ನ್ಯೂ ಇಯರ್ ಪಾರ್ಟಿ ಮಾಡಲು ಹಣ ಬೇಕೆಂದು ಕಿಡ್ನಾಪ್ ಮಾಡಿ ಕೊಲೆ; ಗೋವಾಗೆ ಹೋಗಿ ಮೋಜು-ಮಸ್ತಿ ಮಾಡಿದ್ದ ಆರೋಪಿಗಳು ಅರೆಸ್ಟ್
ಸಂಜಯ್, ಆನಂದ್, ತಿಮ್ಮ ಮತ್ತು ಹನುಮಂತ ಎಂಬ ನಾಲ್ವರು ಆರೋಪಿಗಳು ಹೊಸ ವರ್ಷ ಪಾರ್ಟಿ ಮಾಡಲು ಹೇಗಾದರೂ ಮಾಡಿ ಹಣ ಹೊಂದಿಸಬೇಕೆಂದು ಪ್ಲಾನ್ ಮಾಡುತ್ತಿದ್ದರು. ಆಗ ಅವರ ತಲೆಗೆ ಬಂದದ್ದೇ ಕಿಡ್ನಾಪ್. ಡಿಸೆಂಬರ್ 30 ರಂದು ಗುರು ಸಿದ್ದಪ್ಪನ ಕಿಡ್ನಾಪ್ ಮಾಡಿ ಆತನ ಹೆಂಡತಿಯಿಂದ ಐದು ಲಕ್ಷ ಹಣ ಪಡೆದಿದ್ದರು. ನಂತರ ಗುರು ಸಿದ್ದಪ್ಪ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಬೆಂಗಳೂರು, ಜ.10: ಹೊಸ ವರ್ಷದಂದು ಪಾರ್ಟಿ (New Year Party) ಮಾಡಲು ಹಣ ಬೇಕೆಂದು ಇಬ್ಬರನ್ನು ಕಿಡ್ನಾಪ್ ಮಾಡಿ ಓರ್ವನನ್ನು ಕೊಲೆ (Murder) ಮಾಡಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಗುರುಸಿದ್ದಪ್ಪ ಕೊಲೆಯಾದ ವ್ಯಕ್ತಿ. ಘಟನೆ ಸಂಬಂಧ ಜ್ಞಾನ ಭಾರತಿ ಠಾಣೆ ಪೊಲೀಸರು (Jnanabharathi Police Station) ಸಂಜಯ್, ಆನಂದ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಬಲೆ ಬೀಸಲಾಗಿದೆ. ಆರೋಪಿಗಳು ಡಿಸೆಂಬರ್ 30 ರಂದು ಗುರು ಸಿದ್ದಪ್ಪನ ಕಿಡ್ನಾಪ್ (Kidnap) ಮಾಡಿ ಆತನ ಹೆಂಡತಿಯಿಂದ ಐದು ಲಕ್ಷ ಹಣ ಪಡೆದಿದ್ದರು. ನಂತರ ಗುರು ಸಿದ್ದಪ್ಪ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಬಳಿಕ ನ್ಯೂ ಇಯರ್ ಪಾರ್ಟಿ ಮಾಡಲು ಗೋವಾಗೆ ಹೋಗಿದ್ದರು ಎಂದು ತಿಳಿದು ಬಂದಿದೆ.
ಸಂಜಯ್, ಆನಂದ್, ತಿಮ್ಮ ಮತ್ತು ಹನುಮಂತ ಎಂಬ ನಾಲ್ವರು ಆರೋಪಿಗಳು ಹೊಸ ವರ್ಷ ಪಾರ್ಟಿ ಮಾಡಲು ಹೇಗಾದರೂ ಮಾಡಿ ಹಣ ಹೊಂದಿಸಬೇಕೆಂದು ಪ್ಲಾನ್ ಮಾಡುತ್ತಿದ್ದರು. ಆಗ ಅವರ ತಲೆಗೆ ಬಂದದ್ದೇ ಕಿಡ್ನಾಪ್. ಹೀಗಾಗಿ ಡಿಸೆಂಬರ್ 24 ರಂದು ಹಣ ಬೇಕು ಅಂದ್ರೆ ಕಿಡ್ನಾಪ್ ಮಾಡಲೇಬೇಕು ಎಂದು ನಾಲ್ವರು ಆರೋಪಿಗಳು ಕಿಡ್ನಾಪ್ ಮಾಡಲು ಪ್ಲಾನ್ ಮಾಡಿದ್ರು. ಇದಕ್ಕಾಗಿ ಮೊದಲಿಗೆ ಕಾರ್ಪೆಂಟರ್ ಮತ್ತು ಪೇಯಿಂಟ್ ಕೆಲಸ ಮಾಡ್ತಿದ್ದ ಬಿಹಾರ ಮೂಲದ ಸಂಜಯ್ ಎಂಬಾತನ ಕಿಡ್ನಾಪ್ ಮಾಡಲು ಪ್ಲಾನ್ ಮಾಡಲಾಗಿತ್ತು.
ಮೊದಲ ಕಿಡ್ನಾಪ್ ವಿಫಲ, ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದ ಕಿಶನ್
ಡಿಸೆಂಬರ್ 24 ರಂದು ಪ್ಲಾನ್ ಮಾಡಿ ಕೆಲಸ ಇದೆ ಬನ್ನಿ ಎಂದು ಸಂಜಯ್ನನ್ನು ಕರೆಸಿಕೊಳ್ಳಲಾಗಿತ್ತು. ಆದರೆ ಅವತ್ತು ಕಿಡ್ನಾಪ್ ಮಾಡಲಾಗಿರಲಿಲ್ಲ. ನಂತರ ಡಿಸೆಂಬರ್ 25ಕ್ಕೆ ಮತ್ತೆ ಪ್ಲಾನ್ ಮಾಡಿ ಕರೆಸಿಕೊಳ್ಳಲು ಮುಂದಾಗಿದ್ರು. ಆಗ ತಾನು ಊರಲ್ಲಿ ಇಲ್ಲಾ ನಮ್ಮ ಹುಡುಗ ಬರ್ತಾನೆ ಎಂದು ಕಿಶನ್ ಎಂಬಾತನನ್ನು ಸಂಜಯ್ ಕೆಲಸಕ್ಕೆ ಕಳಿಸಿದ್ದ. ಆಗ ಕಿಶನ್ ಬಂದ ನಂತರ ಕಾರಿನಲ್ಲಿ ಹಾಕಿಕೊಂಡು ಹಣಕ್ಕೆ ಡಿಮಾಂಡ್ ಮಾಡಿದ್ರು. ಹತ್ತು ಸಾವಿರ ಆದ್ರೂ ಕೊಡು ಎಂದು ಡಿಮಾಂಡ್ ಮಾಡಿದ್ರು. ಈ ವೇಳೆ ತಾನೊಬ್ಬ ಕೂಲಿ ಕೆಲಸ ಮಾಡುವವನು ತನ್ನ ಬಳಿ ಹಣ ಎಲ್ಲಿದೆ ಎಂದು ಕಿಶನ್ ಅಳಲು ತೋಡಿಕೊಂಡಿದ್ದ. ಇದನ್ನು ಒಪ್ಪಿದ ಆರೋಪಿಗಳು ಪ್ಲಾನ್ ಚೇಂಜ್ ಮಾಡಿ ಸಂಜಯ್ ಪಂಡಿತ್ ಬಳಿ ಹಣ ಇದೆ ಎಂದು ಪ್ಲಾನ್ ಮಾಡಿ ಆತ ಎಲ್ಲಿದ್ದಾನೆ ಎಂದು ಕಿಶನ್ಗೆ ಕೇಳಿದ್ರು. ಈ ವೇಳೆ ಸಂಜಯ್ ಪಂಡಿತ್ ಕುಂದಾಪುರ ಹೋಗಿರೋದಾಗಿ ತಿಳಿಸಿದ್ದ. ನಂತರ ಆರೋಪಿಗಳ ಗ್ಯಾಂಗ್ ಕಿಶನ್ ಸಹಿತ ಕುಂದಾಪುರಕ್ಕೆ ಹೋಗಿದ್ದರು.
ಇದನ್ನೂ ಓದಿ: 13 ತಿಂಗಳ ಬಳಿಕ ಕೊಲೆ ರಹಸ್ಯ ಬಯಲು -ಮಗಳಿಂದಲೇ ತಾಯಿಯ ಹತ್ಯೆ
ಕುಂದಾಪುರಕ್ಕೆ ಹೋದ ನಂತರ ಕಾಲ್ ಮಾಡಿ ಕೇಳಿಗಾದ ತಾನು ಬೆಂಗಳೂರು ಬಂದಿದ್ದಾಗಿ ಸಂಜಾಯ್ ಹೇಳಿದ್ದ. ಹೀಗಾಗಿ ಮತ್ತೆ ವಾಪಸ್ಸು ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ದಾರಿ ಮಧ್ಯೆ ಟೀಗೆ ಕಾರು ನಿಲ್ಲಿಸಿದ್ದಾಗ ಕಾರಿನಿಂದ ಕಿಶನ್ ಎಸ್ಕೇಪ್ ಆಗಿದ್ದ. ಈ ವೇಳೆ ಕಿಶನ್ಗೆ ಚಾಕು ಬೀಸಿ ಹಿಡಿಯಲು ಎಷ್ಟೇ ಪ್ರಯತ್ನಿಸಿದರೂ ಅದೃಷ್ಟವಶಾತ್ ಕಿಶನ್ ತಪ್ಪಿಸಿಕೊಂಡಿದ್ದ. ನಂತರ ಡಿಸೆಂಬರ್ 30ರಂದು ಬೆಂಗಳೂರಿನಲ್ಲಿ ಮತ್ತೆ ಯಾರನ್ನಾದ್ರೂ ಕಿಡ್ನಾಪ್ ಮಾಡುವ ಎಂದು ಆರೋಪಿಗಳ ಗ್ಯಾಂಗ್ ಪ್ಲಾನ್ ಮಾಡಿತ್ತು.
ಕಿಡ್ನಾಪ್ ಮಾಡಿ ಹಣ ಪಡೆದು ಕೊಲೆ
ಇನ್ನು ಎರಡನೇ ಬಾರಿ ಆರೋಪಿಗಳು ಕಿಡ್ನಾಪ್ಗೆ ಪ್ಲಾನ್ ಮಾಡಿದ್ರು. ಆಗ ಆಟೋಮೊಬೈಲ್ ಪಾರ್ಸ್ಟ್ ಸಪ್ಲೆ ಮಾಡುವ ಗುರುಸಿದ್ದಪ್ಪ ನನ್ನು ಟಾರ್ಗೆಟ್ ಮಾಡಲಾಯಿತು. ಮೃತ ಗುರು ಸಿದ್ದಪ್ಪ ಆರೋಪಿ ಸಂಜಯ್ ಗ್ಯಾರೇಜ್ನಲ್ಲಿ ಕೆಲಸ ಮಾಡ್ತಿದ್ದ. ಹೀಗಾಗಿ ಗುರುಸಿದ್ದಪ್ಪನ ಪರಿಚಯ ಇತ್ತು. ಕಾಲ್ ಮಾಡಿ ಗುರುಸಿದ್ದಪ್ಪನನ್ನು ಉಲ್ಲಾಳ ಕೆರೆ ರಸ್ತೆಗೆ ಕರೆಸಿಕೊಳ್ಳಲಾಯಿತು. ಗುರುಸಿದ್ದಪ್ಪ ಬಂದ ನಂತರ ಐದು ಲಕ್ಷ ಹಣ ಕೊಡು ಇಲ್ಲವಾದ್ರೆ ಕೊಲೆ ಮಾಡ್ತಿವಿ ಎಂದು ಬೆದರಿಕೆ ಹಾಕಿದ್ದರು. ಈ ವೇಳೆ ಹೆದರಿ ಪತ್ನಿಗೆ ಕರೆ ಮಾಡಿ ವ್ಯವಹಾರಕ್ಕೆ ಐದು ಲಕ್ಷ ಹಣ ಬೇಕು ತಂದು ಕೊಡು ಎಂದು ಗುರುಸಿದ್ದಪ್ಪ ಹೇಳಿದ್ದ. ಅದರಂತೆ ಆತನ ಪತ್ನಿ ಹಣ ತಂದು ಕೊಟ್ಟಿದ್ದರು.
ಇನ್ನು ಆರೋಪಿಗಳೂ ಹಣ ಪಡೆದ ನಂತರ ಗುರುಸಿದ್ದಪ್ಪನ ಸಹಿತ ಮಂಚಿನಬೆಲೆ ಡ್ಯಾಂ ಕಡೆಗೆ ಹೋಗಿ ಕಾರಿನಲ್ಲೆ ಮಧ್ಯ ಸೇವನೆ ಮಾಡಿದ್ದರು. ನಂತರ ಮಂಚಿನಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದರು. ಡಿಸೆಂಬರ್ 30ರ ರಾತ್ರಿ ಪಾರ್ಟಿ ಮಾಡಿ ಗುರು ಸಿದ್ದಪ್ಪನನ್ನು ಬಿಟ್ಟು ಕಳಿಸುವುದಾಗಿ ಹೇಳಿದ್ದರು. ಆದರೆ ಇವನನ್ನು ಬಿಟ್ರೆ ಪೊಲೀಸರಿಗೆ ಹೇಳುತ್ತಾನೆ ಎಂದು ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಹಣದ ಸಹಿತ ಗೋವಾ ಹೋಗಿ ಹೊಸ ವರ್ಷದ ಪಾರ್ಟಿ ಮಾಡಿದ್ದರು. ಈ ನಡುವೆ ಗುರುಸಿದ್ದಪ್ಪ ಪತ್ನಿ ತನ್ನ ಗಂಡ ಹಣ ಪಡೆದುಕೊಂಡು ಹೋದವರು ಮನೆಗೆ ವಾಪಸ್ಸು ಬಂದಿಲ್ಲಾ ಎಂದು ಮಿಸ್ಸಿಂಗ್ ಕೇಸ್ ನೀಡಿದ್ರು.
ಮಿಸ್ಸಿಂಗ್ ಕೇಸ್ ವಿಚಾರಣೆ ಮಾಡುವಾಗ ಕೊಲೆ ಆಗಿರುವುದು ಪತ್ತೆಯಾಗಿದೆ. ಸದ್ಯ ಎರಡು ದಿನ ಹುಡುಕಾಟದ ಬಳಿಕ ಮಂಚಿನಬೆಲೆ ಬಳಿಯ ಅರಣ್ಯ ಪ್ರದೇಶದಲ್ಲಿ ಮೃತ ದೇಹ ಪತ್ತೆ ಆಗಿದೆ. ಕಾಡು ಪ್ರಾಣಿಗಳು ಗುರುಸಿದ್ದಪ್ಪನ ದೇಹವನ್ನು ಏಳೆದುಕೊಂಡು ಹೋಗಿ ತಿಂದಿದ್ದಾವೆ. ಗುರುಸಿದ್ದಪ್ಪ ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುರುಸಿದ್ದಪ್ಪ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಜ್ಞಾನಭಾರತಿ ಪೊಲೀಸರಿಂದ ಉಳಿದ ಅರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ