Viral Video: ಇದಪ್ಪಾ ಫ್ರೆಂಡ್ಶಿಪ್ ಅಂದ್ರೆ; ಗಿಳಿರಾಯನಿಗೆ ಪ್ರೀತಿಯ ಕೈ ತುತ್ತು ನೀಡಿದ ಕಪಿರಾಯ

ಸೋಷಿಯಲ್ ಮೀಡಿಯಾದಲ್ಲಿ ಪಕ್ಷಿ ಮತ್ತು ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ, ಭಾವನಾತ್ಮಕ ಹಾಗೇನೇ ಹಾಸ್ಯಮಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಸದ್ಯ ಅಂತಹದ್ದೇ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ಕೋತಿಯೊಂದು ತನ್ನ ಸ್ನೇಹಿತನಾದ ಗಿಳಿರಾಯನಿಗೆ ಪ್ರೀತಿಯ ಕೈತುತ್ತು ನೀಡಿದೆ. ಈ ನಿಶ್ಕಲ್ಮಶ ಪ್ರೀತಿಯನ್ನು ಕಂಡು ಇದಪ್ಪಾ ರಿಯಲ್ ಫ್ರೆಂಡ್ಶಿಪ್ ಅಂದ್ರೆ ಎಂದು ನೆಟ್ಟಿಗರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

Viral Video: ಇದಪ್ಪಾ ಫ್ರೆಂಡ್ಶಿಪ್ ಅಂದ್ರೆ; ಗಿಳಿರಾಯನಿಗೆ ಪ್ರೀತಿಯ ಕೈ ತುತ್ತು ನೀಡಿದ ಕಪಿರಾಯ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Feb 22, 2024 | 8:45 PM

ಸ್ನೇಹ ಎಂಬುದು ಬೆಲೆ ಕಟ್ಟಲಾಗದ ಅದ್ಭುತ ಸಂಪತ್ತು. ಸ್ನೇಹ ನಮ್ಮ ಬಲ ಕೂಡಾ ಹೌದು. ಮನುಷ್ಯರಾದ ನಾವೆಲ್ರೂ ಭಾವಿಸೋದು ಏನಂದ್ರೆ, ನಮ್ಮ ಸ್ನೇಹಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ಪ್ರಾಣಿಗಳಲ್ಲಿ ಇಂತಹ ಸ್ನೇಹವನ್ನು ಕಾಣಲು ಸಾಧ್ಯವಿಲ್ಲ ಅಂತ. ಆದ್ರೆ ಪ್ರಾಣಿ ಪಕ್ಷಿಗಳಲ್ಲಿ ಮನುಷ್ಯರಿಗಿಂತಲೂ ಹೆಚ್ಚಾದ ಮಧುರ ಸ್ನೇಹ ಬಾಂಧವ್ಯವಿದೆ. ಇದಕ್ಕೆ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಮಾನ್ಯವಾಗಿ ವಿಭಿನ್ನ ಜಾತಿಗಳಿಗೆ ಸೇರಿದ ಪ್ರಾಣಿಗಳಾಗಿರಲಿ ಅಥವಾ ಪಕ್ಷಿಗಳಾಗಿರಲಿ, ಅವುಗಳು ಒಂದಕ್ಕೊಂದು ಹೊಂದಿಕೊಳ್ಳುವುದು ತೀರಾ ವಿರಳ. ನೀವೆಲ್ಲರೂ ಪ್ರಾಣಿ ಪಕ್ಷಿಗಳು ಜಗಳವಾಡುವುದನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಅವುಗಳು ಯಾವತ್ತಾದ್ರೂ ಪ್ರೀತಿಯಿಂದ ಇರುವ ಸುಂದರ ಬಾಂಧವ್ಯದ ವಿಡಿಯೋವನ್ನು ನೋಡಿದ್ದೀರಾ? ಹಾಗಿದ್ರೆ ಈ ವಿಡಿಯೋವನ್ನು ಒಮ್ಮೆ ನೋಡಿ.

ಪ್ರಾಣಿ ಪಕ್ಷಿಗಳ ಸ್ನೇಹದ ದೃಶ್ಯಗಳನ್ನು ನೋಡುವ ಖುಷಿಯೇ ಬೇರೆ. ಅದರಲ್ಲೂ ಭಿನ್ನ ಪ್ರಭೇದದ ಜೀವಿಗಳ ನಡುವಿನ ಗೆಳೆತನವನ್ನು ನೋಡಲು ಎರಡು ಕಣ್ಣುಗಳು ಸಾಲದು. ಸದ್ಯ ಅಂತಹದ್ದೊಂದು ಸುಂದರ ಸ್ನೇಹ ಬಾಂಧವ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಕೋತಿ ಮತ್ತು ಗಿಳಿರಾಯನ ಸ್ನೇಹವನ್ನು ಕಂಡು ರಿಯಲ್ ಫ್ರೆಂಡ್ಶಿಪ್ ಅಂದ್ರೆ ಇದಪ್ಪಾ ಅಂತ ನೆಟ್ಟಿಗರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು @suni_pets ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಸ್ನೇಹ ಬಾಂಧವ್ಯ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಸುಂದರವಾದ ಮಕಾವ್ ಗಿಳಿ ಮತ್ತು ಕೋತಿ ಮರಿಯ ನಡುವಿನ ಸುಂದರ ಸ್ನೇಹ ಬಾಂಧವ್ಯದ ದೃಶ್ಯವನ್ನು ಕಾಣಬಹುದು. ಕೋತಿ ಮರಿ ನೋಡು ಸ್ವಲ್ಪ ಮಾತ್ರ ತಿನ್ಬೇಕು ಅಂತ ಹೇಳಿ ತನ್ನ ಕೈಯಲ್ಲಿದ್ದ ತಿಂಡಿಯನ್ನು ಗಿಳಿರಾಯನಿಗೆ ತಿನ್ನಿಸುತ್ತದೆ. ನಂತರ ಕೋತಿ ಆ ತಿಂಡಿಯನ್ನು ತಿನ್ನುವಾಗ, ಓ ಮಾರಾಯ ನೀ ಕೊಟ್ಟ ತಿಂಡಿ ಚೂರೂ ಸಾಕಾಗಿಲ್ಲ ಇನ್ನಾ ಸ್ವಲ್ಪ ತಿನ್ನಿಸು ಎಂದು ಗಿಳಿರಾಯ ಕೋತಿಯ ಕೈ ಹಿಡಿದುಕೊಂಡು ಕೇಳಿಕೊಳ್ಳುತ್ತೆ. ಆ ಸಂದರ್ಭದಲ್ಲಿ ಮುದ್ದಾದ ಕೋತಿ ಮರಿ ತಗೋ ತಿನ್ನು ಎಂದು ಇನ್ನೊಂದು ಬಾರಿ ಕೈ ತುತ್ತು ನೀಡುತ್ತೆ. ಈ ಇಬ್ಬರ ನಡುವಿನ ಸ್ನೇಹಕ್ಕೆ ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಅರ್ಜೆಂಟ್ ಡಾಕ್ಟರ್ ಸಾಹೇಬ್ರನ್ನ ನೋಡ್ಬೇಕಿತ್ತು; ಆಸ್ಪತ್ರೆ ವಾರ್ಡ್​​ಗೆ ಬಂದ ಗೂಳಿ 

ಫೆಬ್ರವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಎರಡು ಲಕ್ಷಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಈ ಸ್ನೇಹ ತುಂಬಾನೇ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಾಣಿಗಳು ಮತ್ತು ಪಕ್ಷಿಗಳು ಮನುಷ್ಯರಿಗಿಂತ ಎಷ್ಟೋ ಉತ್ತಮʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದುವೇ ನಿಜವಾದ ಸ್ನೇಹʼ ಎಂದು ಹೇಳಿದ್ದಾರೆ. ಹಾಗೂ ಹಲವರು ಮನುಷ್ಯರಿಗೆ ಹೋಲಿಸಿದರೆ ಈ ಮುಗ್ಧ ಜೀವಿಗಳಲ್ಲಿ ಮಾತ್ರ ನಿಷ್ಕಲ್ಮಶ ಪ್ರೀತಿಯನ್ನು ಕಾಣಲು ಸಾಧ್ಯ. ಇದೇ ನಿಸ್ವಾರ್ಥ ಪ್ರೇಮ ಎಂದು ಈ ಮುದ್ದಾದ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ