ಮಗನನ್ನು ಹತ್ಯೆಗೈದ ತಾಯಿ ಸುಚನಾ ಸೇಠ್ಳ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಟ್ಯಾಕ್ಸಿ ಡ್ರೈವರ್
Suchana Seth Case: ಬೆಂಗಳೂರಿನಲ್ಲಿ ಖಾಸಗಿ ಕಂಪನಿಯ ಸಿಇಒ ಆಗಿದ್ದ ಸುಚನಾ ತನ್ನ ನಾಲ್ಕು ವರ್ಷದ ಮಗನನ್ನೇ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋವಾದಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ ಟ್ಯಾಕ್ಸಿ ಡ್ರೈವರ್ ರಾಯ್ ಜೋಹಾನ್ ಡಿಸೋಜ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಾರೆ. ಅವರಿಗೆ ಡೌಟ್ ಬಂದರೆ ಮತ್ತೆನಾದರೂ ಪ್ರತಿಕ್ರಿಯೆ ನೀಡುತ್ತಿದ್ದರು. ನಾನು ನಾರ್ಮಲ್ ಆಗಿಯೇ ಡ್ರೈವಿಂಗ್ ಮಾಡುತ್ತ ಹೊರಟೆ ಎಂದು ಹೇಳಿದ್ದಾರೆ.
ಬೆಳಗಾವಿ, ಜನವರಿ 12: ಬೆಂಗಳೂರಿನಲ್ಲಿ ಖಾಸಗಿ ಕಂಪನಿಯ ಸಿಇಒ ಆಗಿದ್ದ ಸುಚನಾ (Suchana Seth) ತನ್ನ ನಾಲ್ಕು ವರ್ಷದ ಮಗನನ್ನೇ ಕೊಂದ ಆರೋಪದಲ್ಲಿ ಗೋವಾ ಪೊಲೀಸರ ವಶವಾಗಿದ್ದಾಳೆ. ಸದ್ಯ ಈ ಕೇಸ್ಗೆ ಸಂಬಂಧಪಟ್ಟಂತೆ ಟ್ಯಾಕ್ಸಿ ಡ್ರೈವರ್ ರಾಯ್ ಜೋಹಾನ್ ಡಿಸೋಜ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಾರೆ. ಮಗನ ಶವದ ಜತೆಗೆ ಟ್ಯಾಕ್ಸಿಯಲ್ಲಿ ಸುಚನಾ ಸೇಠ್ ಬೆಂಗಳೂರಿಗೆ ಹೊರಟ್ಟಿದ್ದಳು. ವಾಹನ ಚಾಲನೆ ವೇಳೆ ಪೊಲೀಸರು ನನಗೆ ಕರೆ ಮಾಡಿ ಮಾಹಿತಿ ಹೇಳಿದ್ದರು. ಪೊಲೀಸರ ಪೋನ್ ಬಂದ ಬಳಿಕ ನಾನು ಡೌಟ್ ಬರದಂತೆ ಮೊದಲಿದ್ದ ಹಾಗೇ ಇದ್ದೆ. ಅವರಿಗೆ ಡೌಟ್ ಬಂದರೆ ಮತ್ತೆನಾದರೂ ಪ್ರತಿಕ್ರಿಯೆ ನೀಡುತ್ತಿದ್ದರು. ನಾನು ನಾರ್ಮಲ್ ಆಗಿಯೇ ಡ್ರೈವಿಂಗ್ ಮಾಡುತ್ತ ಹೊರಟೆ ಎಂದು ಹೇಳಿದ್ದಾರೆ.
ಬಟ್ಟೆಗಳಿಂದ ಶವ ಮುಚ್ಚಿದ್ದ ತಾಯಿ
ಕರ್ನಾಟಕ ಪೊಲೀಸರು ಬ್ಯಾಗ್ ಓಪನ್ ಮಾಡಿದಾಗ ಆಕೆಯ ರಿಯಾಕ್ಷನ್ ಏನೂ ಇರಲಿಲ್ಲ. ಬ್ಯಾಗ್ನಲ್ಲಿ ಶವದ ಜತೆಗೆ ಬಟ್ಟೆಗಳಿದ್ದವು, ಪ್ಲಾಸ್ಟಿಕ್ ಸೇರಿದಂತೆ ಹಲವು ಸಾಮಾಗ್ರಿಗಳಿದ್ದವು. ಶವ ಕಾಣಿಸದಂತೆ ಕಂಪ್ಲೀಟ್ ಆಗಿ ಬಟ್ಟೆಗಳಿಂದ ಮುಚ್ಚಿದ್ದರು. ಪೊಲೀಸರು ನನಗೆ ಏನನ್ನು ತೆಗೆದುಕೊಂಡು ಹೋಗುತ್ತಿದ್ದಿರಾ ಎಂದು ಕೇಳಿದರು. ಈ ವೇಳೆ ಒಂದು ಬ್ಯಾಗ್ ಮಾತ್ರ ಇದೆ ಅಂತಾ ಹೇಳಿದ್ದೆ.
ಇದನ್ನೂ ಓದಿ: ‘ನಾನು ನಿದ್ರೆಯಿಂದ ಎದ್ದೇಳುವ ಮುಂಚೆನೇ ಮಗು ಮೃತಪಟ್ಟಿತ್ತು’: ಸ್ಫೋಟಕ ಅಂಶ ಬಾಯ್ಬಿಟ್ಟ ಸಿಇಒ
ಬ್ಯಾಗ್ ಬಹಳಷ್ಟು ಭಾರ ಇತ್ತು, ಆಕೆ ಕೆಲಸದ ಸಾಮಾಗ್ರಿಗಳಿವೆ ಎಂದು ಹೇಳಿದ್ದರು. ನನಗೆ ಬೆಂಗಳೂರಿಗೆ ಹೋಗುವುದಿದೆ ಎಂದು ಹೋಟೆಲ್ನವರು ಕರೆ ಮಾಡಿದ್ದರು. ಮೂವತ್ತು ಸಾವಿರಕ್ಕೆ ಫೈನಲ್ ಮಾಡಿ ಬೆಂಗಳೂರು ಹೋಗಲು ಓಕೆ ಹೇಳಿದ್ದೆ. ಬೆಂಗಳೂರಿನ ಮಾನ್ಯತಾ ಪಾರ್ಕ್ ಬಿಡಲು ಹೇಳಿದ್ದರು ಎಂದಿದ್ದಾರೆ.
ಬೆಳಗಾವಿಯ ಚೋರ್ಲಾ ಘಾಟ್ ಮೂಲಕ ಬೆಂಗಳೂರು ಹೋಗುತ್ತಿದ್ದೆವು. ಚೋರ್ಲಾ ಘಾಟ್ನಲ್ಲಿ ಆಕ್ಸಿಡೆಂಟ್ಆಗಿ ನಾಲ್ಕು ಗಂಟೆ ತಡವಾಗಿತ್ತು. ಹೀಗಾಗಿ ಸುಚನಾ ಸೇಠ್ ಸಿಕ್ಕಿ ಹಾಕಿಕೊಂಡಿದ್ದರು. ಅಂದು ನಾಲ್ಕು ಗಂಟೆ ತಡವಾಗದಿದ್ದರೆ ಬೆಂಗಳೂರಿಗೆ ತಲುಪುತ್ತಿದ್ದರು. ಅಲ್ಲಿಂದ ಬೇರೆ ಯಾವ ಐಡಿಯಾ ಮೂಲಕ ಸುಲಭವಾಗಿ ತಪ್ಪಿಸಿಕೊಳ್ಳುವ ಪ್ಲ್ಯಾನ್ನಲ್ಲಿದ್ದರು.
ಇದನ್ನೂ ಓದಿ: ಪತಿ ಮೇಲಿನ ಕೋಪಕ್ಕೆ ತನ್ನ ಮಗನನ್ನು ಕೊಂದ ಉದ್ಯಮಿ ಸುಚನಾ ಸೇಠ್ ಯಾರು?
ಜನವರಿ 6 ರಿಂದ ಜನವರಿ 10ರ ವರೆಗೂ ರೂಮ್ ಬುಕ್ ಮಾಡಿದ್ದರು. ಆದರೆ ಜನವರಿ 8 ರಂದು ಮಗನನ್ನ ಕೊಂದು ಅಂದು ರಾತ್ರಿ 12 ಗಂಟೆ 30 ನಿಮಿಷಕ್ಕೆ ರೂಮ್ ಖಾಲಿ ಮಾಡಿದ್ದಾರೆ. ಮಗನ ಶವವನ್ನ ಸೂಟ್‌ಕೇಸ್‌ಗೆ ತುಂಬಿ ಡಿಕ್ಕಿಯೊಳಗೆ ಇಟ್ಟಿದ್ದಾರೆ. 30 ಸಾವಿರ ರೂ. ಬಾಡಿಗೆ ನೀಡಿ ಗೋವಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ನಾಲ್ಕು ದಿನ ಗೋವಾದಲ್ಲೇ ಇದ್ದೇ ಎಂದು ಯಾಮಾರಿಸುವುದಕ್ಕೆ ಜನವರಿ 10 ವರೆಗೂ ರೂಮ್ ಬುಕ್ ಮಾಡಿದ್ದರು.
ಇನ್ನು ಶವದೊಂದಿಗೆ ಬೆಂಗಳೂರಿಗೆ ಬರ್ತಿದ್ದಂತೆ, ತನ್ನ ಕಾರ್‌ಗೆ ಶವದ ಸೂಟ್‌ಕೇಸ್ ಶಿಫ್ಟ್ ಮಾಡಬೇಕು. ಆ ಬಳಿಕ ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ ಮಗನ ಶವವನ್ನ ಎಸೆಯಬೇಕು ಎನ್ನುವುದು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಫ್ಲ್ಯಾನ್ ಉಲ್ಟಾ ಆಗಿದ್ದು, ಬೆಂಗಳೂರು ತಲುಪೋ ಮೊದಲೇ ಐಮಂಗಲ ಬಳಿ ಶವದೊಂದಿಗೆ ಲಾಕ್ ಆಗಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Fri, 12 January 24