಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗುತ್ತದೆ. ಪೌಷ್ಟಿಕತಜ್ಞೆ ಲೋವ್ನೀತ್ ಬಾತ್ರಾ ಅವರು ಗರ್ಭಿಣಿಯರು ತಮ್ಮ ಆಹಾರದಲ್ಲಿ ಸೇವಿಸಬೇಕಾದ ಅಗತ್ಯ ಪೋಷಕಾಂಶಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಅವರ ಪ್ರಕಾರ ಪೌಷ್ಟಿಕಾಂಶದ ಕೊರತೆಯು ರಕ್ತಹೀನತೆ, ಆಯಾಸ, ಸೋಂಕು ಮತ್ತು ನರ ಸಂಬಂಧಿ ತೊಡಕುಗಳನ್ನು ಅಭಿವೃದ್ಧಿಪಡಿಸುವ ಅಪಾಯಕ್ಕೆ ಕಾರಣವಾಗಬಹುದು. ಕಳಪೆ ಮಟ್ಟದ ಪೋಷಕಾಂಶಗಳ ಸೇವನೆಯು ನವಜಾತ ಶಿಶುವಿನ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಇದು ಗರ್ಭಾಶಯದ ಬೆಳವಣಿಗೆಯ ಕುಂಠಿತ, ಜನ್ಮ ದೋಷಗಳು, ಪೆರಿನಾಟಲ್ ಮರಣ, ರಕ್ತಪರಿಚಲನೆ, ಕರುಳು ಮತ್ತು ಉಸಿರಾಟದ ಅಸ್ವಸ್ಥತೆಗಳು ಹಾಗೆಯೇ ಕೆಲವು ಅಂಗಗಳ ಅಭಿವೃದ್ಧಿಯಾಗದಂತಹ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Pregnancy Diet Tips: ಚಳಿಗಾಲದಲ್ಲಿ ಗರ್ಭಿಣಿಯರು ಯಾವ ರೀತಿಯ ಆಹಾರ ಸೇವಿಸಬೇಕು, ಇಲ್ಲಿದೆ ಮಾಹಿತಿ

ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಅವರು ಗರ್ಭಾವಸ್ಥೆಯಲ್ಲಿ ಮಹಿಳೆಯು ಈ ಐದು ಅತ್ಯಂತ ಅಗತ್ಯವಾದ ಪೋಷಕಾಂಶಗಳನ್ನು ಸೇವಿಸಬೇಕೆಂದು ಹೇಳುತ್ತಾರೆ:

ಫೋಲಿಕ್ ಆಮ್ಲ: ಇದು ವಿಟಮಿನ್ ಬಿ ಪೋಷಕಾಂಶವಾಗಿದ್ದು, ಪೌಷ್ಟಿಕಾಂಶದ ಕೊರತೆಯ ವಿವಿಧ ದುಷ್ಪರಿಣಾಮವನ್ನು ತಡೆಯಲು ಸಹಾಯ ಮಾಡುತ್ತದೆ.

ಕ್ಯಾಲ್ಸಿಯಂ: ಮೂಳೆಗಳನ್ನು ಗಟ್ಟಿಗೊಳಿಸಲು ಕ್ಯಾಲ್ಸಿಯಂನ ಅಗತ್ಯವಿದೆ ಮತ್ತು ತಾಯಿಯ ದೇಹದಲ್ಲಿ ಅದರ ಕೊರತೆಯಿದ್ದರೆ, ಅದು ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ.

ವಿಟಮಿನ್ ಡಿ: ಈ ವಿಟಮಿನ್ ಕ್ಯಾಲ್ಸಿಯಂನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಇದು ಮಗುವಿನ ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಬ್ಬಿಣ: ಗರ್ಭಿಣಿ ಮಹಿಳೆಯರು ಕಬ್ಬಿಣಾಂಶ ಇರುವ ಆಹಾರಗಳನ್ನು ಸೇವಿಸಬೇಕು. ಏಕೆಂದರೆ ಇದು ಬಹುತೇಕ ದೇಹದ ಎಲ್ಲಾ ಚಟುವಟಿಕೆಗಳಿಗೆ ಪ್ರೇರಕ ಅಂಶವಾಗಿದೆ. ಹಸಿರು ಎಲೆ ತರಕಾರಿಗಳನ್ನು ಸೇವಿಸುವ ಮೂಲಕ ದೇಹದಲ್ಲಿ ಆರೋಗ್ಯಕರ ಕಬ್ಬಿನಾಂಶವನ್ನು ಪಡೆಯಬಹುದು.

ಪ್ರೋಟೀನ್: ಪ್ರೋಟೀನ್ ದೇಹಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಇದು ಸ್ನಾಯುಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಮಾಂಸಾಹಾರಿಗಳು ಇದನ್ನು ವಿವಿಧ ರೀತಿಯ ಮಾಂಸಗಳನ್ನು ಸೇವಿಸುವ ಮೂಲಕ ಪಡೆಯುತ್ತಾರೆ. ನೀವು ಸಸ್ಯಾಹಾರಿಗಳಾಗಿದ್ದರೆ, ಬೇಳೆಕಾಳುಗಳು, ಕಾಟೇಜ್ ಚೀಸ್ ನಂತಹ ಪ್ರೋಟೀನ್ಯುಕ್ತ ಆಹಾರಗಳನ್ನು ಸೇವನೆ ಮಾಡುವ ಮೂಲಕ ಪ್ರೋಟೀನ್​​ನನ್ನು ಪಡೆದುಕೊಳ್ಳಬಹುದು.

Published On - 4:36 pm, Fri, 14 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ