ವಿಜಯಪುರದಲ್ಲಿ ಚಡ್ಡಿ ಗ್ಯಾಂಗ್ ಹಾವಳಿ; ಎಚ್ಚರಿಕೆಯಿಂದಿರಲು ಸಾರ್ವಜನಿಕರಿಗೆ ಪೊಲೀಸರ ಸೂಚನೆ
ವಿಜಯಪುರ ನಗರದಲ್ಲಿ ಚಡ್ಡಿ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಈ ಚಡ್ಡಿ ಗ್ಯಾಂಗ್ ಚಡ್ಡಿ, ಬನಿಯಾನ್, ಮಾಸ್ಕ್ ಮಾತ್ರ ಧರಿಸಿ ಮನೆಗೆ ನುಗ್ಗುತ್ತಾರೆ. ಚಡ್ಡಿ ಗ್ಯಾಂಗ್ನಲ್ಲಿ 5 ರಿಂದ 8 ಜನರು ಇದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಮನೆಗೆ ನುಗ್ಗಿ ದರೋಡೆ ಮಾಡುತ್ತಾರೆ.
ವಿಜಯಪುರ, ಜ.11: ವಿಜಯಪುರ ನಗರದಲ್ಲಿ ಚಡ್ಡಿ ಗ್ಯಾಂಗ್ (Chaddi Gang) ಹಾವಳಿ ಹೆಚ್ಚಾಗಿದೆ. ಹೀಗಾಗಿ ಅಂತರರಾಜ್ಯ ಕಳ್ಳರ ಚಡ್ಡಿ ಗ್ಯಾಂಗ್ ಬಂದಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಈ ಚಡ್ಡಿ ಗ್ಯಾಂಗ್ ಚಡ್ಡಿ, ಬನಿಯಾನ್, ಮಾಸ್ಕ್ ಮಾತ್ರ ಧರಿಸಿ ಮನೆಗೆ ನುಗ್ಗುತ್ತಾರೆ. ಚಡ್ಡಿ ಗ್ಯಾಂಗ್ನಲ್ಲಿ 5 ರಿಂದ 8 ಜನರು ಇದ್ದಾರೆ. ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿ ಮನೆಗೆ ನುಗ್ಗಿ ದರೋಡೆ (Robbery) ಮಾಡುತ್ತಾರೆ.
ಬೇರೆ ಊರುಗಳಿಗೆ ತೆರಳುವಾಗ ಚಿನ್ನ, ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯಲು ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಚಡ್ಡಿ ಗ್ಯಾಂಗ್ ವೇಷಭೂಷಣದಂತೆ ಯಾರಾದರೂ ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಲು ಸೂಚನೆ ನೀಡಲಾಗಿದೆ. ನಗರದ ಗಲ್ಲಿ ಗಲ್ಲಿಯಲ್ಲಿ ಅಟೋ ಮೂಲಕ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. 9480804200 ಅಥವಾ 112 ಗೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ. ಇನ್ನು ಚಡ್ಡಿ ಗ್ಯಾಂಗ್ ವಿಚಾರದಿಂದ ಜನರು ಭಯಭೀತರಾಗಿದ್ದಾರೆ.
ಇದನ್ನೂ ಓದಿ: ಸಿಗ್ನಲ್ ಜಂಪ್: ಕ್ಷಮೆಯಾಚಿಸಿದ ಮಾಲೀಕ,ಕೋಟ್ಯಾಧೀಶ್ವರನ ಸೌಮ್ಯತೆ ಕಂಡು ಬಿಟ್ಟು ಕಳುಹಿಸಿದ ಪೊಲೀಸ್
ದೇವಸ್ಥಾನಕ್ಕೆ ಹೋದವನು ಶವವಾಗಿ ಪತ್ತೆ!
ದೇವಸ್ಥಾನಕ್ಕೆ ಹೋಗುತ್ತೇವೆ ಎಂದವನು ಪ್ರಪಾತದಡಿ ಶವವಾಗಿ ಪತ್ತೆಯಾಗಿದ್ದಾನೆ. ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರದ ಶ್ರೀಗವಿರಂಗಸ್ವಾಮಿ ಬೆಟ್ಟದಲ್ಲಿ ಘಟನೆ ನಡೆದಿದ್ದು, ಬನಶಂಕರಿಯ ಹೊಸಕೆರೆಹಳ್ಳಿ ನಿವಾಸಿ, ಬಿಗ್ ಬಾಸ್ಕೆಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಲೋಕೇಶ್, ಕಳೆದ ಡಿಸೆಂಬರ್ 31ರಂದು ಮನೆಯಿಂದ ಹೊರಟು ಬಂದಿದ್ದಾನೆ. ವಾರ ಕಳೆದ್ರೂ ಪತಿ ಬಾರದಿದ್ದಾಗ ಪತ್ನಿ ಶ್ವೇತ ದೂರು ದಾಖಲಿಸಿದ್ರು.
ಕ್ಯಾಬ್ ಚಾಲಕರ ಸೋಗಿನಲ್ಲಿ ಗಾಂಜಾ ಮಾರಾಟ
ಕ್ಯಾಬ್ ಚಾಲಕರ ಸೋಗಿನಲ್ಲಿ ಗಾಂಜಾ ಮಾರುತ್ತಿದ್ದ ಆರೋಪಿಗಳಿಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಬ್ ಓಡಿಸುತ್ತಿದ್ದ ಯಾದಗಿರಿ, ವಿಜಯಪುರ ಮೂಲದ ವಿಜಯ್ ಕುಮಾರ್, ವಿಜಯ್ನನ್ನು ಬಂಧಿಸಲಾಗಿದೆ. ಇವರು ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳಿಗೆ ಗಾಂಜಾ ಮಾರುತ್ತಿದ್ದರು. ನಿನ್ನೆ ಹೊಸಕೆರೆಹಳ್ಳಿ ಬಳಿ ದಾಳಿ ನಡೆಸಿ 25 ಲಕ್ಷ ರೂ. ಮೌಲ್ಯದ 15 ಕೆಜಿ ಗಾಂಜಾ, ತೂಕದ ಮಷೀನ್, 2 ಮೊಬೈಲ್, 1 ಕಾರು ಜಪ್ತಿ ಮಾಡಲಾಗಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ