AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Post: ಅರ್ಜೆಂಟ್ ಡಾಕ್ಟರ್ ಸಾಹೇಬ್ರನ್ನ ನೋಡ್ಬೇಕಿತ್ತು;  ಆಸ್ಪತ್ರೆ ವಾರ್ಡ್​​ಗೆ ಬಂದ ಗೂಳಿ 

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಕುತೂಹಲಕಾರಿ ಹಾಗೂ ಹಾಸ್ಯಮಯ ವಿಡಿಯೋಗಳು, ಪೋಸ್ಟ್​​​ಗಳು ಹರಿದಾಡುತ್ತಿರುತ್ತವೆ. ಸದ್ಯ ಅಂತಹದ್ದೇ ಪೋಸ್ಟ್ ಒಂದು ಇದೀಗ ವೈರಲ್ ಆಗಿದ್ದು, ಉತ್ತರ ಪ್ರದೇಶದಲ್ಲಿನ ಜಿಲ್ಲಾ ಆಸ್ಪತ್ರೆಯ ವಾರ್ಡ್ ಒಳಗೆ ಏಕಾಏಕಿ ಗೂಳಿಯೊಂದು ನುಗ್ಗಿದೆ. ಈ ದೃಶ್ಯವನ್ನು ಕಂಡು ಅಬ್ಬಬ್ಬಾ ಈ ದೈತ್ಯ ಗೂಳಿ ಅದೇಗೆ ಆಸ್ಪತ್ರೆಗೆ ನುಗ್ಗಲು ಸಾಧ್ಯ ಎಂದು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ. 

Viral Post: ಅರ್ಜೆಂಟ್ ಡಾಕ್ಟರ್ ಸಾಹೇಬ್ರನ್ನ ನೋಡ್ಬೇಕಿತ್ತು;  ಆಸ್ಪತ್ರೆ ವಾರ್ಡ್​​ಗೆ ಬಂದ ಗೂಳಿ 
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 22, 2024 | 3:26 PM

Share

ಹೆಚ್ಚಾಗಿ ನಗರಗಳಲ್ಲಿ, ಪಟ್ಟಣಗಳಲ್ಲಿ ಬೀಡಾಡಿ ಪ್ರಾಣಿಗಳ ಕಾಟ ಇದ್ದೇ ಇರುತ್ತವೆ. ಆಹಾರವನ್ನರಸುತ್ತಾ ಬರುವ ಈ ಮುಗ್ಧ ಜೀವಿಗಳು ಹಾಗೊಮ್ಮೆ ಹೀಗೊಮ್ಮೆ ಸ್ಥಳೀಯರಿಗೆ ತೊಂದರೆ ಕೊಡುತ್ತಿರುತ್ತವೆ. ಸಂತೆಗಳಲ್ಲಿ ತರಕಾರಿ ತಿನ್ನೋದಾಗಿರಲಿ, ವಾಹನ ಸಂಚಾರಕ್ಕೆ ಅಡಚಣೆ ಮಾಡೋದಾಗಿರಲಿ ಈ ರೀತಿ ಸಣ್ಣ ಪುಟ್ಟ ತೊಂದರೆಗಳನ್ನು ಉಂಟು ಮಾಡುತ್ತವೆ. ಕೆಲ ದಿನಗಳ ಹಿಂದೆ ಆಹಾರವನ್ನರಸುತ್ತಾ ಬಂದ ಗೂಳಿಯೊಂದು ಉತ್ತರ ಪ್ರದೇಶದ ಉನ್ನಾವೋದಲ್ಲಿರು ಎಸ್.ಬಿ.ಐ ಬ್ಯಾಂಕಿಗೆ   ನುಗ್ಗಿದ ಸುದ್ದಿಯೊಂದು ಬಹಳ ವೈರಲ್ ಆಗಿತ್ತು, ಈಗ ಅಂತಹದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಆಹಾರವನ್ನರಸುತ್ತಾ ಬಂತಂತಹ ಬೀಡಾಡಿ ಗೂಳಿಯೊಂದು ಆಸ್ಪತ್ರೆಯ ವಾರ್ಡ್ ಒಳಗೆ  ಎಂಟ್ರಿ ಕೊಟ್ಟಿದೆ. ಈ ಕುರಿತ  ಫೋಟೋವೊಂದು ಇದೀಗ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಘಟನೆ ಉತ್ತರ ಪ್ರದೇಶದ  ರಾಯ್ಬರೇಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದ್ದು, ಆಹಾರವನ್ನರಸುತ್ತಾ ಬಂದಂತಹ ಗೂಳಿಯೊಂದು ದಾರಿ ತಪ್ಪಿ ಆಸ್ಪತ್ರೆಯ ವಾರ್ಡಿನೊಳಗೆ ನುಗ್ಗಿದೆ. ಸೋಮವಾರ (ಫೆ.19) ರಾತ್ರಿ 10 ಗಂಟೆಯ ಸುಮಾರಿಗೆ ರಾಯ್ಬರೇಲಿ ಜಿಲ್ಲಾ ಆಸ್ಪತ್ರೆಯ ವಾರ್ಡ್ ನಂಬರ್ ಎರಡಕ್ಕೆ ಗೂಳಿಯಂದು  ಏಕಾಏಕಿ ಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಮತ್ತು ರೋಗಿಗಳಲ್ಲಿ ಆತಂಕ ಉಂಟಾಯಿತು. ನಂತರ ಹೇಗೋ ಆ ಗೂಳಿಯನ್ನು ವಾರ್ಡ್ ನಿಂದ ಹೊರಗೆ ಕಳುಹಿಸಲಾಯಿತು.

ಈ ಕುರಿತ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋವನ್ನು ಸಚಿನ್ ಗುಪ್ತಾ (@SachinGuptaUp) ಎಂಬವರು ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ವೈರಲ್​​ ಪೋಸ್ಟ್ ಇಲ್ಲಿದೆ:

ಈ ವೈರಲ್ ಪೋಟೋದಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿಯ ಜಿಲ್ಲಾ ಆಸ್ಪತ್ರೆಯ ವಾರ್ಡ್​​ನಲ್ಲಿ ಗೂಳಿಯೊಂದು ಶಾಂತ ರೀತಿಯಲ್ಲಿ ನಿಂತಿರುವುದನ್ನು ಹಾಗೂ ಅಲ್ಲಿದ್ದ ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಆ ಗೂಳಿಯನ್ನು ಆಶ್ಚರ್ಯಚಕಿತರಾಗಿ ನೋಡುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕರಿಮಣಿ ಮಾಲೀಕ ನಾನಲ್ಲಂತಿ, ಅಂತು ಇಂತು ಮುಗಿಸ್ಯಾಕ ನಿಂತಿ ನೀ ನನ್ನ ಸಂತಿ 

ಫೆಬ್ರವರಿ  20 ರಂದು ಹಂಚಿಕೊಳ್ಳಲಾದ  ಈ ಪೋಸ್ಟ್ 7 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼರೋಗಿಗಳನ್ನು ದಿಢೀರ್ ತಪಾಸಣೆ ಮಾಡಲು ಬಂದಿರುವ ಗೌರವಾನ್ವಿತ ಡಾಕ್ಟರ್ʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಷ್ಟು ದೊಡ್ಡ ಆಸ್ಪತ್ರೆಯ ಒಳಗೆ ಪ್ರಾಣಿ ಬಂದಿದ್ದರೂ ಅಲ್ಲಿರುವವರು ಸುಮ್ಮನಿದ್ದಾರೆ, ಬಹುಶಃ ಅಲ್ಲಿನ ವೈದ್ಯರು ಮತ್ತು ರೋಗಿಗಳು ಪ್ರಾಣಿಪ್ರಿಯರಾಗಿರಬೇಕುʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹುಶಃ ಈ ಗೂಳಿ ಟೆಟನಸ್ ಇಂಜೆಕ್ಷನ್ ತೆಗೆದುಕೊಳ್ಳಲು ಬಂದಿರಬೇಕುʼ  ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ಆಸ್ಪತ್ರೆಯ ಒಳಗೆ ದೈತ್ಯ ಗೂಳಿ ನುಗ್ಗಲು ಹೇಗೆ ಸಾಧ್ಯ ಎಂದು ಅಚ್ಚರಿ ಪಟ್ಟಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!