Viral Video: ಟ್ರಾಫಿಕ್ ಸಿಗ್ನಲ್ನಲ್ಲಿ ಕಾರಿನ ವಿಂಡ್ ಶೀಲ್ಡ್ ಸ್ವಚ್ಛಗೊಳಿಸಲು ಥಟ್ಟನೆ ಜಿಗಿದು ಬಂದ ಸ್ಪೈಡರ್ ಮ್ಯಾನ್
ಇಲ್ಲೊಬ್ಬ ಕಾರ್ ಕ್ಲೀನರ್, ಏನಾದ್ರೂ ಕ್ರಿಯೆಟಿವ್ ಆಗಿ ಈ ಕೆಲಸವನ್ನು ಮಾಡ್ಬೇಕಲ್ವಾ ಅಂತ , ಸ್ಪೈಡರ್ ಮ್ಯಾನ್ ವೇಷ ಧರಿಸಿ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿರುವ ಕಾರುಗಳ ವಿಂಡ್ಶೀಲ್ಡ್ ಸ್ವಚ್ಛಗೊಳಿಸುತ್ತಾ, ಕಾರಿನಲ್ಲಿದ್ದ ಪ್ರಯಾಣಿಕರಿಗೆ ಮನರಂಜನೆ ಮಾಡುತ್ತಾ, ಬಹಳ ಕ್ರಿಯೆಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತನ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸ್ಪೈಡರ್ ಮ್ಯಾನ್ ಯಾರಿಗೆ ಇಷ್ಟವಿಲ್ಲ ಹೇಳಿ. ಕೆಲವರಂತೂ ಸ್ಪೈಡರ್ ಮ್ಯಾನ್ ಮೂವಿ ನೋಡಿ, ಗೋಡೆ ಹತ್ತುವುದು, ಸೇರಿದಂತೆ ಇನ್ನೇನೇನೋ ಸಾಹಸಗಳನ್ನು ಮಾಡುತ್ತಿರುತ್ತಾರೆ. ಅಷ್ಟೆ ಯಾಕೆ ಅನೇಕರು ಸ್ಪೈಡರ್ ಮ್ಯಾನ್ ವೇಷ ಧರಿಸಿ ಬೀದಿಗಳಲ್ಲಿ ತಿರುಗಾಡುವಂತಹದ್ದು, ಹಲವಾರು ಸಾಹಸಗಳನ್ನು ಮಾಡುವಂತಹದ್ದನ್ನು ಮಾಡುತ್ತಿರುತ್ತಾರೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಕಾರ್ ಕ್ಲೀನರ್ ಕೆಲಸಗಾರ, ಏನಾದ್ರೂ ಕ್ರಿಯೆಟಿವ್ ಆಗಿ ಈ ಕೆಲಸವನ್ನು ಮಾಡ್ಬೇಕಲ್ವಾ ಅಂತ ಹೇಳಿ, ಸ್ಪೈಡರ್ ಮ್ಯಾನ್ ವೇಷಧರಿಸಿ ಕಾರ್ ವಿಂಡ್ಶೀಲ್ಡ್ ಸ್ವಚ್ಛಗೊಳಿಸಲು ಬಂದಿದ್ದು, ಈ ದೃಶ್ಯವನ್ನು ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಯನ್ನು ಪಡೆದುಕೊಂಡಿದೆ.
@NoContextHuman ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಕಾರ್ ಕ್ಲೀನರ್ ಕೆಲಸಗಾರನೊಬ್ಬ, ಸ್ಪೈಡರ್ ಮ್ಯಾನ್ ವೇಶ ಧರಿಸಿ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದಂತ ಕಾರುಗಳ ವಿಂಡ್ಶೀಲ್ಡ್ ಸ್ವಚ್ಛಗೊಳಿಸುವ ದೃಶ್ಯವನ್ನು ಕಾಣಬಹುದು.
— Out of Context Human Race (@NoContextHumans) January 9, 2024
ಇದನ್ನೂ ಓದಿ: ರಷ್ಯಾದ ಹಸುಗಳ ಕಣ್ಣಿಗೆ ವಿಆರ್ ಗ್ಲಾಸ್; ಹಾಲು ನೀಡುವ ಸಾಮರ್ಥ್ಯದಲ್ಲಿ ಶೇ. 40ರಷ್ಟು ಹೆಚ್ಚಳ
ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ಕಾರೊಂದರ ಬಳಿ ಸ್ಪೈಡರ್ ಮ್ಯಾನ್ ಡ್ರೆಸ್ ಧರಿಸಿ, ಹಾಗೂ ಬೆನ್ನಿಗೆ ಒಂದು ಬ್ಯಾಗ್ ನೇತುಹಾಕಿಕೊಂಡು ಯುವಕನೊಬ್ಬ ಸ್ಪೈಡರ್ ಮ್ಯಾನ್ ನಂತೆಯೇ ಥಟ್ಟನೆ ಜಿಗಿದು ಬಂದು ಕಾರ್ ವಿಂಡ್ಶೀಲ್ಡ್ ಗೆ ಕ್ಲೀನಿಂಗ್ ಸ್ಪ್ರೇ ಹೊಡೆದು, ಗ್ಲಾಸ್ ಸ್ವಚ್ಛಗೊಳಿಸುತ್ತಾ, ಕಾರಿನ ಒಳಗೆ ಕುಳಿತಿರುವವರನ್ನು ನಗಿಸುತ್ತಾ, ಮನರಂಜನಾತ್ಮಕವಾಗಿ ಹಾಗೂ ಸೃಜನಾತ್ಮಕವಾಗಿ ತನ್ನ ಕೆಲಸ ಮಾಡುತ್ತಿರುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.
ಜನವರಿ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 14.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಉತ್ತಮ ಕೆಲಸʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವ್ಯಕ್ತಿ ಬಹಳ ಕ್ರಿಯೆಟಿವ್ʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸ್ಪೈಡರ್ ಮ್ಯಾನ್ ಸಮಾಜ ಸೇವೆಯಲ್ಲಿ ತೊಡಗಿದ್ದಾನೆʼ ಎಂದು ತಮಾಷೆ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




