AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ: ಸ್ಥಳೀಯರಿಂದ ಧರ್ಮದೇಟು!

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 65 ವರ್ಷದ ವೃದ್ಧನಿಂದ 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವಂತಹ ಘಟನೆ ನಡೆದಿದೆ. ಮಾತನಾಡಲು ಬಾರದ ಕಾರಣ ಯಾರಿಗೆ ಹೇಳುತ್ತಾಳೆ ಎಂದು ಬಾಲಕಿಯನ್ನು ಮನೆಯ ಹಿತ್ತಲಿಗೆ  ಕರೆದುಕೊಂಡು ಹೋಗಿ ಕೃತ್ಯವೆಸಗಲಾಗಿದೆ.

ರಾಮನಗರ: 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ವೃದ್ಧನಿಂದ ಅತ್ಯಾಚಾರ: ಸ್ಥಳೀಯರಿಂದ ಧರ್ಮದೇಟು!
ಕುದೂರು ಪೊಲೀಸ್ ಠಾಣಾ
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 10, 2024 | 3:26 PM

ರಾಮನಗರ, ಜನವರಿ 10: 65 ವರ್ಷದ ವೃದ್ಧನಿಂದ 12 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ (girl) ಮೇಲೆ ಅತ್ಯಾಚಾರ ಮಾಡಿರುವಂತಹ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಕಲೇಟ್ ಕೊಡಿಸುವುದಾಗಿ ಹೇಳಿ ಬಟ್ಟೆ ಬಿಚ್ಚಿಸಿದ ಆರೋಪ ಮಾಡಲಾಗಿದೆ. ಮಾತನಾಡಲು ಬಾರದ ಕಾರಣ ಯಾರಿಗೆ ಹೇಳುತ್ತಾಳೆ ಎಂದು ಬಾಲಕಿಯನ್ನು ಮನೆಯ ಹಿತ್ತಲಿಗೆ  ಕರೆದುಕೊಂಡು ಹೋಗಿ ಕೃತ್ಯವೆಸಗಲಾಗಿದೆ.

ತಾಯಿ‌ ಮನೆಗೆ ವಾಪಾಸ್ ಆದಾಗ ಬಾಲಕಿ ಅಳುತ್ತಿದ್ದಳು. ಯಾಕೆ ಅಳುತ್ತಿದ್ದೀಯಾ ಅಂತ ಕೇಳಿದಾಗ, ಅಳುತ್ತಲೇ ತನ್ನ ಗುಪ್ತಾಂಗ ತೋರಿಸಿದ್ದಾಳೆ. ಯಾರು ಮಾಡಿದ್ದು ಅಂತ ಕೇಳಿದಾಗ ಸನ್ನೆ ಮಾಡಿ ಅಜ್ಜ‌ನ ಬಗ್ಗೆ ಬಾಲಕಿ ಹೇಳಿದ್ದಾಳೆ. ಕೂಡಲೇ ಅಜ್ಜನನ್ನು ಹಿಡಿದ ಸ್ಥಳೀಯರು ಧರ್ಮದೇಟು ನೀಡಿದ್ದಾರೆ. ಬಳಿಕ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಅಜ್ಜ ಒಪ್ಪಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆ ಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಉಪ್ಪಿನ ಕಾಯಿ ಕೇಳುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

ದಾವಣಗೆರೆ: ಗ್ರಾಮಾಂತರ ಪೊಲೀಸ್ ಠಾಣೆಯ ಗ್ರಾಮಯೊಂದರಲ್ಲಿ‌ 48 ವರ್ಷದ ಮಂಜಪ್ಪ ಡಿ.ಎಚ್​ ಎನ್ನುವ ವ್ಯಕ್ತಿ ಗ್ರಾಮದಲ್ಲಿ ಆ ಮಹಿಳೆಯನ್ನ ಕೆಟ್ಟ ದೃಷ್ಠಿಯಲ್ಲಿ ನೋಡುತ್ತಲೇ ಇದ್ದ. ಇತ್ತೀಚಿಗೆ ಸಂತ್ರಸ್ಥ ಮಹಿಳೆ ತನ್ನ ಮನೆಯಲ್ಲಿ ಮನೆ ಗೆಲಸದಲ್ಲಿ ತೊಡಗಿದ್ದಳು. ಆ ವೇಳೆ ಉಪ್ಪಿನಕಾಯಿ ಕೇಳುವ ನೆಪದಲ್ಲಿ ಅವರ ಮನೆಗೆ ಹೋಗಿದ್ದ. ಕಾರಣ ಸಂತ್ರಸ್ಥ ಮಹಿಳೆಯ ತಂದೆ ಉಪ್ಪಿನ ಕಾಯಿ ಮಾರುತ್ತಿದ್ದರು.

ಇದನ್ನೂ ಓದಿ: ‘ನಾನು ನಿದ್ರೆಯಿಂದ ಎದ್ದೇಳುವ ಮುಂಚೆನೇ ಮಗು ಮೃತಪಟ್ಟಿತ್ತು’: ಸ್ಫೋಟಕ ಅಂಶ ಬಾಯ್ಬಿಟ್ಟ ಸಿಇಒ

ನಮ್ಮ ಮನೆಯಲ್ಲಿ ಉಪ್ಪಿನ ಕಾಯಿ ಇಲ್ಲಾ ತಮ್ಮ ತಂದೆ ಉಪ್ಪಿನ ಕಾಯಿ ಮಾರಾಟ ಮಾಡುತ್ತಾನೆ ಎಂದರು ಕೇಳದೆ ಮನೆ ಪ್ರವೇಶ ಮಾಡಿದ್ದ. ಅತ್ಯಾಚಾರಕ್ಕೆ ಯತ್ನಿಸಿದ್ದು, ಶಕ್ತಿಮಿರಿ ಸಂತ್ರಸ್ಥ ಮಹಿಳೆ ತಡೆದಿದ್ದಳು. ಆದರೆ ಕೆನ್ನೆ ಕಚ್ಚಿ ಗಂಭೀರ ಗಾಯಗೊಳಿಸಿದ್ದ. ಮಹಿಳೆಯ ಚೀರಾಟಕ್ಕೆ ಅಕ್ಕಪಕ್ಕದವರು ಸೇರಿದ್ದರು. ಅಷ್ಟರಲ್ಲಿ ಬಿಟ್ಟು ಓಡಿ ಹೋಗಿದ್ದ. ಆರೋಪಿ ಬಂಧನಕ್ಕೆ ಆಗ್ರಹಿಸಿ ಹತ್ತಾರು ಮಹಿಳೆಯರಿಂದ ಎಸ್ಪಿ‌ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದರು.

ಮತ್ತಷ್ಟು ಕೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ