Viral Video: ಮನೆಯಿಂದ ಹೊರಗಡೆ ಕಾಲಿಡಂಗಿಲ್ಲ, ಇಲ್ಲೇ ಆಟ ಆಡ್ಬೇಕು ಅಷ್ಟೆ, ಶ್ವಾನದ ಕಾಳಜಿ ನೋಡಿ
ನಿಯತ್ತು, ನಿಷ್ಠೆ, ನಿಸ್ವಾರ್ಥ ಪ್ರೀತಿಯ ಸಂಕೇತವಾಗಿರುವ ಶ್ವಾನಗಳು ತಮ್ಮನ್ನು ಸಾಕಿದವರಿಗಾಗಿ, ಒಂದು ಹೊತ್ತು ಊಟ ಹಾಕಿದವರಿಗಾಗಿ, ಪ್ರೀತಿ ತೋರಿಸಿದವರಿಗಾಗಿ ಪ್ರಾಣವನ್ನೂ ಕೂಡ ತ್ಯಾಗ ಮಾಡಬಲ್ಲದು. ಹೀಗೆ ಮಾಲೀಕರ ರಕ್ಷಣೆಗೆ ನಿಂತಂತಹ ಶ್ವಾನಗಳ ಕುರಿತ ಹಲವಾರು ಸುದ್ದಿಗಳನ್ನು ನೀವು ನೋಡಿರಬಹುದು. ಈಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಶ್ವಾನವೊಂದು ಮನೆಯ ಪುಟ್ಟ ಮಗುವನ್ನು ಹೊರಗಡೆ ಕಾಲಿಡದಂತೆ ಜೋಪಾನ ಮಾಡಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಶ್ವಾನಗಳ ನಿಶ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿ ಯಾವುದು ಇಲ್ಲ. ಇವುಗಳು ಮನುಷ್ಯನ ಆಪ್ತ ಸ್ನೇಹಿತ ಅಂತಾನೇ ಹೇಳಬಹುದು. ಅದರಲ್ಲೂ ಪುಟ್ಟ ಮಕ್ಕಳೊಂದಿಗೆ ಶ್ವಾನಗಳು ತುಂಬಾನೇ ಆತ್ಮೀಯವಾಗಿರುತ್ತವೆ. ಮಕ್ಕಳು ಕೂಡಾ ಅಷ್ಟೇ, ತಮ್ಮ ಈ ಮುಗ್ಧ, ನಿಷ್ಕಲ್ಮಶ ಮನಸ್ಸಿನ ಸ್ನೇಹಿತರೊಂದಿಗೆ ಆಟವಾಡಲು ಬಹಳನೇ ಇಷ್ಟಪಡುತ್ತಾರೆ. ಹೀಗೆ ಮಕ್ಕಳೊಂದಿಗೆ ಸೇರಿ ತಾವು ಮಕ್ಕಳಂತೆ ಆಟವಾಡುವ ನಾಯಿಗಳು ಪುಟಾಣಿ ಮಕ್ಕಳ ಉತ್ತಮ ಸ್ನೇಹಿತ ಅಂದ್ರೆ ತಪ್ಪಾಗಲಾರದು. ಉತ್ತಮ ಸ್ನೇಹಿತ ಮಾತ್ರವಲ್ಲದೆ ಅವುಗಳು ಮಕ್ಕಳ ರಕ್ಷಕನಂತೆ ಕಾರ್ಯನಿವರ್ಹಿಸುತ್ತವೆ. ಹೌದು ತನ್ನ ಮನೆ ಮಕ್ಕಳು ಯಾವುದಾದ್ರೂ ಅಪಾಯಕ್ಕೆ ಸಿಳುಕಿಕೊಂಡ್ರೆ, ಆ ತಕ್ಷಣ ಮಕ್ಕಳ ರಕ್ಷಣೆಗೆ ಈ ಶ್ವಾನಗಳು ಧಾವಿಸುತ್ತವೆ. ಹೀಗೆ ಅಪಾಯದಲ್ಲಿ ಸಿಳುಕಿದಂತಹ ಮಾಲೀಕರನ್ನು ಪುಟಾಣಿ ಮಕ್ಕಳನ್ನು ಸಾಕು ನಾಯಿಗಳು ರಕ್ಷಿಸಿದಂತಹ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಅಂಬೆಗಾಲಿಡುವ ಪುಟಾಣಿ ಮಗುವೊಂದು ಮನೆಯಿಂದ ಹೊರ ಹೋಗದಂತೆ ಶ್ವಾನವು ಜೋಪಾನ ಮಾಡಿದೆ. ಈ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರ ಮನಗೆದ್ದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶ್ವಾನವೊಂದು ಮನೆಯ ಮಗು ಹೊರಗಡೆ ಕಾಲಿಡಂತೆ ಆ ಮಗುವನ್ನು ಜೋಪಾನವಾಗಿ ನೋಡಿಕೊಳ್ಳುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @TheFigen_ ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದಕ್ಕಾಗಿಯೇ ಶ್ವಾನಗಳನ್ನು ಮನುಷ್ಯನ ಉತ್ತಮ ಸ್ನೇಹಿತ ಅನ್ನೋದು ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
This is why dogs are our best friends … That’s precious! pic.twitter.com/AZdYjVdgt8
— Figen (@TheFigen_) February 21, 2024
ವೈರಲ್ ವಿಡಿಯೋದಲ್ಲಿ ಶ್ವಾನವೊಂದು ಅಂಬೆಗಾಲಿಡುವ ಮಗುವನ್ನು ಜೋಪಾನವಾಗಿ ನೋಡಿಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಶ್ವಾನವೊಂದು ಮನೆಯ ಹಾಲ್ ಅಲ್ಲಿ ತನ್ನ ಪಾಡಿಗೆ ಮಲಗಿರುತ್ತದೆ. ಅಷ್ಟರಲ್ಲಿ ಆ ಮನೆ ಮಗು ಅಂಬೆಗಾಲಿಡುತ್ತಾ, ಮುಖ್ಯ ದ್ವಾರದ ಬಳಿ ಆಟವಾಡಲು ಹೋಗುತ್ತೆ. ಈ ದೃಶ್ಯವನ್ನು ಕಂಡಂತಹ ಈ ಬುದ್ಧಿವಂತ ಶ್ವಾನವು, ಮಗು ಹೊರಗಡೆ ಹೋಗಿ ಆಟವಾಡಿದ್ರೆ, ಅದಕ್ಕೆ ಪೆಟ್ಟಾಗಬಹುದು, ಮಗುವನ್ನು ಯಾವುದೇ ಕಾರಣಕ್ಕೂ ಹೊರಗೆ ಹೋಗಲು ಬಿಡಬಾರದು ಎನ್ನುತ್ತಾ, ತಾನೇ ಬಾಗಿಲ ಬಳಿ ಹೋಗಿ ಕುಳಿತುಕೊಳ್ಳುತ್ತದೆ. ಆದರೂ ಮಗು ಹೊರಗಡೆ ಹೋಗಲು ಪ್ರಯತ್ನಿಸುತ್ತದೆ. ಆ ಸಂದರ್ಭದಲ್ಲಿ ಇಲ್ಲ ಇಲ್ಲ ಮನೆಯ ಹೊರಗಡೆ ಕಾಲಿಡಂಗಿಲ್ಲ, ಒಳಗಡೆಯೇ ಆಟವಾಡ್ಬೇಕು ಎಂದು ಈ ಶ್ವಾನ ಮಗುವನ್ನು ಮನೆಯ ಒಳಗಡೆ ಕರ್ಕೊಂಡು ಹೋಗುತ್ತೆ.
ಇದನ್ನೂ ಓದಿ: ಅರ್ಜೆಂಟ್ ಡಾಕ್ಟರ್ ಸಾಹೇಬ್ರನ್ನ ನೋಡ್ಬೇಕಿತ್ತು; ಆಸ್ಪತ್ರೆ ವಾರ್ಡ್ಗೆ ಬಂದ ಗೂಳಿ
ಫೆಬ್ರವರಿ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತುಂಬಾನೇ ಸ್ಮಾರ್ಟ್ ಆಗಿದೆ ಈ ಶ್ವಾನʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಶ್ವಾನಗಳು ನಿಜವಾಗಿಯೂ ರಿಯಲ್ ಹೀರೋಗಳುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ನಿಜಕ್ಕೂ ಅದ್ಭುತವಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ