ಬೆಂಗಳೂರಿನಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದೆಯಾ ವೇಶ್ಯಾವಾಟಿಕೆ? ಸ್ಪಾ ವಿರುದ್ಧ ಮಹಿಳಾ ಸಿಬ್ಬಂದಿಯಿಂದಲೇ ದೂರು
ಬೆಂಗಳೂರಿನಲ್ಲಿ ಎಗ್ಗಿಲ್ಲದೆ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ಅಡ್ಡೆ ನಡೆಸಲಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಔಟ್ ಲೆಟ್ ಮ್ಯಾನೇಜರ್ ರಂಜಿತಾ ಎಂಬುವವರಿಂದ ವೀರಣ್ಣ ಪಾಳ್ಯದಲ್ಲಿರುವ ತತ್ವಾ ಸ್ಪಾ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮಾಡಲಾಗುತ್ತಿದೆ.
ಬೆಂಗಳೂರು, ಜನವರಿ 10: ನಗರದಲ್ಲಿ ಎಗ್ಗಿಲ್ಲದೆ ಸ್ಪಾ (spa) ಹೆಸರಲ್ಲಿ ವೇಶ್ಯಾವಾಟಿಕೆ ಅಡ್ಡೆ ನಡೆಸಲಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದೀಗ ಮತ್ತೊಂದು ಸ್ಪಾ ವಿರುದ್ಧ ಮಹಿಳಾ ಸಿಬ್ಬಂದಿಯಿಂದಲೇ ದೂರು ನೀಡಲಾಗಿದೆ. ಔಟ್ ಲೆಟ್ ಮ್ಯಾನೇಜರ್ ರಂಜಿತಾ ಎಂಬುವವರಿಂದ ವೀರಣ್ಣ ಪಾಳ್ಯದಲ್ಲಿರುವ ತತ್ವಾ ಸ್ಪಾ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮಾಡಲಾಗುತ್ತಿದೆ.
ಸ್ಪಾ ಸೌತ್ ಇಂಡಿಯಾ ರೀಜನಲ್ ಮುಖ್ಯಸ್ಥ ಪ್ರವೀಣ್ ಮತ್ತು ಬೆಂಗಳೂರು ಮುಖ್ಯಸ್ಥ ರಿಶೈ ವಿರುದ್ಧ ದೂರು ನೀಡಿದ್ದು, ಬರುವ ಗ್ರಾಹಕರಿಗೆ ಹೆಚ್ಚಿನ ಸರ್ವಿಸ್ ಕೊಡುವಂತೆ, ಅಲ್ಲದೆ ಹುಡುಗಿಯರನ್ನ ಕಳುಹಿಸಿಕೊಡುವಂತೆ ಒತ್ತಡ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದ ವೇಳೆ ಸಿಕ್ತು ನಕಲಿ ದಾಖಲೆ ಸೃಷ್ಟಿಸುತ್ತಿದ್ದವರ ಸುಳಿವು !
ಮುಖ್ಯಸ್ಥ ಪ್ರವೀಣ್ ವಿರುದ್ಧ ಮೈ ಕೈ ಮುಟ್ಟಿ ಬಲವಂತದಿಂದ ತಬ್ಬಿಕೊಂಡ ಮತ್ತು ರಿಶೈ ಬಲವಂತವಾಗಿ ರೂಮ್ಗೆ ಕರೆದುಕೊಂಡು ಹೋದ ಆರೋಪ ಮಾಡಲಾಗಿದೆ. ಇದರಿಂದ ನೊಂದು ರಂಜಿತ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಬರುವ ಗ್ರಾಹರ ಜೊತೆಗೆ ಸಹಕರಿಸು, ಅವರು ಶ್ರೀಮಂತರಿರುತ್ತಾರೆ. ನಿನ್ನ ಲೈಫ್ ಸೆಟಲ್ ಆಗುತ್ತೆ ಎಂಬ ಆರೋಪ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಮಸಾಜ್ ಪಾರ್ಲರ್ನಲ್ಲಿ ವೇಶ್ಯಾವಾಟಿಕೆ; 44 ಮಹಿಳೆಯರ ರಕ್ಷಣೆ, 34 ಆರೋಪಿಗಳು ವಶಕ್ಕೆ
ಇತ್ತೀಚೆಗೆ ನಗರದಲ್ಲಿ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಓಲ್ಡ್ ಮದ್ರಾಸ್ ರಸ್ತೆಯ ನಿರ್ವಾಣ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ಈ ವೇಳೆ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿತ್ತು. ಹೊರ ರಾಜ್ಯ, ವಿದೇಶದ ಯುವತಿಯರನ್ನು ಕರೆಸಿ ದಂಧೆ ನಡೆಸಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ದಾಳಿ ವೇಳೆ ಒಟ್ಟು 44 ಮಹಿಳೆಯರ ರಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:22 pm, Wed, 10 January 24