Viral Video: ಕೊಳದಲ್ಲಿ ಚೆಂಡಾಟವಾಡುತ್ತಾ ಫುಲ್ ರಿಲಾಕ್ಸಿಂಗ್ ಮೂಡ್​​​​ನಲ್ಲಿ ಹುಲಿರಾಯ

ಹೆಚ್ಚಾಗಿ ಹುಲಿಗಳ ಘರ್ಜನೆ, ಗಾಂಭೀರ್ಯದ ನಡಿಗೆ, ಆಕ್ರಮಣಕಾರಿ ಬೇಟೆಯ ಕುರಿತ ವಿಡಿಯೋಗಳೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಆದ್ರೆ ಇಲ್ಲೊಂದು ಹುಲಿರಾಯನ ವಿಶೇಷ ವಿಡಿಯೋವೊಂದು ಹರಿದಾಡುತ್ತಿದ್ದು, ಹುಲಿಯೊಂದು ರಿಲಾಕ್ಸಿಂಗ್ ಮೂಡ್ ಅಲ್ಲಿ ನೀರಿನಲ್ಲಿ ಚೆಂಡಾಟವಾಡಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಹುಲಿರಾಯ ನೀರಿನಲ್ಲಿ ಆಟವಾಡುತ್ತಾ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ನೆಟ್ಟಿಗರ ಮನಗೆದ್ದಿದೆ.

Viral Video: ಕೊಳದಲ್ಲಿ ಚೆಂಡಾಟವಾಡುತ್ತಾ   ಫುಲ್ ರಿಲಾಕ್ಸಿಂಗ್ ಮೂಡ್​​​​ನಲ್ಲಿ ಹುಲಿರಾಯ
Viral Video
Follow us
ಅಕ್ಷತಾ ವರ್ಕಾಡಿ
|

Updated on: Jan 13, 2024 | 2:27 PM

ಹುಲಿಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು. ಇವುಗಳು ಕಾಡಿನಲ್ಲಿ ಯಾವುದಾದರೂ ಬೇಟೆ ಸಿಗುತ್ತಾ ಅಂತ ಅತ್ತಿಂದ ಇತ್ತ ಕಣ್ಣಾಯಿಸುತ್ತಾ ಗಾಂಭೀರ್ಯದಿಂದ ನಡೆದಾಡುತ್ತಿರುತ್ತವೆ. ಹೀಗೆ ಹುಲಿಗಳ ಶಿಕಾರಿ, ಕಾದಾಟ, ಗಾಂಭೀರ್ಯದ ನಡಿಗೆಯನ್ನು ನೋಡುವುದೇ ಚಂದ. ಇಂತಹ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ನೀವು ಯಾವತ್ತಾದ್ರೂ ಹುಲಿಗಳು ಶಾಂತ ರೀತಿಯಿಂದ ವರ್ತಿಸುತ್ತಾ, ಪುಟ್ಟ ಮರಿಗಳಂತೆ ಆಟವಾಡುತ್ತಾ, ತುಂಟಾಟವಾಡುತ್ತ ಸಮಯ ಕಳೆಯುವುದನ್ನು ನೋಡಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ, ಹುಲಿಯೊಂದು ಬೇಟೆಗೆ ಕೊಂಚ ಬ್ರೇಕ್ ನೀಡಿ ಕೊಳದ ನೀರಿನಲ್ಲಿ ತನ್ನ ಪಾಡಿಗೆ ಚೆಂಡಾಟವಾಡುತ್ತಾ ವಿಶ್ರಾಂತಿ ಪಡೆದಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಈ ಮುದ್ದಾದ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

kami-katze Cat ART ಎಂಬ ಫೇಸ್ ಬುಕ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಹುಲಿರಾಯ ಫುಲ್ ರಿಲಾಕ್ಸಿಂಗ್ ಮೂಡ್ ಅಲ್ಲಿ ಕೊಳದ ನೀರಿನಲ್ಲಿ ಚೆಂಡಾಟವಾಡುತ್ತ, ವಿಶ್ರಾಂತಿ ಪಡೆಯುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು. ವೈರಲ್ ವಿಡಿಯೋದಲ್ಲಿ ಕೊಳದಲ್ಲಿ ಹುಲಿರಾಯ, ಬೇಟೆಯಾಡಿ ಸುಸ್ತಾಗಿದೆ, ಸ್ವಲ್ಪ ವಿಶ್ರಾಂತಿ ಪಡೆದ್ರೆ ಚೆನ್ನಾಗಿರುತ್ತೆ ಅಂತ ಹೇಳಿ, ಕೆಂಪು ಬಣ್ಣದ ಚೆಂಡೊಂದನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾ, ಆ ಚೆಂಡಿನ ಮೇಲೆ ಮುಖವನ್ನಿಟ್ಟು ಕಣ್ಣು ಮುಚ್ಚಿ ವಿಶ್ರಾಂತಿ ಪಡೆಯುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರಷ್ಯಾದ ಹಸುಗಳ ಕಣ್ಣಿಗೆ ವಿಆರ್ ಗ್ಲಾಸ್; ಹಾಲು ನೀಡುವ ಸಾಮರ್ಥ್ಯದಲ್ಲಿ ಶೇ. 40ರಷ್ಟು ಹೆಚ್ಚಳ

ಜನವರಿ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಎರಡು ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಈ ಹುಲಿರಾಯ ನೀರಾಟವಾಡುವ ಮುದ್ದಾದ ದೃಶ್ಯವನ್ನು ಕಾಣಲು ಎರಡು ಕಣ್ಣು ಸಾಲದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಮುದ್ದಾಗಿದೆ, ಹುಲಿ ಚೆಂಡಾಟ ಆಡುವುದನ್ನು ಬಹಳ ಆನಂದಿಸುತ್ತಿದೆʼ ಎಂದು ಹೇಳಿದ್ದಾರೆ. ಇನ್ನು ಹಲವರು ಹುಲಿಯ ನೀರಿನಲ್ಲಿ ಆಟವಾಡುತ್ತ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ತುಂಬಾ ಮುದ್ದಾಗಿದೆ ಎನ್ನುತ್ತಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ