ಪತಿ ಮೇಲಿನ ಕೋಪಕ್ಕೆ ತನ್ನ ಮಗನನ್ನು ಕೊಂದ ಉದ್ಯಮಿ ಸುಚನಾ ಸೇಠ್ ಯಾರು?

ಗೋವಾದ ಹೋಟೆಲ್​ವೊಂದರಲ್ಲಿ ತನ್ನ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿ ಮೃತದೇಹವನ್ನು ಸೂಟ್​ಕೇಸ್​ನಲ್ಲಿ ತುಂಬಿಸಿ ಬೆಂಗಳೂರಿಗೆ ಕೊಂಡೊಯುತ್ತಿದ್ದ ಉದ್ಯಮಿ ಸುಚನಾ ಸೇಠ್ ಎಂಬಾಕೆಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದರು. ಪ್ರಕರಣ ಸಂಬಂಧ ಹೊಟೇಲ್ ಸಿಬ್ಬಂದಿ ಹಾಗೂ ಟ್ಯಾಕ್ಸಿ ಚಾಲಕ ಆರೋಪಿ ಮಹಿಳೆಯನ್ನು ಬಂಧಿಸಲು ಪೊಲೀಸರಿಗೆ ಸಹಕರಿಸಿದ್ದಾರೆ. ಪತಿಯ ವಿಚಾರದಲ್ಲಿ ತಾನು ಹೆತ್ತ ಮಗುವನ್ನೇ ಕೊಂದ ಉದ್ಯಮಿ ಸುಚನಾ ಸೇಠ್ ಯಾರು? ಇಲ್ಲಿದೆ ಮಾಹಿತಿ.

ಪತಿ ಮೇಲಿನ ಕೋಪಕ್ಕೆ ತನ್ನ ಮಗನನ್ನು ಕೊಂದ ಉದ್ಯಮಿ ಸುಚನಾ ಸೇಠ್ ಯಾರು?
ಪತಿ ಮೇಲಿನ ಕೋಪಕ್ಕೆ ತನ್ನ ಮಗನನ್ನು ಕೊಂದ ಉದ್ಯಮಿ ಸುಚನಾ ಸೇಠ್ ಯಾರು?
Follow us
| Updated By: Rakesh Nayak Manchi

Updated on:Jan 09, 2024 | 4:04 PM

ಚಿತ್ರದುರ್ಗ, ಜ.9: ಗೋವಾದ ಹೋಟೆಲ್​ವೊಂದರಲ್ಲಿ ತನ್ನ ಮಗುವನ್ನು ಹತ್ಯೆ (Murder) ಮಾಡಿ ಮೃತದೇಹವನ್ನು ಸೂಟ್​ಕೇಸ್​ನಲ್ಲಿ ಬೆಂಗಳೂರಿಗೆ ಕೊಂಡೊಯುತ್ತಿದ್ದ ಉದ್ಯಮಿ ಸುಚನಾ ಸೇಠ್ ಎಂಬಾಕೆಯನ್ನು ಚಿತ್ರದುರ್ಗ (Chitradurga) ಜಿಲ್ಲಾ ಪೊಲೀಸರು ಬಂಧಿಸಿದ್ದರು. ಈಕೆಯ ಬಂಧನಕ್ಕೆ ಹೊಟೇಲ್ ಸಿಬ್ಬಂದಿ ಹಾಗೂ ಟ್ಯಾಕ್ಸಿ ಚಾಲಕ ಪೊಲೀಸರಿಗೆ ಸಹಕರಿಸಿದ್ದರು. ಹಾಗಾದರೆ ಪತಿ ಮೇಲಿನ ಕೋಪಕ್ಕೆ ತಾನು ಹತ್ತೆ ಮಗುವನ್ನೇ ಕೊಂದು ಹಾಕಿದ ಈ ಸುಚನಾ ಸೇಠ್ ಯಾರು? ಇಲ್ಲಿದೆ ಮಾಹಿತಿ.

ಖಾಸಗಿ ಕಂಪನಿ ಸ್ಥಾಪಕಿ ಸುಚನಾ​ಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಗುವಿನ ಶವವನ್ನು ಸೂಟ್​ಕೇಸ್​ನಲ್ಲಿ ಹಾಕಿ ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಆಕೆಯನ್ನು ಪೊಲೀಸರು ಬಂಧಿಸಿದ್ದರು.

ಸುಚನಾ ಸೇಠ್ ಗೋವಾದ ಹೊಟೇಲ್​ನಿಂದ ಟ್ಯಾಕ್ಸಿ ಮೂಲಕ ಹೋಗಿರುವುದನ್ನು ಹೊಟೇಲ್ ಸಿಬ್ಬಂದಿ ನೋಡಿದ್ದಾರೆ. ಅಲ್ಲದೆ, ಕೊಠಡಿ ಪರಿಶೀಲನೆ ವೇಳೆ ರಕ್ತದ ಕಲೆಗಳು ಪತ್ತೆಯಾಗಿರುವುದನ್ನು ಕಂಡು ಹೊಟೇಲ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಅಲರ್ಟ್ ಆದ ಪೊಲೀಸರು, ಫೋನ್​ ಮೂಲಕ ಟ್ಯಾಕ್ಸಿ ಚಾಲಕನನ್ನು ಸಂಪರ್ಕಿಸಿ ಹೆದ್ದಾರಿ ಬಳಿ ಪೊಲೀಸ್ ಠಾಣೆ ಕಂಡಾಕ್ಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ರಾಷ್ಟ್ರೀಯ ಹೆದ್ದಾರಿ 4ರ ಐಮಂಗಲ ಠಾಣೆ ಬಳಿ ಚಾಲಕ ಟ್ಯಾಕ್ಸಿ ನಿಲ್ಲಿಸಿ ಆರೋಪಿ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಸ್ವಂತ ಮಗುವನ್ನೇ ಕೊಂದ ತಾಯಿ, ಅಷ್ಟೊಂದು ಕಟುಕಳಾಗಿದ್ದೇಕೆ ಸಿಇಒ ಸುಚನಾ? ಇಲ್ಲಿದೆ ಓದಿ

ಪೊಲೀಸರು ಕಾರ್​​ನ ಡಿಕ್ಕಿಯಲ್ಲಿದ್ದ ಸೂಟ್​​ಕೇಸ್​​​​ ಪರಿಶೀಲಿಸಿದಾಗ ಅದರಲ್ಲಿ ಮಗುವಿನ ಶವ ಪತ್ತೆಯಾಗಿದೆ. ಸದ್ಯ, ಮಗುವಿನ ಶವ ಮಾರ್ಚರಿಗೆ ಶಿಫ್ಟ್ ಮಾಡಲಾಗಿದೆ. ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಗೋವಾ ಪೊಲೀಸರು ಠಾಣೆಗೆ ಆಗಮಿಸಿ ಆರೋಪಿ ಸುಚನಾ ವಶಕ್ಕೆ ಪಡೆದು ಗೋವಾಕ್ಕೆ ಕರೆದೊಯ್ದಿದ್ದಾರೆ.

ಸುಚನಾ ಸೇಠ್ ಯಾರು?

ಸುಚನಾ ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಳು. ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ದಿ ಮೈಂಡ್‌ಫುಲ್ ಎಐ ಲ್ಯಾಬ್​ನ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿದ್ದಾಳೆ. ಕಳೆದ ನಾಲ್ಕು ವರ್ಷಗಳಿಂದ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾಳೆ.

ಸುಚನಾ ಸೇಠ್ ಬೆಂಗಳೂರಿನ ಬೂಮರಾಂಗ್ ಕಾಮರ್ಸ್‌ನಲ್ಲಿ ಹಿರಿಯ ದತ್ತಾಂಶ ವಿಜ್ಞಾನಿಯಾಗಿ ಕೆಲಸ ಮಾಡಿದ್ದಳು. ನಗರದಲ್ಲಿ ತನ್ನದೇ ಆದ ಕಂಪನಿಯನ್ನು ಸ್ಥಾಪಿಸುವ ಮುನ್ನ ಗ್ರಾಹಕರಿಗಾಗಿ ಡೇಟಾ-ಚಾಲಿತ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದಳು. ಅಲ್ಲದೆ, ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸುಚನಾ ಸೇಠ್ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಡಾಟಾ ಸೈನ್ಸಸ್ ಗ್ರೂಪ್, ಇನ್ನೋವೇಶನ್ ಲ್ಯಾಬ್‌ಗಳಲ್ಲಿ ಹಿರಿಯ ಅನಾಲಿಟಿಕ್ಸ್ ಸಲಹೆಗಾರ್ತಿಯಾಗಿ ಮತ್ತು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದ್ದಾಳೆ.

ಮಗನ ಬಗ್ಗೆ ವಿಚಾರಿಸಿದ್ದ ಹೊಟೇಲ್ ಸಿಬ್ಬಂದಿ

ಸುಚನಾ ಸೇಠ್ ಜನವರಿ 6 ರಂದು ಉತ್ತರ ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ತನ್ನ ನಾಲ್ಕು ವರ್ಷದ ಮಗನೊಂದಿಗೆ ಬಂದಿದ್ದಳು. ಸೋಮವಾರ ಬೆಳಗ್ಗೆ ಬೆಂಗಳೂರಿಗೆ ತೆರಳಲು ಕ್ಯಾಬ್ ವ್ಯವಸ್ಥೆ ಮಾಡುವಂತೆ ಹೋಟೆಲ್‌ ಸಿಬ್ಬಂದಿಗೆ ಸೂಚಿಸಿದ್ದಳು. ಅದರಂತೆ ಕ್ಯಾಬ್ ಹತ್ತುವಾಗ ಮಗ ಎಲ್ಲಿ ಎಂದು ಸಿಬ್ಬಂದಿ ವಿಚಾರಿಸಿದಾಗ ಆತ ಸಂಬಂಧಿಕರ ಮನೆಗೆ ಹೋಗಿರುವುದಾಗಿ ಹೇಳಿದ್ದಾಳೆ.

ಇದಾದ ನಂತರ ಸ್ವಚ್ಛತಾ ಸಿಬ್ಬಂದಿ ಕೊಠಡಿ ಸ್ವಚ್ಛಗೊಳಿಸಲೆಂದು ಹೋದಾಗ ರಕ್ತದ ಕಲೆಗಳು ಪತ್ತೆಯಾಗಿದ್ದು, ಕೂಡಲೇ ಹೊಟೇಲ್ ಸಿಬ್ಬಂದಿಗೆ ಸೂಚಿಸಿದ್ದಾರೆ. ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದ್ದು, ಟ್ಯಾಕ್ಸಿ ವಿವರಗಳನ್ನು ಕೂಡ ನೀಡಿದ್ದಾರೆ. ಅಲರ್ಟ್ ಆದ ಪೊಲೀಸರು ಟ್ಯಾಕ್ಸಿ ಚಾಲಕನನ್ನು ಸಂಪರ್ಕಿಸಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಿರಿಯೂರು ಆಸ್ಪತ್ರೆ ವೈದ್ಯಾಧಿಕಾರಿ ಹೇಳಿದ್ದೇನು?

ಐಮಂಗಲ ಪೊಲೀಸರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಿದ್ದಾರೆ ಎಂದು ಹಿರಿಯೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕುಮಾರ್ ನಾಯ್ಕ್ ಹೇಳಿದ್ದಾರೆ. ಗೋವಾದಲ್ಲಿ ಮಗು ಕೊಲೆ ಪ್ರಕರಣ ನಡೆದಿದೆ ಎಂಬ ಮಾಹಿತಿಯಿದೆ. ಗೋವಾ ಪೊಲೀಸರು, ಸಂಬಂಧಿಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಮರಣೋತ್ತರ ಪರೀಕ್ಷೆ ಪರೀಕ್ಷೆ ಬಳಿಕ ಮಗು ಹತ್ಯೆ ಬಗ್ಗೆ ಮಾಹಿತಿ ಸಿಗಲಿದೆ ಎಂದರು.

ಆರೋಪಿ ಸುಚನಾಳಿಗೆ ಆರು ದಿನ ಪೊಲೀಸ್ ಕಸ್ಟಡಿ

ತನ್ನ ಪುತ್ರನನ್ನೇ ಕೊಲೆ ಮಾಡಿದ ಆರೋಪಿ ಸುಚನಾಳನ್ನು ಗೋವಾ ಪೊಲೀಸರು ಬಂಧಿಸಿ ಗೋವಾಕ್ಕೆ ಕರೆದೊಯ್ದು ಮಾಪುಸಾ ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್, ಸುಚನಾಳನ್ನು ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Tue, 9 January 24