ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದ ವೇಳೆ ಸಿಕ್ತು ನಕಲಿ ದಾಖಲೆ ಸೃಷ್ಟಿಸುತ್ತಿದ್ದವರ ಸುಳಿವು !
ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಈ ನಕಲಿ ಆಧಾರ್ ಕಾರ್ಡ್ ಜಾಲ ಪತ್ತೆಯಾಗಿದ್ದು ಹೇಗೆ? ಎಂಬ ಕುತೂಹಲಕಾರಿ ಸಂಗತಿ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ.
ಬೆಂಗಳೂರು ಅ.22: ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ (Pan Card) ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಅಷ್ಟಕ್ಕೂ ಈ ನಕಲಿ ಆಧಾರ್ ಕಾರ್ಡ್ (Adhar Card) ಜಾಲ ಪತ್ತೆಯಾಗಿದ್ದು ಹೇಗೆ? ಎಂಬ ಕುತೂಹಲಕಾರಿ ಸಂಗತಿ ಟಿವಿ9 ಡಿಜಿಟಲ್ಗೆ ಲಭ್ಯವಾಗಿದೆ. ಸಿಸಿಬಿ ಪೊಲೀಸರು ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿಮಾಡಿದ್ದ ವೇಳೆ, ಬಾಂಗ್ಲಾದೇಶ ಮೂಲದ ಯುವತಿಯರ ಬಳಿ ನಕಲಿ ಅಧಾರ್ ಕಾರ್ಡ್ ಪತ್ತೆಯಾಗಿತ್ತು.
ಇದನ್ನು ಆಧರಿಸಿ ಸಿಸಿಬಿ ಪೊಲೀಸರು ತನಿಖೆಗೆ ಇಳಿದಾಗ, ನಕಲಿ ಆಧಾರ್ ಕಾರ್ಡ್ ಜಾಲ ಪತ್ತೆಯಾಗಿದೆ. ಈ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಾಂಗ್ಲಾ ಪ್ರಜೆಯಾ ಕಮಲ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತನಿಂದ ನಕಲಿ ಆಧಾರ್ ಕಾರ್ಡ್ ತಯಾರಿ ಮಾಡಿಕೊಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನಕಲಿ ವೋಟರ್ ಐಡಿ ತಯಾರಿಸುತ್ತಿದ್ದ ಭೈರತಿ ಸುರೇಶ್ ಆಪ್ತರಿಗೆ ನೋಟಿಸ್ ಕೊಟ್ಟು ಸುಮ್ಮನಾದ್ರಾ ಪೊಲೀಸ್?
ಇನ್ನೂ ಪ್ರಕರಣದ ತನಿಖೆ ನಡೆಸಿರುವ ಸಿಸಿಬಿ ಪೊಲೀಸರ ಅನುಮಾನವನ್ನು ಹುಟ್ಟು ಹಾಕಿದೆ. ನಕಲಿ ಅಧಾರ್ ಕಾರ್ಡ್ ಮಾಡಿಕೊಟ್ಟ ಆರೋಪಿಗಳು ಶಾಸಕ ಭೈರತಿ ಸುರೇಶ್ ಮತ್ತು ಕೆಲ ಸಚಿವರ ಆಪ್ತರು ಎಂಬ ಕಾರಣಕ್ಕೆ ಪೊಲೀಸರು ದೇಶದ ಭದ್ರತೆಯನ್ನೆ ಮರೆತು ನಡೆದುಕೊಂಡರಾ? ಎಂಬ ಪ್ರಶ್ನೆ ಉದ್ಭವವಾಗಿದೆ.
ಆಧಾರ್ ಆ್ಯಕ್ಟ್ 2016ನ್ನು ಎಫ್ಐಆರ್ನಲ್ಲಿ ದಾಖಲಿಸದೆ ಕೇವಲ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಕರಣ ಸಮ್ಮರಿಯಲ್ಲಿ ಅಧಾರ್ ಕಾರ್ಡ್ ಕೂಡ ನಕಲಿ ಮಾಡಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ ಈ ಹಿನ್ನೆಲೆಯಲ್ಲಿ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ