ಅಪಹರಣಕಾರರೆಂಬ ಶಂಕೆ: ಗಂಗಾ ಸಾಗರ ಮೇಳಕ್ಕೆ ತೆರಳುತ್ತಿದ್ದ ಮೂವರು ಸಾಧುಗಳ ಮೇಲೆ ಹಲ್ಲೆ

ಪಶ್ಚಿಮ ಬಂಗಾಳದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಸಾಧುಗಳು ಅಪಹರಣಕಾರರೆಂದು ಶಂಕಿಸಿ ಹಲ್ಲೆ ನಡೆಸಿರುವ ಘಟನೆ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಅಪಹರಣಕಾರರೆಂಬ ಶಂಕೆ: ಗಂಗಾ ಸಾಗರ ಮೇಳಕ್ಕೆ ತೆರಳುತ್ತಿದ್ದ ಮೂವರು ಸಾಧುಗಳ ಮೇಲೆ ಹಲ್ಲೆ
ಸಾಧುImage Credit source: India Today
Follow us
ನಯನಾ ರಾಜೀವ್
|

Updated on: Jan 13, 2024 | 8:55 AM

ಪಶ್ಚಿಮ ಬಂಗಾಳ(West Bengal)ದ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಉತ್ತರ ಪ್ರದೇಶದ ಮೂವರು ಸಾಧುಗಳನ್ನು ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಸಾಧುಗಳು ಅಪಹರಣಕಾರರೆಂದು ಶಂಕಿಸಿ ಹಲ್ಲೆ ನಡೆಸಿರುವ ಘಟನೆ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಸಾಧುಗಳು-ಒಬ್ಬ ವ್ಯಕ್ತಿ ಮತ್ತು ಅವರ ಇಬ್ಬರು ಪುತ್ರರು, ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಗಂಗಾಸಾಗರವನ್ನು ತಲುಪಲು ವಾಹನವನ್ನು ಬಾಡಿಗೆಗೆ ಪಡೆದಿದ್ದರು. ಅವರು ಮಾರ್ಗದ ಬಗ್ಗೆ ವಿಚಾರಿಸಿದಾಗ, ಕೆಲವು ಸ್ಥಳೀಯರು ಅನುಮಾನಗೊಂಡರು, ಇವರು ಅಪಹರಣಕಾರರು ಎಂದು ಆರೋಪಿಸಿ ಆಕ್ರೋಶಗೊಂಡು ಯುವಕರ ಗುಂಪೊಂದು ಸಾಧುಗಳ ಮೇಲೆ ಹಲ್ಲೆ ನಡೆಸಿದೆ.

ವಿವರಗಳ ಪ್ರಕಾರ, ಸಾಧುಗಳು ಮಾರ್ಗದ ಬಗ್ಗೆ ಕೇಳಿದಾಗ ಮೂವರು ಹೆಣ್ಣುಮಕ್ಕಳು ಕಿರುಚುತ್ತಾ ಓಡಿಹೋದರು, ಅದನ್ನು ಕಂಡುವರು ಸಾಧುಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಸ್ಥಳದ ವೀಡಿಯೊದಲ್ಲಿ ಗುಂಪು ಪೊಲೀಸ್ ವಾಹನವನ್ನು ಧ್ವಂಸಗೊಳಿಸುವುದನ್ನು ಕಾಣಬಹುದು.

ಮತ್ತಷ್ಟು ಓದಿ: ವಾಟ್ಸಾಪ್​​ ಮೂಲಕ ಲೈಂಗಿಕ ಆಮಿಷವೊಡ್ಡಿ ಹಣ ವಸೂಲಿ ಆರೋಪ: ವ್ಯಕ್ತಿ ಸೆರೆ

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳೀಯ ಪೊಲೀಸರು ಮಧ್ಯ ಪ್ರವೇಶಿಸಿ ಸಾಧುಗಳನ್ನು ರಕ್ಷಿಸಿ ಕಾಸಿಪುರ ಪೊಲೀಸ್ ಠಾಣೆಗೆ ಕರೆದೊಯ್ದರು. ಘಟನೆ ಕುರಿತು ಪ್ರತಿಕ್ರಿಯಿಸಿರುವ ಪುರುಲಿಯಾ ಪೊಲೀಸ್ ವರಿಷ್ಠಾಧಿಕಾರಿ ಅಭಿಜಿತ್ ಬ್ಯಾನರ್ಜಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹಲ್ಲೆ ನಡೆಸಿದವರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಧುಗಳು ದಾರಿ ತಪ್ಪಿದ್ದಾರೆ ಮತ್ತು ಇಬ್ಬರು ಹುಡುಗಿಯರ ಬಳಿ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ವಾಹನ ನಿಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಡುಗಿಯರು ಹೆದರಿ ಓಡಿಹೋದರು, ಸಾಧುಗಳು ಹುಡುಗಿಯರಿಗೆ ಕಿರುಕುಳ ನೀಡಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ. ನಂತರ ಸಾಧುಗಳಿಗೆ ಗಂಗಾಸಾಗರ ಮೇಳಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ