ಐಎಎಸ್, ಐಪಿಎಸ್ ಕನಸು ಕಂಡವ ಮಾಡಿದ್ದು ಉದ್ಯಮಿಯ ಕಿಡ್ನಾಪ್! ಇಬ್ಬರು ಅರೆಸ್ಟ್‌

ಈ ಯುವಕ ಐಎಎಸ್, ಐಪಿಎಸ್ ಆಗುವ ಕನಸು ಕಾಣುತ್ತಿದ್ದನು. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದನು. ದೊಡ್ಡ ಹುದ್ದೆಯ ಕನಸು ಕಂಡಿದ್ದ ಈತ ಮಾಡಿದ್ದು ಉದ್ಯಮಿಯ ಕಿಡ್ನಾಪ್. ಸದ್ಯ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಯುವಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಐಎಎಸ್, ಐಪಿಎಸ್ ಕನಸು ಕಂಡವ ಮಾಡಿದ್ದು ಉದ್ಯಮಿಯ ಕಿಡ್ನಾಪ್! ಇಬ್ಬರು ಅರೆಸ್ಟ್‌
ಉದ್ಯಮಿಯನ್ನು ಅಪಹರಣ ಮಾಡಿ ಬಂಧಿತರಾಗಿರುವ ಸಚಿನ್ ಮತ್ತು ಗೌರಿಶಂಕರ್
Follow us
Jagadisha B
| Updated By: Rakesh Nayak Manchi

Updated on: Jan 12, 2024 | 12:59 PM

ಬೆಂಗಳೂರು, ಜ.12: ಈ ಯುವಕ ಐಎಎಸ್, ಐಪಿಎಸ್ ಆಗುವ ಕನಸು ಕಾಣುತ್ತಿದ್ದನು. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದನು. ದೊಡ್ಡ ಹುದ್ದೆಯ ಕನಸು ಕಂಡಿದ್ದ ಈತ ಮಾಡಿದ್ದು ಉದ್ಯಮಿಯ ಕಿಡ್ನಾಪ್. ಸದ್ಯ ಪ್ರಕರಣ ಸಂಬಂಧ ಬೆಂಗಳೂರು (Bengaluru) ಪೊಲೀಸರು ಯುವಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಸಚಿನ್, ಗೌರಿಶಂಕರ್​ ಬಂಧಿತ ಆರೋಪಿಗಳಾಗಿದ್ದು, ರಾಜಾಜಿನಗರದಲ್ಲಿ ಜನವರಿ 5 ರಂದು ನಡೆದಿದ್ದ ಅಪಹರಣ ಪ್ರಕರಣ ಇದಾಗಿದೆ. ಬಿಬಿಎ ಸೀಟ್ ಕೊಡಿಸಿದ್ದು ತಾನೇ ಎಂದು ಹೇಳಿ ಹಣಕ್ಕೆ ಬೇಡಿಕೆ ಇಟ್ಟು ಉದ್ಯಮಿಯನ್ನೇ ಕಿಡ್ನಾಪ್ ಮಾಡಲಾಗಿತ್ತು.

ಏನಿದು ಪ್ರಕರಣ?

ಉದ್ಯಮಿ ಚೇತನ್ ಷಾ ತನ್ನ ಮಗಳಿಗೆ ಸೆಂಟ್ ಜೋಸೆಫ್ ಕಾಲೇಜಿನ ಬಿಬಿಎ ಸೀಟ್​ ಕೊಡಿಸಲು ಓಡಾಡುತಿದ್ದರು. ಈ ವೇಳೆ ಸಚಿನ್​ನನ್ನು ಸಂಪರ್ಕಿಸಿದ್ದಾರೆ. ಆದರೆ ಕಾಲೇಜಿನ ನಿಯಮದ ಪ್ರಕಾರವೇ ಚೇತನ್ ಮಗಳಿಗೆ ಸೀಟ್ ಸಿಕಿತ್ತು. ಆದರೇ ಆ ಸೀಟ್ ನನ್ನಿಂದಲೇ ಸಿಕ್ಕಿದೆ ಎಂದು ಸಚೀನ್ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ.

ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ ಮಾಡಲು ಹಣ ಬೇಕೆಂದು ಕಿಡ್ನಾಪ್ ಮಾಡಿ ಕೊಲೆ; ಗೋವಾಗೆ ಹೋಗಿ ಮೋಜು-ಮಸ್ತಿ ಮಾಡಿದ್ದ ಆರೋಪಿಗಳು ಅರೆಸ್ಟ್

ಹಣ ಕೊಡಲು ಉದ್ಯಮಿ ಚೇತನ್ ಷಾ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಸಚಿನ್ ತನ್ನ ಸಹಪಾಟಿಗಳ ಜೊತೆಗೂಡಿ ಚೇತನ್ ಅಪಹರಣಕ್ಕೆ ಪ್ಲಾನ್ ಮಾಡಿದ್ದನು. ಅದರಂತೆ ಆಟೋದಲ್ಲಿ ಬಂದ ಆರೋಪಿಗಳು ಹಾಡ ಹಗಲೇ ಉದ್ಯಮಿ ಕಾರ್ ತಡೆದು ಅಪಹರಿಸಿದ್ದರು.

ಹಣ ಕೈ ಸೇರುವವರೆಗೂ ಆರೋಪಿಗಳು ಚೇತನ್​ ಇದ್ದ ಕಾರಿನಲ್ಲೇ ಬೆಂಗಳೂರು ಸುತ್ತಾಡಿದ್ದಾರೆ. ಚೇತನ್​ ಮನೆಗೆ ಒಬ್ಬನನ್ನು ಕಳುಹಿಸಿ 7 ಲಕ್ಷ ಹಣ ಪಡೆದ ನಂತರ ಕಾರಿನಿಂದ ಇಳಿದು ಆರೋಪಿಗಳು ಪರಾರಿಯಾಗಿದ್ದರು. ಇದಾದ ಬಳಿಕ ಚೇತನ್ ರಾಜಾಜಿನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಚಿನ್ ಹಾಗೂ ಗೌರಿಶಂಕರ್​ನನ್ನು ಬಂಧಿಸಿ 7 ಲಕ್ಷ ನಗದು ಹಾಗೂ ಮೊಬೈಲ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ