ವಿಚಿತ್ರವೆನಿಸಿದ್ರೂ ಸತ್ಯ: ಮೃತ ವ್ಯಕ್ತಿಗೆ ಉಸಿರು ಮರಳಿಸಿದ ರಸ್ತೆಗುಂಡಿ
ರಸ್ತೆಗುಂಡಿಗಳು ಎನ್ನುವ ಶಬ್ದ ಕೇಳಿದಾಕ್ಷಣ ನಿಮ್ಮ ಮುಖದಲ್ಲಿ ನಗು ಮೂಡುವುದಿಲ್ಲ ಬದಲಾಗಿ ಮುಖ ಕೆಂಪಾಗುತ್ತದೆ. ರಸ್ತೆಗುಂಡಿಗಳು ಜೀವತೆಗೆದಿರುವುದನ್ನು ಕೇಳಿದ್ದೇವೆ, ಅಪಘಾತದಿಂದ ಸಾಕಷ್ಟು ಮಂದಿ ಗಂಭೀರ ಸ್ವರೂಪದ ಗಾಯಗಳನ್ನು ಕೂಡ ಅನುಭವಿಸಿದ್ದಾರೆ, ಆದರೆ ಜೀವಕೊಟ್ಟಿರುವುದನ್ನು ನೋಡಿದ್ದೀರಾ, ಈ ಘಟನೆ ವಿಚಿತ್ರವೆನಿಸಿದರೂ ಸತ್ಯ. 80 ವರ್ಷದ ವ್ಯಕ್ತಿಗೆ ಈ ರಸ್ತೆಗುಂಡಿಯೇ ಜೀವರಕ್ಷಕ ಎಂದರೆ ತಪ್ಪಾಗಲಾರದು.
ರಸ್ತೆಗುಂಡಿಗಳು(Patholes) ಎನ್ನುವ ಶಬ್ದ ಕೇಳಿದಾಕ್ಷಣ ನಿಮ್ಮ ಮುಖದಲ್ಲಿ ನಗು ಮೂಡುವುದಿಲ್ಲ ಬದಲಾಗಿ ಮುಖ ಕೆಂಪಾಗುತ್ತದೆ. ರಸ್ತೆಗುಂಡಿಗಳು ಜೀವತೆಗೆದಿರುವುದನ್ನು ಕೇಳಿದ್ದೇವೆ, ಅಪಘಾತದಿಂದ ಸಾಕಷ್ಟು ಮಂದಿ ಗಂಭೀರ ಸ್ವರೂಪದ ಗಾಯಗಳನ್ನು ಕೂಡ ಅನುಭವಿಸಿದ್ದಾರೆ, ಆದರೆ ಜೀವಕೊಟ್ಟಿರುವುದನ್ನು ನೋಡಿದ್ದೀರಾ, ಈ ಘಟನೆ ವಿಚಿತ್ರವೆನಿಸಿದರೂ ಸತ್ಯ. ಹರ್ಯಾಣದ 80 ವರ್ಷದ ವ್ಯಕ್ತಿಗೆ ಈ ರಸ್ತೆಗುಂಡಿಯೇ ಜೀವರಕ್ಷಕ ಎಂದರೆ ತಪ್ಪಾಗಲಾರದು.
ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಘೋಷಿಸಿಬಿಟ್ಟಿದ್ದು, ಕುಟುಂಬಸ್ಥರೆಲ್ಲರೂ ಅಳುತ್ತಾ ಶವವನ್ನು ಆಂಬ್ಯುಲೆನ್ಸ್ನಲ್ಲಿ ಮನೆಗೆ ಸಾಗಿಸುತ್ತಿದ್ದರು. ಒಂದೆಡೆ ಅಂತ್ಯಕ್ರಿಯೆಗೆ ಕಟ್ಟಿಗೆಗಳನ್ನು ಸಂಗ್ರಹಿಸಲಾಗುತ್ತಿತ್ತು.
ಆಂಬ್ಯುಲೆನ್ಸ್ ತೆರಳುತ್ತಿದ್ದಾಗ ರಸ್ತೆಗುಂಡಿಯೊಂದರ ಮೇಲೆ ಹಾದು ಹೋಯಿತು, ಅದಾದ ಬಳಿಕ ಕೈ ಚಲನೆ ಬಂದಿದ್ದನ್ನು ಅವರ ಮೊಮ್ಮಗ ನೋಡಿದ್ದ. ಹೃದಯಬಡಿತವನ್ನೂ ಗಮನಿಸಿದ, ತಕ್ಷಣ ಆಂಬ್ಯುಲೆನ್ಸ್ ಡ್ರೈವರ್ಗೆ ತಕ್ಷಣ ಅಲ್ಲೇ ಹತ್ತಿರದಲ್ಲಿರುವ ಯಾವುದಾದರೂ ಆಸ್ಪತ್ರೆಗೆ ಕರೆದೊಯ್ಯುವಂತೆ ಮನವಿ ಮಾಡಲಾಯಿತು. ಅಲ್ಲಿನ ವೈದ್ಯರು ವ್ಯಕ್ತಿ ಬದುಕಿದ್ದಾರೆ ಎಂದು ಘೋಷಿಸಿದರು.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಇನ್ನೂ ಉಳಿದಿವೆ 7878 ರಸ್ತೆ ಗುಂಡಿ, ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ
80 ವರ್ಷದ ವ್ಯಕ್ತಿ ದರ್ಶನ್ ಸಿಂಗ್ ಹೃದ್ರೋಗದಿಂದ ಬಳಲುತ್ತಿದ್ದು, ಕರ್ನಾಲ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ. ಆದರೆ ಈ ಘಟನೆಯನ್ನು ಪವಾಡ ಎಂದೇ ಕುಟುಂಬದವರು ನಂಬಿದ್ದಾರೆ.
ದರ್ಶನ್ ಸಿಂಗ್ ಅವರ ಮೊಮ್ಮಗರಲ್ಲಿ ಒಬ್ಬರಾದ ಬಲ್ವಾನ್ ಸಿಂಗ್ ಕರ್ನಾಲ್ ಬಳಿಯ ನಿಸಿಂಗ್‌ನಲ್ಲಿ ವಾಸಿಸುತ್ತಿದ್ದರು. ನಾಲ್ಕು ದಿನಗಳಿಂದ ಅವರ ಅಜ್ಜ ವೆಂಟಿಲೇಟರ್‌ನಲ್ಲಿದ್ದರು ಮತ್ತು ಗುರುವಾರ ಬೆಳಿಗ್ಗೆ ಅವರ ಹೃದಯ ಬಡಿತ ನಿಂತಿದೆ ಎಂದು ವೈದ್ಯರು ಹೇಳಿದ್ದರು ಎಂದು ಮೊಮ್ಮಗ ತಿಳಿಸಿದ್ದಾರೆ.
ಅವರನ್ನು ವೆಂಟಿಲೇಟರ್‌ನಿಂದ ಹೊರತೆಗೆಯಲಾಯಿತು ಮತ್ತು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ನಾಲ್ಕು ದಿನಗಳಿಂದ ಅವರು ಪಟಿಯಾಲಾದಲ್ಲಿ ವೆಂಟಿಲೇಟರ್‌ನಲ್ಲಿದ್ದರು ಆದರೆ ಈಗ ಅವರು ಸ್ವಂತವಾಗಿ ಉಸಿರಾಡುತ್ತಿದ್ದಾರೆ ಎಂದು ಕುಟುಂಬ ಹೇಳಿದೆ. ಶೀಘ್ರ ಗುಣಮುಖರಾಗಲಿ ಎಂಬುದು ಎಲ್ಲರ ಹಾರೈಕೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ