Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವೇರಿ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಕಂಬಕ್ಕೆ ಕಟ್ಟಿಹಾಕಿ ವ್ಯಕ್ತಿಗೆ ಥಳಿತ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಅರೇಮಲ್ಲಾಪುರ ಗ್ರಾಮದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹಿನ್ನೆಲೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿಸಿರುವಂತಹವ ಘಟನೆ ನಡೆದಿದೆ. ಪೋಕ್ಸೊ ಕಾಯ್ದೆ ಅಡಿ ಆರೋಪಿಯನ್ನ ಬಂಧಿಸಲು ಆಗ್ರಹಿಸಲಾಗಿದೆ.

ಹಾವೇರಿ: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಕಂಬಕ್ಕೆ ಕಟ್ಟಿಹಾಕಿ ವ್ಯಕ್ತಿಗೆ ಥಳಿತ
ಗ್ರಾಮಸ್ಥರಿಂದ ಥಳಿತ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 10, 2024 | 10:02 PM

ಹಾವೇರಿ, ಜನವರಿ 10: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (harassment) ಎಸಗಿದ ಆರೋಪ ಹಿನ್ನೆಲೆ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಹಿಗ್ಗಾಮುಗ್ಗ ಥಳಿಸಿರುವಂತಹ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಅರೇಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮಂಜುನಾಥನಿಗೆ (45) ಗ್ರಾಮದ ಮಹಿಳೆಯರು ಮತ್ತು ಪುರಷುರು ಗೂಸಾ ನೀಡಿದ್ದಾರೆ. ಪೋಕ್ಸೊ ಕಾಯ್ದೆ ಅಡಿ ಆರೋಪಿಯನ್ನ ಬಂಧಿಸಲು ಆಗ್ರಹಿಸಲಾಗಿದ್ದು, ಸ್ಥಳಕ್ಕೆ ರಾಣೇಬೆನ್ನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಅರೆಸ್ಟ್​

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದ ಆರೋಪಿಯನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ರಝೀನ್ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ. ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿಯಾಗಿರುವ ಪರಿಶಿಷ್ಟ ಜಾತಿಗೆ ಸೇರಿದ 17 ವರ್ಷದ ಬಾಲಕಿಗೆ ಆರೋಪಿ ಮಹಮ್ಮದ್ ರಝೀನ್ ಪ್ರೀತಿಸುತ್ತಿರುವುದಾಗಿ ಹೇಳಿದ್ದ.

ಇದನ್ನೂ ಓದಿ: ಹಾವೇರಿಯಲ್ಲಿ ನೈತಿಕ ಪೊಲೀಸ್​ಗಿರಿ: ಲಾಡ್ಜ್​ನಲ್ಲಿ ಅನ್ಯಕೋಮಿನ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿತ

ಬಳಿಕ ಬಾಲಕಿಯನ್ನು ಮಂಗಳೂರಿನ ಕುಂಪಲ ಗ್ರಾಮಕ್ಕೆ ಕರೆಸಿಕೊಂಡಿದ್ದ. ಇಲ್ಲಿ ಬಾಡಿಗೆ ಮನೆಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಆರೋಪಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಅಜಾಗರೂಕತೆ ಚಾಲನೆಯಿಂದ ಖಾಸಗಿ ಬಸ್ ಅಪಘಾತ: 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ದೇವನಹಳ್ಳಿ: ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಖಾಸಗಿ ಬಸ್​​ ಅಪಘಾತಕ್ಕೀಡಾಗಿದೆ. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಅನಾಹುತ ತಪ್ಪಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬನಹಳ್ಳಿ ಗೇಟ್​​ ಸಮೀಪ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರ ಸೋಗಿನಲ್ಲಿ ಗಾಂಜಾ ಮಾರಾಟ: ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

ಸ್ಪೀಡ್ ಬ್ರೇಕರ್ ಜಂಪ್ ಮಾಡಿದ ಪರಿಣಾಮ ಖಾಸಗಿ ಬಸ್​​ ಪಲ್ಟಿಯಾಗಿದೆ. ಗಾಯಾಳುಗಳನ್ನು ಹೊಸಕೋಟೆ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ದಾಖಲಾಗಿದೆ.

ವರಿದಿ: ರವಿ ಹೂಗಾರ,  ಟಿವಿ9 ಹಾವೇರಿ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
PSL 2025: ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿದ ಬಾಬರ್ ಆಝಂ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​
VIDEO: ಔಟಾ... ನಾಟೌಟಾ... ಇದು ಕನ್ನಡಿಗನ ಕೂಲ್ ಕ್ಯಾಚ್​