ತುಮಕೂರು: ಗರ್ಭಿಣಿಯಾದ 9ನೇ ತರಗತಿ ವಿದ್ಯಾರ್ಥಿನಿ; ಹಾಸ್ಟೆಲ್ ವಾರ್ಡನ್ ಅಮಾನತು
ಹಾಸ್ಟೆಲ್ನಲ್ಲಿ ಉಳಿದುಕೊಂಡು 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗರ್ಭಿಣಿಯಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದಿದೆ. ಹಾಸ್ಟೆಲ್ನಲ್ಲಿ ಬಾಲಕಿ ಚಲನವಲನವನ್ನು ಹಾಸ್ಟೆಲ್ ವಾರ್ಡನ್ ಗಮನಿಸಿಲ್ಲ, ಗರ್ಭಿಣಿಯಾದರೂ ಗೊತ್ತಾಗಿಲ್ಲ. ಹೀಗಾಗಿ ಕರ್ತವ್ಯ ಲೋಪ ಹಿನ್ನೆಲೆ ವಾರ್ಡನ್ ನಿವೇದಿತಾರನ್ನು ಅಮಾನತು ಮಾಡಲಾಗಿದೆ.
ತುಮಕೂರು, ಜ.11: ಹಾಸ್ಟೆಲ್ನಲ್ಲಿ ಉಳಿದುಕೊಂಡು 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಗರ್ಭಿಣಿಯಾದ ಘಟನೆ ತುಮಕೂರು (Tumkur) ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದಿದೆ. ಹಾಸ್ಟೆಲ್ನಲ್ಲಿ ಬಾಲಕಿ ಚಲನವಲನವನ್ನು ಹಾಸ್ಟೆಲ್ ವಾರ್ಡನ್ ಗಮನಿಸಿಲ್ಲ, ಗರ್ಭಿಣಿಯಾದರೂ ಗೊತ್ತಾಗಿಲ್ಲ. ಹೀಗಾಗಿ ಕರ್ತವ್ಯ ಲೋಪ ಹಿನ್ನೆಲೆ ವಾರ್ಡನ್ ನಿವೇದಿತಾರನ್ನು ಅಮಾನತು ಮಾಡಲಾಗಿದೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಿವಾಸಿಯಾಗಿರುವ ಬಾಲಕಿ ಮಧುಗಿರಿ ಪಟ್ಟಣದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸದ್ಯ ಈಕೆ ಏಳು ತಿಂಗಳ ಗರ್ಭಿಣಿಯಾಗಿದ್ದು, ಹೊಟ್ಟೆ ನೋವಿನಿಂದ ತಾಯಿಯ ಜೊತೆಗೆ ಬಾಗೆಪಲ್ಲಿ ಆಸ್ಪತ್ರೆಗೆ ತೆರಳಿದ್ದಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಆತಂಕಕಾರಿ ಬೆಳವಣಿಗೆ: ಗಡಿ ಜಿಲ್ಲೆ ಕೋಲಾರದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ನೂರರತ್ತ! ಕಾರಣವೇನು
ಆಸ್ಪತ್ರೆ ಸಿಬ್ಬಂದಿ ಸ್ಕ್ಯಾನಿಂಗ್ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಸ್ಥಳೀಯ ಯುವಕನ ಜೊತೆ ಬಾಲಕಿ ಲೈಗಿಂಕ ಸಂರ್ಪಕದಲ್ಲಿದ್ದಳು ಎನ್ನಲಾಗುತ್ತಿದೆ. ಬಾಲಕಿ ಗರ್ಭಿಣಿಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ತವ್ಯಲೋಪದಡಿ ಹಾಸ್ಟೆಲ್ ವಾರ್ಡನ್ ನಿವೇದಿತಾ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ