ಸ್ವಂತ ಮಗುವನ್ನೇ ಕೊಂದ ತಾಯಿ, ಅಷ್ಟೊಂದು ಕಟುಕಳಾಗಿದ್ದೇಕೆ ಸಿಇಒ ಸುಚನಾ? ಇಲ್ಲಿದೆ ಓದಿ

ನಾಲ್ಕು ವರ್ಷದ ಸ್ವಂತ ಮಗನನ್ನೇ ಕೊಲೆ ಮಾಡಿದ್ದ ಸಿಇಒ ಸುಚನಾ ಸೇಠ್​ ಪ್ರಕರಣವನ್ನು ತನಿಖೆ ನಡೆಸಿದ ಗೋವಾ ಪೊಲೀಸರಿಗೆ ಹಲವು ವಿಚಾರಗಳು ಗೊತ್ತಾಗಿವೆ. ಪ್ರವಾಸಕ್ಕೆಂದು ಗೋವಾಗೆ ಹೋಗಿದ್ದ ಸುಚನಾ ಮರಳಿ ಬರುವಾಗ ಮಗನ ಶವವನ್ನು ಸೂಟ್​ ಕೇಸ್​ನಲ್ಲಿ ತಂದಿದ್ದು ಏಕೆ? ಸುಚನಾ ಮಗನನ್ನು ಕೊಲೆ ಮಾಡಿದ್ರಾ? ಇಲ್ಲಿದೆ ಓದಿ

ಸ್ವಂತ ಮಗುವನ್ನೇ ಕೊಂದ ತಾಯಿ, ಅಷ್ಟೊಂದು ಕಟುಕಳಾಗಿದ್ದೇಕೆ ಸಿಇಒ ಸುಚನಾ? ಇಲ್ಲಿದೆ ಓದಿ
ಆರೋಪಿ ಸುಚನಾ
Follow us
TV9 Web
| Updated By: ಆಯೇಷಾ ಬಾನು

Updated on:Jan 09, 2024 | 3:50 PM

ಬೆಂಗಳೂರು, ಜನವರಿ 09: ನಾಲ್ಕು ವರ್ಷದ ಸ್ವಂತ ಮಗನನ್ನೇ ಕೊಲೆ ಮಾಡಿದ್ದ ಸಿಇಒ ಸುಚನಾ (CEO Suchana) ಸೇಠ್​ ಪ್ರಕರಣವನ್ನು ತನಿಖೆ ನಡೆಸಿದ ಗೋವಾ ಪೊಲೀಸರಿಗೆ (Goa Police) ಹಲವು ವಿಚಾರಗಳು ಗೊತ್ತಾಗಿವೆ. ಪಶ್ಚಿಮ ಬಂಗಾಳದ (West Bengal) ಕೊಲ್ಕತ್ತಾ ಮೂಲದ ಸುಚನಾ ಸೇಠ್ 2008-09 ರಲ್ಲಿ ಬೆಂಗಳೂರಿಗೆ (Bengaluru) ಬಂದು ನೆಲೆಸಿದ್ದಾರೆ. ಇಲ್ಲಿ ಸ್ಟಾರ್ಟ್​​ಅಪ್​ ಕಂಪನಿಯೊಂದು ಪ್ರಾರಂಭಿಸಿದ್ದಾರೆ. ಕಂಪನಿಯ ಸಿಇಒ ಆಗಿರುವ ಸುಚನಾ ಅವರು ಇಲ್ಲಿಯೇ ತಮಿಳುನಾಡು ಮೂಲದ ಟೆಕ್ಕಿ ವೆಂಕಟರಮಣ ಜೊತೆ ವಿವಾಹವಾಗಿದ್ದಾರೆ. ನಂತರ ದಂಪತಿ ನಡುವೆ ಮನಸ್ತಾಪವಾಗಿದೆ. ಬಳಿಕ ಸುಚನಾ 2020ರಲ್ಲಿ ಪತಿಯಿಂದ ದೂರವಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇನ್ನು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುಚನಾ ಮಾನಸಿಕ ಒತ್ತಡದಲ್ಲಿದ್ದರು. ಈ ನಡುವೆ ನ್ಯಾಯಾಲಯ ಪ್ರತಿ ಭಾನುವಾರ ಮಗುವನ್ನ ನೋಡಲು ತಂದೆಗೆ ಅನುಮತಿ ನೀಡಿತ್ತು. ಹೀಗಾಗಿ ಫಿಲಿಪೈನ್ಸ್​ನಲ್ಲಿರುವ ​ವೆಂಕಟರಮಣ ಪ್ರತಿ ಭಾನುವಾರ ವಿಡಿಯೋ ಕಾಲ್ ಮುಖಾಂತರ ಮಗುವನ್ನು ನೋಡುತ್ತಿದ್ದನು. ಆದರೆ ಸುಚನಾಗೆ ಇದು ಇಷ್ಟವಿರಲಿಲ್ಲ.

ಸುಚನಾ ಮಗನನ್ನು ಕರೆದುಕೊಂಡು ಜನವರಿ 6 ರಂದು ಗೋವಾಕ್ಕೆ ಪ್ರವಾಸ ತೆರಳಿದ್ದಾರೆ. ಜನವರಿ 7 ರವಿವಾರ ರಾತ್ರಿ ಉತ್ತರ ಗೋವಾ ತಲುಪಿದ್ದಾರೆ. ಅಲ್ಲಿ ಕೊಲ್​ ಬನಿಯಾನ್​ ಹೋಟೆಲ್​ನಲ್ಲಿ ತಾಯಿ-ಮಗು ಉಳಿದುಕೊಂಡಿದ್ದಾರೆ.

ಸುಚನಾ ಜನವರಿ 7ರ ಮಧ್ಯರಾತ್ರಿ ರಾತ್ರಿಯೇ ಹೋಟೆಲ್​​​​​​ನಿಂದ ಚೆಕ್​ಔಟ್ ಆಗಿದ್ದಾರೆ. ಬಳಿಕ ಹೊಟೆಲ್ ಸಿಬ್ಬಂದಿಗೆ “ಬೆಂಗಳೂರಿಗೆ ಹೋಗಲು ಕ್ಯಾಬ್ ಮಾಡಿಕೊಡುವಂತೆ” ಕೇಳಿದ್ದಾರೆ. ಆಗ ಹೊಟೇಲ್​ ಸಿಬ್ಬಂದಿ ಗೋವಾದಿಂದ ಬೆಂಗಳೂರು ಹೋಗಲು ಕ್ಯಾಬ್ ದುಬಾರಿ ಆಗುತ್ತೆ ಅಂತ ಹೇಳಿದ್ದಾರೆ. ವಿಮಾನದ ಮೂಲಕ ಹೋದರೇ ಕಡಿಮೆ ದರದಲ್ಲಿ ತಲುಪಬಹುದು ಎಂದು ಹೊಟೆಲ್ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: ಗೋವಾ ಹೋಟೆಲ್​ನಲ್ಲಿ ಮಗು ಹತ್ಯೆ ಮಾಡಿ ಸೂಟ್ ಕೇಸ್​ನಲ್ಲಿ ಶವ ರವಾನಿಸುತ್ತಿದ್ದ ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಸುಚನಾ ಅರೆಸ್ಟ್

ಆದರೆ ಇದಕ್ಕೆ ಒಪ್ಪದ ಸುಚನಾ “ಬೇಡ ಬೇಡ ನನಗೆ ಟ್ಯಾಕ್ಸಿನೇ ಬೇಕು” ಅಂತ ಪಟ್ಟು ಹಿಡಿದಿದ್ದಾರೆ. ರಾತ್ರಿಯೇ ಗೋವಾದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇದಾದ ಬಳಿಕ ಇಂದು (ಜ.09) ಬೆಳಗ್ಗೆ ಹೋಟೆಲ್​ ಸಿಬ್ಬಂದಿ ರೂಮ್ ಕ್ಲೀನ್ ಮಾಡಲು ಹೋಗಿದ್ದಾರೆ. ಈ ವೇಳೆ ರೂಮ್ ನಲ್ಲಿ ರಕ್ತದ ಕಲೆಗಳು ಬಿದ್ದಿದ್ದನ್ನು ಗಮನಿಸಿದ್ದಾರೆ. ಕೂಡಲೇ ಹೋಟೆಲ್​ ಕಲ್ಲಂಗುಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಹಿಳೆಗೆ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ನಂತರ ಪೊಲೀಸರು ಅದು ಹೇಗೋ ಟ್ಯಾಕ್ಸಿ ಚಾಲಕನ ಮೊಬೈಲ್​ ನಂಬರ್ ಪಡೆದು ಆತನೊಂದಿಗೆ ಮಾತಾಡಿ, ಬಳಿಕ ಸುಚನಾ ಜತೆಗೂ ಮಾತಾಡಿದ್ದಾರೆ. ಈ ವೇಳೆ ನಿಮ್ಮ ಮಗ ಎಲ್ಲಿದೆ ಅಂತಾ ಪೊಲೀಸರು ಕೇಳಿದ್ದಾರೆ. ಆಗ ಸುಚನಾ ತನ್ನ ಸ್ನೇಹಿತನ ಮನೆಯಲ್ಲಿ ಬಿಟ್ಟು ಬಂದಿದ್ದಾಗಿ ಹೇಳಿದ್ದಾರೆ.

ಸುಚನಾ ನೀಡಿದ ವಿಳಾಸ ಪರಿಶೀಲನೆ ನಡೆಸಿದಾಗ ವಿಳಾಸ ತಪ್ಪಾಗಿದೆ. ಮಹಿಳೆ ನೀಡಿದ ವಿಳಾಸ ತಪ್ಪಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಮತ್ತೆ ಟ್ಯಾಕ್ಸಿ ಚಾಲಕನ ಜೊತೆಗೆ ಮಾತಾಡಿದ್ದಾರೆ. ಮಹಿಳೆಗೆ ಗೊತ್ತಾಗದಂತೆ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ. ಆಗ ಟ್ಯಾಕ್ಸಿ ಚಾಲಕ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಬಳಿಕ ಗೋವಾ ಪೊಲೀಸರು ಐಮಂಗಲ ಪೊಲೀಸರನ್ನು ಸಂಪರ್ಕಿಸಿ “ನಾವು ಚಿತ್ರದುರ್ಗ ಎಸ್​ಪಿ ಅವರ ಜೊತೆಗೆ ನಾನು ಮಾತಾಡಿದ್ದೇವೆ, ಕಾರು ತಪಾಸಣೆ ಮಾಡಿ” ಎಂದು ಹೇಳಿದ್ದಾರೆ. ಈ ವೇಳೆ ಬ್ಯಾಗ್​ನಲ್ಲಿ ಮಗುವಿನ‌ ಶವ ಸಿಕ್ಕಿದೆ. ಕೂಡಲೇ ಐಮಂಗಲ ಪೊಲೀಸರು ಸುಚನಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಗ್​​ನಲ್ಲಿ ಶವ ಇದೆ ಎಂಬುವ ಮಾಹಿತಿ ತಿಳಿಯುತ್ತಿದ್ದಂತೆ ಅತ್ತ ಹೊಟೆಲ್ ಮ್ಯಾನೇಜರ್ ಕಡೆಯಿಂದ ಕಲ್ಲಂಗುಡ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ನಾರ್ಥ್ ಗೋವಾ ಎಸ್‌ಪಿ ನಿಧೀನ್ ವಾಲ್ಸಾನ್ ಮಾತನಾಡಿ, ಎಸ್​ಐ ಪರೇಶ್ ನೇತೃತ್ವದ ತಂಡ ಕೂಡಲೇ ಐಮಂಗಲಕ್ಕೆ ತೆರಳಿ ಮಹಿಳೆಯನ್ನು ವಶಕ್ಕೆ ಪಡೆದಿದೆ. ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದೇವೆ‌. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ಯಾವಾಗ ಮತ್ತು ಹೇಗೆ ಆಗಿದೆ ಅನ್ನೋ ಮಾಹಿತಿ ಗೊತ್ತಾಗಲಿದೆ. ಮಹಿಳೆಯವಿಚಾರಣೆ ಮುಂದುವರೆದಿದೆ. ಯಾವ ಉದ್ದೇಶದಿಂದ ಕೊಲೆ ಮಾಡಿದ್ದಾರೆ ಅನ್ನೋದು ಗೊತ್ತಾಗಿಲ್ಲ. ನ್ಯಾಯಾಲಯದ ಆದೇಶವನ್ನು ಓದಬೇಕಾಗಿದೆ ಅದಾದ ಬಳಿಕ ಮಾಹಿತಿ ಸಿಗುತ್ತೆ. ನ್ಯಾಯಾಲಯದ ಆದೇಶ ಬಂದಿದೆ ಅಂತ ಆರೋಪಿ ಹೇಳಿದ್ದಾರೆ‌. ಅದು ನಮ್ಮ ಕೈಗೆ ಸಿಕ್ಕಿಲ್ಲ ಅದನ್ನು ತರೆಸಿಕೊಂಡು ಪರಿಶೀಲನೆ ಮಾಡುತ್ತೇವೆ.

ಕತ್ತು ಹಿಸುಕಿ ಕೊಲೆ ಶಂಕೆ

ನ್ಯಾಯಾಲಯದ ಆದೇಶದಂತೆ ವೆಂಕಟರಮಣ ವಿಡಿಯೋ ಕಾಲ್​ ಮಾಡಿ ಮಗನನ್ನು ನೋಡುತ್ತಾರೆ. ಆದರೆ ಇದು ಸುಚನಾಗೆ ಇಷ್ಟವಿರಲಿಲ್ಲ. ಹೀಗಾಗಿ ಸುಚನಾ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಮಗುವನ್ನು ಕೊಂದ ನಂತರ ತಾನು ಕೂಡ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂಬ ಅಂಶ ಟಿವಿ9 ಡಿಜಿಟಲ್​ಗೆ ತಿಳಿದುಬಂದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:26 pm, Tue, 9 January 24