AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ ರಾಜ್ಯಪಾಲನಾಗಿದ್ದೇನೆಂದು ಹೇಳಿ ಕಲಬುರಗಿ ವ್ಯಕ್ತಿಗೆ 3.8 ಲಕ್ಷ ರೂ. ವಂಚನೆ

ಕಲಬುರಗಿಯ ಶಾಸ್ತ್ರಿ ನಗರ ನಿವಾಸಿ ಪ್ರೇಮಲತಾ ವಿಶ್ವನಾಥ ಎಂಬುವವರಿಗೆ ತೆಲಂಗಾಣ ರಾಜ್ಯಪಾಲನಾಗಿದ್ದೇನೆಂದು ಹೇಳಿ ಜಿಲ್ಲೆಯ ಎಂಬಿ ನಗರ ನಿವಾಸಿ ಶಾಂತಕುಮಾರ ಜೆಟ್ಟೂರು ಎಂಬಾತನಿಂದ 3.8 ಲಕ್ಷ ರೂ. ವಂಚನೆ ಮಾಡಿರುವಂತಹ ಘಟನೆ ನಡೆದಿದೆ. ಸದ್ಯ ನಗರದ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ತೆಲಂಗಾಣ ರಾಜ್ಯಪಾಲನಾಗಿದ್ದೇನೆಂದು ಹೇಳಿ ಕಲಬುರಗಿ ವ್ಯಕ್ತಿಗೆ 3.8 ಲಕ್ಷ ರೂ. ವಂಚನೆ
ಶಾಂತಕುಮಾರ್‌ ಜೆಟ್ಟೂರು
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 12, 2024 | 4:17 PM

ಕಲಬುರಗಿ, ಜನವರಿ 12: ತೆಲಂಗಾಣ ರಾಜ್ಯಪಾಲನಾಗಿದ್ದೇನೆಂದು ಹೇಳಿ 3.8 ಲಕ್ಷ ರೂ. ವಂಚನೆ (Fraud) ಮಾಡಿರುವಂತಹ ಘಟನೆ ನಡೆದಿದ್ದು, ನಗರದ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಕಲಬುರಗಿಯ ಶಾಸ್ತ್ರಿನಗರ ನಿವಾಸಿ ಪ್ರೇಮಲತಾ ವಿಶ್ವನಾಥ್​ಗೆ ಕಲಬುರಗಿಯ ಎಂ.ಬಿ.ನಗರ ನಿವಾಸಿ ಶಾಂತಕುಮಾರ್ ಜೆಟ್ಟೂರು ವಂಚನೆ ಮಾಡಲಾಗಿದೆ. ಪ್ರೇಮಲತಾ ಕುಟುಂಬಕ್ಕೆ ಮೊದಲಿನಿಂದಲೂ ವಂಚಕ ಶಾಂತಕುಮಾರ್ ಜೆಟ್ಟೂರು ಪರಿಚಯವಿದ್ದ. ಇತ್ತಿಚೆಗೆ ಸರ್ಕಾರಿ ಪಾಸಿಂಗ್ ವಾಹನದಲ್ಲಿ ಮನೆಗೆ ಬಂದು ನಂಬಿಕೆ ಬರುವಂತೆ ಮಾಡಿದ್ದ. ತೆಲಂಗಾಣ ರಾಜ್ಯಪಾಲನಾಗಿದ್ದೇನೆ. ಹಣದ ಅವಶ್ಯಕತೆ ಇದೆ ಎಂದು 3.8 ಲಕ್ಷ ರೂ. ಹಣವನ್ನು ಪಡೆದು ಬಳಿಕ ಕೊಡದೆ ವಂಚನೆ ಮಾಡಿದ್ದಾನೆ.

ಬ್ಯಾಂಕ್​ನಲ್ಲಿಟ್ಟಿದ್ದ ಸಾವಿರಾರು ರೂ. ಹಣ ರಾತ್ರೋ ರಾತ್ರಿ ಮಾಯ

ದೇವನಹಳ್ಳಿ: ಬ್ಯಾಂಕ್​ನಲ್ಲಿಟ್ಟಿದ್ದ ಸಾವಿರಾರು ರೂ. ಹಣ ರಾತ್ರೋ ರಾತ್ರಿ ಮಾಯವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಯೂನಿಯನ್ ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣ ಇದ್ದಕ್ಕಿದ್ದಂತೆ ಮಾಯವಾಗಿದೆ ಎಂದು ಹತ್ತಾರು ಜನರು ಇದೇ ರೀತಿ ಆರೋಪ ಮಾಡಿದ್ದಾರೆ. ಖಾತೆಯಲ್ಲಿದ್ದ ಉಳಿತಾಯ ಹಣ ಕಳೆದುಕೊಂಡು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಏಳು ಜನ ಡ್ರಗ್​​​​​ ಪೆಡ್ಲರ್​​ಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು

ಯಾವ ಕಾರಣಕ್ಕೆ ಹಣ ಕಟ್ ಆಗಿದೆ ಮತ್ತು ಬ್ಯಾಂಕ್ ಸಿಬ್ಬಂದಿಗಳು ಸಮರ್ಪಕ ಉತ್ತರ ಕೊಡುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ. ಕೆಲ ರೈತರು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್​ಗೆ ಥಂಬ್ ನೀಡಿ ಬಂದ ನಂತರ ಖಾತೆಯಲ್ಲಿದ್ದ ಹಣ ಮಾಯ‌ವಾಗಿದೆ. ಯಾರು ಯಾವ ಖಾತೆಗೆ ಹಣ ವರ್ಗಾವಣೆಯಾಗಿದೆ ಅಂತ ತಿಳಿಸುವಂತೆ ಒತ್ತಾಯಿಸಿದ್ದಾರೆ.

ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ 2 ಬಂಧನ: 7 ಲಕ್ಷ ರೂ. ಮೌಲ್ಯದ 121 ಗ್ರಾಂ.ಚಿನ್ನ ವಶಕ್ಕೆ

ಬೆಂಗಳೂರು: ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಕಂಠ, ಸಂಜಯ್ ಬಂಧಿತ ಆರೋಪಿಗಳು. ಬಂಧಿತರಿಂದ 7 ಲಕ್ಷ ಮೌಲ್ಯದ 121 ಗ್ರಾಂ.ಚಿನ್ನ, 1 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಸದ್ಯ ರಾಜಗೋಪಾಲನಗರ ಪೊಲೀಸರು ತನಿಖೆ ನಡೆಸಿದ್ದಾರೆ. ರಾಜಗೋಪಾಲನಗರದ ಮನೆಯೊಂದರ ಹಳ್ಳಿಯಲ್ಲಿ ಕೃತ್ಯ ಎಸಗಿದ್ದರು. ಮನೆಯಲ್ಲಿದ್ದ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದರು.

ಇದನ್ನೂ ಓದಿ: ಐಎಎಸ್, ಐಪಿಎಸ್ ಕನಸು ಕಂಡವ ಮಾಡಿದ್ದು ಉದ್ಯಮಿಯ ಕಿಡ್ನಾಪ್! ಇಬ್ಬರು ಅರೆಸ್ಟ್‌

ಈ ಹಿಂದೆ ನಾಲ್ವರನ್ನು ಬಂಧನ ಮಾಡಿದ್ದ ಪೊಲೀಸರು, ಬಳಿಕ ಇಂದು ಪ್ರಕರಣದ ಪ್ರಮುಖ ಆರೋಪಿ ಮಣಿಕಂಠನನ್ನು ಬಂಧಿಸಿದ್ದರು. ರಾಜಗೋಪಾಲನಗರದ ರೌಡಿಶೀಟ್ ಸಹ ಹೊಂದಿದ್ದು, ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಲವು ಭಾರಿ ಬಂಧನವಾದರೂ ಮತ್ತದೆ ಕೃತ್ಯ ಎಸಗುತ್ತಿದ್ದ.

ಮತ್ತಷ್ಟ ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:16 pm, Fri, 12 January 24

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ