Viral Video: ನಮ್ಮ ಸಂಸಾರ… ನಮ್ಮಪ್ಪ ಸಾವ್ಕಾರ; ವೈರಲ್ ಆಗುತ್ತಿದ್ದೆ ʼನಮ್ಮ ಸಂಸಾರ ಆನಂದ ಸಾಗರʼ ಹಾಡಿನ ಅಪ್‌ಗ್ರೇಡ್ ವರ್ಷನ್

ಈ ಹಿಂದೆ ʼನಾನು ನಂದಿನಿ ಬೆಂಗ್ಳೂರಿಗ್ ಬಂದೀನಿʼ ಹಾಡು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈಗ ಅದೇ ರೀತಿಯ ʼನಮ್ಮ ಸಂಸಾರ ಆನಂದ ಸಾಗರʼ ಹಾಡಿನ ಅಪ್ಗ್ರೇಡ್ ವರ್ಷನ್ ʼನಮ್ಮ ಸಂಸಾರ… ನಮ್ಮಪ್ಪ ಸಾವ್ಕಾರʼ ಹಾಡಿನ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾವ್ಕರ್ ಮಂದಿಯ ಈ ಹಾಡಿನ ಲಿರಿಕ್ಸ್ ಕೇಳಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Viral Video: ನಮ್ಮ ಸಂಸಾರ… ನಮ್ಮಪ್ಪ ಸಾವ್ಕಾರ; ವೈರಲ್ ಆಗುತ್ತಿದ್ದೆ  ʼನಮ್ಮ ಸಂಸಾರ ಆನಂದ ಸಾಗರʼ ಹಾಡಿನ  ಅಪ್‌ಗ್ರೇಡ್ ವರ್ಷನ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Jan 13, 2024 | 4:28 PM

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ರೀಲ್ಸ್ ವಿಡಿಯೋಗಳು ಅಲ್ಪ ಸಮಯದಲ್ಲಿಯೇ ವೈರಲ್ ಆಗುವ ಮೂಲಕ ಹಲವರು ರಾತ್ರೋ ರಾತ್ರಿ ಪ್ರಸಿದ್ಧರಾಗುತ್ತಾರೆ. ಕೆಲ ತಿಂಗಳ ಹಿಂದೆ ʼನಾನು ನಂದಿನಿ ಬೆಂಗ್ಳೂರಿಗ್ ಬಂದಿನೀʼ ಹಾಡು ಸಖತ್ ವೈರಲ್ ಆಗಿತ್ತು. ಬಹುಶಃ ಈ ಹಾಡನ್ನು ಕೇಳದ ಕಿವಿಗಳಿಲ್ಲ ಅಂತಾನೇ ಹೇಳಬಹುದು. ʼಐ ಆಮ್ ಎ ಬಾರ್ಬಿ ಗರ್ಲ್ ಇನ್ ಎ ಬಾರ್ಬಿ ವರ್ಲ್ಡ್ʼ ಎಂಬ ಇಂಗ್ಲೀಷ್ ಹಾಡಿನಂತೆ ಕಂಟೆಂಟ್ ಕ್ರಿಯೇಟರ್ ವಿಕಾಸ್ (ವಿಕಿ ಪೀಡಿಯಾ) ತಮ್ಮದೇ ಆದ ವಿಶಿಷ್ಟ ಲಿರಿಕ್ಸ್ ಬರೆದು ನಂದಿನಿ ಹಾಡಿನ ಲಿರಿಕ್ಸ್ ಬರೆದಿದ್ದರು. ಈ ಹಾಡು ರಾತ್ರೋ ರಾತ್ರಿ ಫೇಮಸ್ ಆಗಿತ್ತು. ಈಗ ಅದೇ ರೀತಿಯ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, “ನಮ್ಮ ಸಂಸಾರ ಆನಂದ ಸಾಗರ” ಹಾಡಿನ ಅಪ್ಗ್ರೇಡ್ ವರ್ಷನ್ ʼನಮ್ಮ ಸಂಸಾರ ನಮ್ಮಪ್ಪ ಸಾವ್ಕಾರ…ʼ ಎಂಬ ಸಾವ್ಕಾರ್ ಮಂದಿಯ ಹಾಡನ್ನು ಕೇಳಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಈ ವಿಡಿಯೋವನ್ನು ಮಂಜುನಾಥ್ ಎನ್. ಕ್ಷತ್ರೀಯ (preethammanju78999) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜಸ್ಟ್ ಫಾರ್ ಫನ್.. ನಮ್ಮ ಸಂಸಾರ ಹಾಡಿನ ಅಪ್ಗ್ರೇಡ್ ವರ್ಷನ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಯುವಕರಿಬ್ಬರು ಕನ್ನಡದ ಜನಪ್ರಿಯ ಹಾಡುಗಳಲ್ಲಿ ಒಂದಾಗಿರುವ ʼನಮ್ಮ ಸಂಸಾರ ಆನಂದ ಸಾಗರʼ ಹಾಡಿನ ರಾಗಕ್ಕೆ ಹೋಲಿಕೆಯಾಗುವಂತೆ ಯುವಕರು ತಮ್ಮದೇ ಆದ ವಿಶಿಷ್ಟ ಲಿರಿಕ್ಸ್ ಬರೆದು ʼನಮ್ಮ ಸಂಸಾರ ನಮ್ಮಪ್ಪ ಸಾವ್ಕಾರʼ ಹಾಡನ್ನು ಹಾಡುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಕೊಳದಲ್ಲಿ ಚೆಂಡಾಟವಾಡುತ್ತಾ ಫುಲ್ ರಿಲಾಕ್ಸಿಂಗ್ ಮೂಡ್​​​​ನಲ್ಲಿ ಹುಲಿರಾಯ

ವೈರಲ್ ವಿಡಿಯೋದಲ್ಲಿ ಯುವಕರಿಬ್ಬರು ʼನಮ್ಮ ಸಂಸಾರ ಆನಂದ ಸಾಗರʼ ಹಾಡಿನ ಅಪ್ಗ್ರೇಡ್ ವರ್ಷನ್ “ನಮ್ಮ ಸಂಸಾರ… ನಮ್ಮಪ್ಪ ಸಾವ್ಕಾರ… ಪ್ರೀತಿಯಿಂದ ನಮ್ಮನ್ನು ಸಾಕ್ದ ಅದಕ್ಕೆ ಈ ದುರಹಂಕಾರ… ಈ ಅಹಂಕಾರ ರಿಪಿಟ್ ಆದ್ರೆ ಫ್ಯೂಚರ್ರೇ ಹರೋಹರಾ… ನಮ್ಮ ಸಂಸಾರ ನಮ್ಮಪ್ಪ ಸಾವ್ಕಾರ…. ಎಂಬ ಹಾಡನ್ನು ಹಾಡಿದ್ದಾರೆ.

ನಾಲ್ಕು ದಿನಗಳ ಹಿಂದೆಯಷ್ಟೇ ಹಂಚಿಕೊಂಡಿರುವ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 46 ಸಾವಿರಕ್ಕಿಂತಲೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವರು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಮ್ಮ ಸಂಸಾರ ಗುಜರಿ ವ್ಯಾಪಾರ… ಅಪ್ಪ ಕೊಟ್ಟ ಗೋಣಿಚೀಲ ನಮಗೆ ಆಧಾರ… ಆ ಗೋಣಿ ತುಂಬಾ ಗುಜರಿ ಇದ್ರೆ ಬಾಳೆ ಬಂಗಾರʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹಿಂಗೆ ದುರಹಂಕಾರ ಬಿದ್ದು ಆಗೋದೇ ದೊಡ್ಡ ಸಾಲಗಾರʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಲಿರಿಕ್ಸ್ ತಮಾಷೆಯಾಗಿದ್ರೂ.. ಕೆಲವರಿಗೆ ಇದು ಸೂಕ್ತವಾದ ಹಾಡುʼ ಎಂದು ಕಮೆಂಟ್ ಮಾಡಿದ್ದಾರೆ. ಹಾಗೂ ಹಲವರು ಸಾಂಗ್ ಮಾತ್ರ ಸಖತ್ ಸೈಕ್ ಆಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ