AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ಜಗಳ ಬೀದಿಗೆ ಬರುವುದೇ ಹೆಚ್ಚು. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ಮುನಿಸು, ಮನಸ್ತಾಪಗಳು ಬಗೆಹರಿಸಲು ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಬೆಳೆದು ಕೆಲವೊಮ್ಮೆ ಡೈವೋರ್ಸ್ ನೀಡುವ ಹಂತದವರೆಗೂ ತಲುಪುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಗಂಡ ಹೆಂಡಿರ ಜಗಳವು ಬೀದಿಗೆ ಬಂದಿದ್ದು, ರಸ್ತೆಯಲ್ಲಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಕೊನೆಗೆ ಈ ಜೋಡಿಯು ಜಗಳವಾಡುತ್ತಾ ಚರಂಡಿಗೆ ಬಿದ್ದಿದ್ದು, ಅಲ್ಲಿಯೂ ಇಬ್ಬರೂ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ.

Viral Video : ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳ, ಗಂಡನ ಸ್ಥಿತಿ ನೋಡಿ ಅಯ್ಯೋ ಎಂದ ನೆಟ್ಟಿಗರು
ಬೀದಿಯಲ್ಲಿ ಶುರುವಾಗಿ ಚರಂಡಿಗೆ ತಲುಪಿದ ದಂಪತಿ ಜಗಳImage Credit source: Twitter
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ|

Updated on: Feb 24, 2024 | 2:13 PM

Share

ಯಾವ ಸಂಸಾರದಲ್ಲಿ ಜಗಳವಿರುವುದಿಲ್ಲ ಹೇಳಿ. ಜಗಳವಿದ್ದ ಕಡೆಯಲ್ಲಿ ಪ್ರೀತಿ ಹೆಚ್ಚಿರುತ್ತದೆ ಎನ್ನುವ ಮಾತಿದೆ. ಅತಿಯಾದ ಪ್ರೀತಿ, ಸಣ್ಣ ಪುಟ್ಟ ಮುನಿಸು ಜಗಳವಿದ್ದರೆ ಸಂಸಾರವೆನ್ನುವುದು ನೋಡಲು ಚಂದ. ಆದರೆ ಈ ಜಗಳವನ್ನೇ ದೊಡ್ಡದು ಮಾಡಿದರೆ ನಾಲ್ಕು ಗೋಡೆಗೆ ಸೀಮಿತವಾಗಿರಬೇಕಾದ ಜಗಳವು ಬೀದಿಗೆ ಬರುವುದಂತೂ ಪಕ್ಕಾ. ಇಲ್ಲೊಂದು ಜೋಡಿಯೂ ಸಂಸಾರದಲ್ಲಿನ ಜಗಳವನ್ನು ಮನೆಯಿಂದ ರಸ್ತೆಗೆ ತಂದಿದ್ದು, ಅಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಕೊನೆಗೆ ಇವರಿಬ್ಬರ ಜಗಳವು ಚರಂಡಿಯವರೆಗೂ ತಲುಪಿದೆ. ಗಂಡ ಹೆಂಡಿರ ಜಗಳದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಇವರಿಬ್ಬರೂ ಹೊಡೆದಾಡುವ ರೀತಿ ಕಂಡು ಇದೇನಪ್ಪಾ ಹೀಗೆ ಎನ್ನುತ್ತಿದ್ದಾರೆ.

ಈ ವಿಡಿಯೋದಲ್ಲಿ ಪತಿ ಪತ್ನಿಯರಿಬ್ಬರೂ ಮನೆಯಿಂದ ಹೊರಗಡೆ ರಸ್ತೆಯಲ್ಲಿ ಜಗಳವನ್ನು ಶುರು ಮಾಡಿದ್ದಾರೆ. ಬೈಕ್‌ನಲ್ಲಿ ತೆರಳುವಾಗ ಬೈಕ್ ಹಾಳಾಗಿದ್ದು, ಇದೇ ಇವರಿಬ್ಬರ ನಡುವಿನ ಜಗಳಕ್ಕೆ ಕಾರಣವಾಗಿರುವಂತೆ ಕಾಣುತ್ತಿದೆ. ಈ ವಿಡಿಯೋದ ಪ್ರಾರಂಭದಲ್ಲಿ ಗಂಡ ಬೈಕ್‌ ಅನ್ನು ತಳ್ಳಿಕೊಂಡು ಹೋಗುತ್ತಿದ್ದಾನೆ. ಹೀಗಿರುವಾಗ ಹೆಂಡತಿಯು ಗಂಡದ ಬೆನ್ನಿಗೆ ಜೋರಾಗಿ ಗುದ್ದುತ್ತಾಳೆ. ಅಲ್ಲಿಂದ ಜಗಳವು ಶುರುವಾಗಿದ್ದು, ಇಬ್ಬರೂ ಕಿತ್ತಾಡಿಕೊಳ್ಳಲು ಶುರು ಮಾಡಿದ್ದಾರೆ. ಹೀಗೆ ಜೋರಾಗಿ ಹೊಡೆದಾಡುತ್ತಲೇ ಇಬ್ಬರೂ ಚರಂಡಿಗೆ ಬಿದ್ದಿದ್ದಾರೆ. ಆದರೆ ಅಲ್ಲಿಯೂ ಜಗಳವೇನು ನಿಂತಿಲ್ಲ. ನಾರುತ್ತಿರುವ ಚರಂಡಿಯ ನೀರಿನಲ್ಲಿಯೂ ಈ ದಂಪತಿಗಳು ಹೊಡೆದಾಡಿಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ

ಈ ವಿಡಿಯೋವನ್ನು ಅಹ್ರಂತ್ ಶೆಲ್ಬೈ ಎನ್ನುವವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಮೊದಲು ಹಂಚಿಕೊಡಿದ್ದು, ಆ ಬಳಿಕ ಒಬ್ಬರಾದ ಮೇಲೆ ಒಬ್ಬರಂತೆ ಶೇರ್ ಮಾಡಿಕೊಂಡಿದ್ದಾರೆ. ಈ ಕ್ಲಿಪಿಂಗ್ಸ್ ವೈರಲ್ ಆಗುತ್ತಿದ್ದಂತೆ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಫೇಮಸ್ ಆಗಲು ಈ ಜೋಡಿ ಈ ರೀತಿ ಜಗಳವಾಡಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ವಿಡಿಯೋ ಮಾಡಿದ್ದು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಆದರೆ, ಬಳಕೆದಾರರೊಬ್ಬರು, ‘ಇಂತಹ ಆದರ್ಶ ದಂಪತಿ ಎಲ್ಲಿಯೂ ಸಿಗುವುದಿಲ್ಲ’ ಎಂದರೆ , ಮತ್ತೊಬ್ಬರು ‘ಆ ಗಂಡನ ಪರಿಸ್ಥಿತಿ ಯಾರಿಗೂ ಬಾರದಿರಲಿ’ ಎಂದಿದ್ದಾರೆ. ಇನ್ನೊಬ್ಬರು ‘ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬುದೆಲ್ಲ ಸುಳ್ಳು ಇಲ್ಲಿ ನೋಡಿ ಗಂಡ ಹೆಂಡತಿ ಜಗಳ ಚರಂಡಿಗೆ ಬೀಳುವ ತನಕ’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಎಲ್ಲಾ ಟೀಕೆಗಳ ನಡುವೆ ಕೆಲವರು ಈ ವಿಡಿಯೋವನ್ನು ಸಖತ್ ಎಂಜಾಯ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ