AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಗಳ ಕಾಲೇಜು ಸೀಟ್‌ಗಾಗಿ ಅಡ್ಡದಾರಿ ಹಿಡಿದ ಉದ್ಯಮಿ, ಕೊನೆಗೆ ಆತನೇ ಕಿಡ್ನಾಪ್!

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮಗಳಿಗೆ ಬಿಬಿಎ ಸೀಟ್‌ ಕೊಡಿಸಲು ಉದ್ಯಮಿಯೊರ್ವ ಅಡ್ಡದಾರಿ ಹಿಡಿದಿದ್ದಾನೆ. ಅಲ್ಲದೇ ಕೊನೆಗೆ ಆತನೇ ಕಿಡ್ನಾಪ್ ಆಗಿರುವ ಘಟನೆ ನಡೆದಿದೆ. ಏನಿದು ಸ್ಟೋರಿ? ಹೇಗೆ ಕಿಡ್ನಾಪ್ ಆಯ್ತು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು: ಮಗಳ ಕಾಲೇಜು ಸೀಟ್‌ಗಾಗಿ ಅಡ್ಡದಾರಿ ಹಿಡಿದ ಉದ್ಯಮಿ, ಕೊನೆಗೆ ಆತನೇ ಕಿಡ್ನಾಪ್!
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jan 12, 2024 | 5:23 PM

Share

ಬೆಂಗಳೂರು, (ಜನವರಿ 12): ಅಡ್ಡದಾರಿಯಲ್ಲಿ ಮಗಳಿಗೆ ಕಾಲೇಜು ಸೀಟು ಪಡೆಯಲು ಹೋಗಿ ಉದ್ಯಮಿಯೊಬ್ಬ(businessman) ತಾನೇ ಕಿಡ್ನ್ಯಾಪ್‌ ಆಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ತನ್ನ ಮಗಳಿಗೆ BBA ಸೀಟ್​ಗಾಗಿ ಉದ್ಯಮಿ ಚೇತನ್ ಶಾ ಎನ್ನುವರು ಸಚಿನ್ ಎನ್ನುವಾತನನ್ನು ಸಂಪರ್ಕಿಸಿದ್ದರು. ಬಳಿಕ ಕಾಲೇಜಿನ ನಿಗಮಗಳ ಪ್ರಕಾರ ಉದ್ಯಮಿ ಚೇತನ್ ಶಾ ಪುತ್ರಿಗೆ ಸೀಟು ಸಿಕ್ಕಿದೆ. ಆದ್ರೆ, ಸಚಿನ್ ನಾನೇ ನಿಮ್ಮ ಮಗಳಿಗೆ ಸೀಟು ಸಿಗುವಂತೆ ಮಾಡಿದ್ದು ಎಂದು ಕಮಿಷನ್​ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೆ, ಚೇತನ್ ಹಣ ಕೊಡಲು ಒಪ್ಪದಿದ್ದಕ್ಕೆ ಸಚಿನ್ ತನ್ನ ಸಹಚರರೊಂದಿಗೆ ಕಿಡ್ನಾಪ್ ಮಾಡಿದ್ದಾನೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ ಪೊಲೀಸರು ಸಚಿನ್ ಶಾ ಹಾಗೂ ಗೌರಿಶಂಕರ್ ಎಂಬವರನ್ನು ಬಂಧಿಸಿದ್ದು, ಬಂಧಿತರಿಂದ 7 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕು, ಒಂದು ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣ ಹಿನ್ನೆಲೆ

ಉದ್ಯಮಿ ಚೇತನ್ ಎಂಬುವವರು ತಮ್ಮ ಮಗಳಿಗೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಸೀಟು ಕೊಡಿಸಲು ಮುಂದಾಗಿದ್ದರು. ಶಿಕ್ಷಣ ಸಂಸ್ಥೆಯ ಕೆಲ ನಿಯಮಗಳಿಂದ ಸೀಟು ಸಿಕ್ಕಿರಲಿಲ್ಲ, ಇತ್ತ ಅವಧಿ ಕೂಡ ಮೀರುತ್ತಿತ್ತು. ತನ್ನ ಮಗಳನ್ನು ಹೇಗಾದರೂ ಮಾಡಿ ಅದೇ ಕಾಲೇಜಿನಲ್ಲಿಯೇ ಸೇರಿಸಬೇಕೆಂಬ ಕಾರಣದಿಂದ ಚೇತನ್ ಅನ್ಯ ಮಾರ್ಗವನ್ನು ಆಯ್ದುಕೊಂಡಿದ್ದರು. ಆ ಸಮಯದಲ್ಲಿ ಬಂಧಿತ ಆರೋಪಿ ಸಚಿನ್ ಪರಿಚಯವಾಗಿದ್ದ. ಈ ವೇಳೆ ಸಚಿನ್ ನನಗೆ ಕಾಲೇಜಿನಲ್ಲಿ ಬಹಳ ಲಿಂಕ್ ಇದೆ, ನಿಮ್ಮ ಮಗಳಿಗೆ ಸೀಟ್ ಕೊಡಿಸುತ್ತೇನೆಂದು ಹೇಳಿದ್ದ.

ಇದನ್ನೂ ಓದಿ: ಬೆಂಗಳೂರು: ಏಳು ಜನ ಡ್ರಗ್​​​​​ ಪೆಡ್ಲರ್​​ಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು

ಕೆಲ ದಿನಗಳ ನಂತರ ಸಚಿನ್,  ಸೀಟು ಸಿಗುತ್ತೆ ಆದರೆ ಅದಕ್ಕೆ ಏಳೆಂಟು ‌ಲಕ್ಷ ರೂ. ಖರ್ಚಾಗುತ್ತೆ ಎಂದಿದ್ದ.  ಸೀಟ್ ಸಿಗುತ್ತೆ ಎಂಬ ಕಾರಣಕ್ಕೆ  ಚೇತನ್ ಸಹ ಸಮ್ಮತಿಸಿದ್ದ. ಆದರೆ ದಿನ ಕಳೆದರೂ ಸಚಿನ್‌ ಮುಖಾಂತರ ಕಾಲೇಜು ಸೀಟು ಮಾತ್ರ ಸಿಗಲಿಲ್ಲ. ಹೀಗಾಗಿ ಚೇತನ್‌  ಕೊನೆಗೆ ಕಾಲೇಜಿಗೆ ಹೋಗಿ ಸಂಸ್ಥೆಯ ನಿಯಮದ ಪ್ರಕಾರವೇ ಸೀಟು ಪಡೆದುಕೊಂಡಿದ್ದರು.

ಈ ವಿಚಾರ ತಿಳಿದ ಸಚಿನ್‌, ನಿನ್ನ ಮಗಳಿಗೆ ಸೀಟು ಕೊಡಿಸಿದ್ದು ನಾನು. ನನ್ನ ಕಮಿಷನ್ ಹಣ ಕೊಡು ಎಂದು ಪಟ್ಟು ಹಿಡಿದಿದ್ದಾನೆ. ಆದರೆ ಇದಕ್ಕೆ ಚೇತನ್ ಒಪ್ಪಿರಲಿಲ್ಲ. ಇದರಿಂದ ಸಿಟ್ಡಿಗೆದ್ದ ಸಚಿನ್ ,ತನ್ನ ಜಿಮ್ ಸ್ನೇಹಿತನಾಗಿದ್ದ ಗೌರಿಶಂಕರ ಜತೆ ಆಟೋದಲ್ಲಿ ಬಂದು ಬಳಿ ಚೇತನ್ ಕಾರನ್ನು ಅಡ್ಡ ಹಾಕಿ ಕಿಡ್ನಾಪ್ ಮಾಡಿದ್ದ. ಬಳಿಕ 7 ‌ಲಕ್ಷ ರೂ. ಹಣ ತರಿಸಿಕೊಂಡು ಡಾ. ರಾಜ್ ಕುಮಾರ್ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು.

ನಂತರ ಉದ್ಯಮಿ ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಕಾರ್ಯಚರಣೆ ನಡೆಸಿ ಸಚಿನ್ ಹಾಗೂ ಗೌರಿಶಂಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತರಿಂದ ಆ ಏಳು ಲಕ್ಷ ರೂಪಾಯಿ ಹಣವನ್ನು ವಶ ಪಡೆದುಕೊಂಡಿದ್ದಾರೆ.  ಇನ್ನು ಸ್ಪರ್ಧಾತ್ಮಕ ಪರಿಕ್ಷೆಗೆ ತಯಾರಿ ನಡೆಸಿದ್ದ ಸಚಿನ್ ಬಂಧನವಾಗಿದೆ. ಈ ವಿಚಾರಗೊತ್ತಾಗುತ್ತಿದ್ದಂತೆಯೇ ಮಗನ ಐಎಎಸ್, ಐಪಿಎಸ್ ಕನಸು ಕಂಡ ಪೊಷಕರು ಶಾಕ್ ಆಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 5:20 pm, Fri, 12 January 24

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?