ದೇವಸ್ಥಾನಕ್ಕೆ ಹೋಗುತ್ತೇನೆಂದು ಹೋದವ ಶವವಾಗಿ ಪತ್ತೆ: ಜಾಕೆಟ್ ನೋಡಿ ಗಂಡನ ಶವ ಕಂಡುಹಿಡಿದ ಪತ್ನಿ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ‌ ಸಿಂಗರಾಜಿಪುರದ ಶ್ರೀ ಗವಿರಂಗಸ್ವಾಮಿ ದೇವಸ್ಥಾನ ಬೆಟ್ಟದಲ್ಲಿ ದೇವಸ್ಥಾನಕ್ಕೆ ಹೋಗುತ್ತೇನೆ ಎಂದವ ಪ್ರಪಾತದಡಿ ಶವವಾಗಿ ಪತ್ತೆಯಾಗಿರುವಂತಹ ಘಟನೆ ನಡೆದಿದೆ. ಬಿಗ್ ಬಾಸ್ಕೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್, ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

ದೇವಸ್ಥಾನಕ್ಕೆ ಹೋಗುತ್ತೇನೆಂದು ಹೋದವ ಶವವಾಗಿ ಪತ್ತೆ: ಜಾಕೆಟ್ ನೋಡಿ ಗಂಡನ ಶವ ಕಂಡುಹಿಡಿದ ಪತ್ನಿ
ಮೃತ ಲೋಕೇಶ್
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 10, 2024 | 8:39 PM

ರಾಮನಗರ, ಜನವರಿ 10: ದೇವಸ್ಥಾನಕ್ಕೆ ಹೋಗುತ್ತೇನೆ ಎಂದವ ಪ್ರಪಾತದಡಿ ಶವ (dead body) ವಾಗಿ ಪತ್ತೆಯಾಗಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ‌ ಸಿಂಗರಾಜಿಪುರದ ಶ್ರೀ ಗವಿರಂಗಸ್ವಾಮಿ ದೇವಸ್ಥಾನ ಬೆಟ್ಟದಲ್ಲಿ ನಡೆದಿದೆ. ಬೆಂಗಳೂರಿನ‌ ಬನಶಂಕರಿಯ ಹೊಸಕೆರೆಹಳ್ಳಿ ನಿವಾಸಿ ಲೋಕೇಶ್ (35) ಮೃತ ವ್ಯಕ್ತಿ. ಬಿಗ್ ಬಾಸ್ಕೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್, ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಡಿ‌. 31‌ರಂದು ಮನೆಯಿಂದ ಲೋಕೇಶ್ ಹೊರಟಿದ್ದಾರೆ ಎನ್ನಲಾಗಿದ್ದು, ಮಧ್ಯಾಹ್ನ‌ 1‌ ಗಂಟೆಗೆ ಬನಶಂಕರಿ ಮನೆಯಿಂದ ತೆರಳಿದ್ದಾಗಿ ಪತ್ನಿ ಶ್ವೇತಳಿಂದ ಪೊಲೀಸರಿಗೆ ನಾಪತ್ತೆ ದೂರು ನೀಡಲಾಗಿದೆ. ಕಳೆದ ನಾಲ್ಕು ದಿನದಿಂದ ಪೊಲೀಸರಿಂದ ಲೊಕೇಶ್ ಹುಡುಕಾಟ ಮಾಡಿದ್ದಾರೆ. ದಿನಾಂಕ 6ರಂದು  ಬೆಟ್ಟದ ಬಳಿ ಡಿಯೋ ಹೊಂಡ ಬೈಕ್​ ಸಿಕ್ಕಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ನೈತಿಕ ಪೊಲೀಸ್​ಗಿರಿ: ಲಾಡ್ಜ್​ನಲ್ಲಿ ಅನ್ಯಕೋಮಿನ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿತ

ಇಂದು ಮಧ್ಯಾಹ್ನ ಬೆಟ್ಟದ ತಪ್ಪಲಿನಲ್ಲಿ‌ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೈ ಮೇಲೆ ಹಾಕಿದ್ದ ಜಾಕೆಟ್​​ನಿಂದ ಶವ ತನ್ನ ಪತಿಯದ್ದೇ ಎಂದು ಪತ್ನಿ ಶ್ವೇತ ಗುರುತಿ ಹಿಡಿದಿದ್ದಾಳೆ. ಬೆಟ್ಟದ ಮೇಲಿನಿಂದ 400‌ಮೀಟರ್ ಆಳದಲ್ಲಿ ಲೊಕೇಶ್ ಶವ ಬಿದ್ದಿತ್ತು.

ಬೆಂಗಳೂರಿನಿಂದ ಬಂದಿದ್ದ ನಾಲ್ಕು ಜನರಿಂದ‌ ನುರಿತ ಕ್ಲೈಂಬಿಗ್ ತಂಡದ ಕಾರ್ಯಾಚರಣೆಯಿಂದ ಹಗ್ಗ ಬಳಸಿ ಪ್ರಪಾತಕ್ಕಿಳಿದು ಶವ ಮೇಲೆತ್ತಲಾಗಿದೆ. ಸೋಹನ್‌ ನಾಯಕತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ಕೊಳೆತ‌ ಸ್ಥಿತಿಯಲ್ಲಿ ಶವವನ್ನು ಮೇಲೆತ್ತಿ‌ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸ್ಲಾಬ್​​​ ಹಾಕುವ ವೇಳೆ ವಿದ್ಯುತ್​​​ ಸ್ಪರ್ಶಿಸಿ ಓರ್ವ ಕಾರ್ಮಿಕ ಸಾವು

ರಾಯಚೂರು: ಸ್ಲಾಬ್​​​ ಹಾಕುವ ವೇಳೆ ವಿದ್ಯುತ್​​​ ಸ್ಪರ್ಶಿಸಿ ಓರ್ವ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ರಾಯಚೂರಿನ ಮಂತ್ರಾಲಯ ರಸ್ತೆ ಐಡಿಎಸ್​ ಎಂ.ಟಿ ಲೇಔಟ್​​ಬಳಿ ನಡೆದಿದೆ. ಹನುಮೇಶ್​​​(23)ಮೃತ, ಯುವಕ ರಾಮ್​​(33) ಸ್ಥಿತಿ ಗಂಭೀರವಾಗಿದೆ. ಮೃತ ಹನುಮೇಶ್​​​ ತೆಲಂಗಾಣದ ಯರಸನದೊಡ್ಡಿ ಗ್ರಾಮದ ನಿವಾಸಿ. ಗಾಯಾಳು ರಾಮ್​​ ರಾಮಚೂರು ತಾ. ಜಿಲಮಗೆರಾ ಗ್ರಾಮದ ನಿವಾಸಿ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಪಾ ಹೆಸರಲ್ಲಿ ನಡೆಯುತ್ತಿದೆಯಾ ವೇಶ್ಯಾವಾಟಿಕೆ? ಸ್ಪಾ ವಿರುದ್ಧ ಮಹಿಳಾ ಸಿಬ್ಬಂದಿಯಿಂದಲೇ ದೂರು

ಕರೀಂ ಸಾಬ್​​ ಎನ್ನುವವರ ಮಳಿಗೆ ಕಟ್ಟಡ ನಿರ್ಮಾಣದ ವೇಳೆ ಅವಘಡ ಸಂಭವಿಸಿದೆ. ಈ ವೇಳೆ ಸ್ಲಾಬ್​​ ಹಾಕುತ್ತಿದ್ದ ಹನುಮೇಶ್​​​, ರಾಮ್​​, ಇತರೇ ಕಾರ್ಮಿಕರು. ಸ್ಲಾಬ್​​ ಮೇಲೆ ಹನುಮೇಶ್​​, ರಾಮ್​ ಕಾಂಕ್ರೀಟ್​​ ಹಾಕುತ್ತಿದ್ದ. ಸ್ಲಾಬ್​​ ಬಳಿ ಹಾದು ಹೋದ ಹೈ ಟೆನ್ಷನ್ ವೈರ್ ಸ್ಪರ್ಶದಿಂದ ಘಟನೆ ಸಂಭವಿಸಿದೆ. ವಿದ್ಯುತ್​​ ಸ್ಪರ್ಶಿಸಿ ಸ್ಥಳದಲ್ಲಿಯೇ ಹನುಮೇಶ್ ಮೃತ ಪಟ್ಟರೆ, ವಿದ್ಯುತ್​​ ಸ್ಪರ್ಶಿಸಿ ರಾಮ್ ಕೆಳಕ್ಕೆ ಬಿದಿದ್ದಾನೆ.​​ ಸದರ ಬಜಾರ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:37 pm, Wed, 10 January 24

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ