ವಾಟ್ಸಾಪ್ ಮೂಲಕ ಲೈಂಗಿಕ ಆಮಿಷವೊಡ್ಡಿ ಹಣ ವಸೂಲಿ ಆರೋಪ: ವ್ಯಕ್ತಿ ಸೆರೆ
ವಾಟ್ಸಾಪ್ನಲ್ಲಿ ಹುಡುಗಿಯಂತೆ ಚಾಟ್ ಮಾಡಿ ಲೈಂಗಿಕ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಫೋಟೊ ಮಾರ್ಫ್ ಮಾಡಿ ಚಾಟ್ ಸಮೇತ ತೊರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ. ವ್ಯಕ್ತಿಯ ದೂರಿನ ಮೇರೆಗೆ ತನಿಖೆ ನಡೆಸಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬೆಂಗಳೂರು, ಜನವರಿ 12: ವಾಟ್ಸಾಪ್ನಲ್ಲಿ ಹುಡುಗಿಯಂತೆ ಚಾಟ್ ಮಾಡಿ ಲೈಂಗಿಕ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ (arrested). ಅನಿತಾ ಎಂಬ ಹೆಸರಲ್ಲಿ ವ್ಯಕ್ತಿಯೋರ್ವನನ್ನು ಸಂಪರ್ಕಿಸಿದ್ದ ಆರೋಪಿ, ವಾಟ್ಸಾಪ್ನಲ್ಲಿ ಚಾಟ್ ಮಾಡಿದ್ದಾನೆ. ಬಳಿಕ ಫೋಟೊ ಮಾರ್ಫ್ ಮಾಡಿ ಚಾಟ್ ಸಮೇತ ತೊರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ್ದಾನೆ. ವ್ಯಕ್ತಿಯ ದೂರಿನ ಮೇರೆಗೆ ತನಿಖೆ ನಡೆಸಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೂಲಿ ಕಾರ್ಮಿಕರನ್ನೇ ಟಾರ್ಗೆಟ್ ಮಾಡಿದ್ದ ಫೈನಾನ್ಸ್! ಅಧಿಕ ಬಡ್ಡಿ ಆಸೆಗೆ ಹಣ ಕಳೆದುಕೊಂಡ ಕಾರ್ಮಿಕರು
ದಕ್ಷಿಣ ಕನ್ನಡ: ರಾಯಲ್ ಟ್ರವಾಂಕೂರ್ ಅನ್ನೋ ಫೈನಾನ್ಸ್ ಕಂಪೆನಿಗೆ ದೇಶದ ಎಲ್ಲೆಡೆ ಸುಮಾರು 85 ಬ್ರಾಂಚ್ಗಳನ್ನು ಹೊಂದಿದೆ. ಕರ್ನಾಟಕದ ಹಲವೆಡೆ ಈ ಫೈನಾನ್ಸ್ ಕಂಪೆನಿ ಕಾರ್ಯಾಚರಿಸುತ್ತಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿದೆ. ಸದ್ಯ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಈ ಫೈನಾನ್ಸ್ ಕಂಪೆನಿ ತನ್ನ ಕಚೇರಿಯನ್ನು ಬಂದ್ ಮಾಡಿದ್ದು ಸಿಬ್ಬಂದಿಗಳೂ ಸದ್ಧಿಲ್ಲದೆ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಏಳು ಜನ ಡ್ರಗ್ ಪೆಡ್ಲರ್ಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು
ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಹಾಗೂ ಒಂದಿಷ್ಟು ಅಂಗಡಿಯವರು ಈ ಫೈನಾನ್ಸ್ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಆದರೆ ತಾವು ಕಷ್ಟ ಪಟ್ಟು ದುಡಿದು ಸಂಪಾದಿಸಿದ್ದ ಹಣ ಕಳೆದುಕೊಂಡಿರುವ ಬಡವರು ಮಾತ್ರ ಗೋಳಾಡುತ್ತಿದ್ದಾರೆ. ಫೈನಾನ್ಸ್ ಕಂಪನಿ ಆರಂಭಿಸಲು ಪರವಾನಿಗೆ ನೀಡುವ ಸರ್ಕಾರವೇ ಈಗ ತಮ್ಮ ಹಣ ವಾಪಸು ತೆಗೆಸಿಕೊಡಬೇಕು ಅಂತ ಜನರು ಬೇಡಿಕೆ ಇಟ್ಟಿದ್ದಾರೆ.
ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್ ಪೆಡ್ಲರ್ ಬಂಧನ
ನೆಲಮಂಗಲ: ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್ ಪೆಡ್ಲರ್ ಬಂಧನ ಮಾಡಲಾಗಿದೆ. ಕೇರಳದ ಜೋಯಲ್ ಬಿಜಾಯ್(20), ಜೋಯಲ್(20)ಬಂಧಿತರು. ಬಂಧಿತರಿಂದ ಗಾಂಜಾ, MDMA ಜಪ್ತಿ ಮಾಡಲಾಗಿದೆ. ಆರೋಪಿಗಳನ್ನ ಪೊಲೀಸ್ ವಶಕ್ಕೆ ಪಡೆದು ಮಹಜರಿಗೆ ಕರೆತರುವ ವೇಳೆ ಯುವತಿ ದುಂಡಾವರ್ತನೆ ಮಾಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರು: ಮಗಳ ಕಾಲೇಜು ಸೀಟ್‌ಗಾಗಿ ಅಡ್ಡದಾರಿ ಹಿಡಿದ ಉದ್ಯಮಿ, ಕೊನೆಗೆ ಆತನೇ ಕಿಡ್ನಾಪ್!
ಮಾಧ್ಯಮದ ಕ್ಯಾಮರಾ ಕಸಿಯಲು ಯತ್ನಿಸಿದ್ದಾರೆ. ಸುದ್ದಿ ಮಾಡಲು ತೆರಳಿದ್ದ ಮಾಧ್ಯಮದವರಿಗೆ ಅವಾಚ್ಯ ಶಬ್ದ ಬಳಸಿ ನಿಂದನೆ ಮಾಡಿದ್ದು, ಬಾಗಲಗುಂಟೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಘಟನೆ ನಡೆದಿದೆ. IPC 1985 8c,22(c),20(b)NDPSಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.