ಸಿಗ್ನಲ್ ಜಂಪ್: ಕ್ಷಮೆಯಾಚಿಸಿದ ಮಾಲೀಕ,ಕೋಟ್ಯಾಧೀಶ್ವರನ ಸೌಮ್ಯತೆ ಕಂಡು ಬಿಟ್ಟು ಕಳುಹಿಸಿದ ಪೊಲೀಸ್

ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಕೆಲವರು ಬೇಕಂತಲೇ ರಸ್ತೆ ಸಂಚಾರ ನಿಯಮ ಉಲ್ಲಂಘಿಸುತ್ತಾರೆ. ಇನ್ನು ಬಗ್ಗೆ ಪೊಲೀಸರು ಪ್ರಶ್ನಿಸಿದರೆ ಅವರಿಗೆ ಅವಾಜ್ ಹಾಕಿ ಓಡಿ ಹೋಗಿರುವ ಉದಾಹರಣೆಗಳು ಇವೆ. ಇದರ ಮಧ್ಯೆ ಕೋಟ್ಯಾಧೀಶರೊಬ್ಬರು ಜಸ್ಟ್ ಜೀಬ್ರಾ ಲೈನ್ ಕ್ರಾಸ್ ಆಗಿದ್ದಕ್ಕೆ ಕಾರಿನಿಂದ ಇಳಿದುಬಂದು ಪೊಲೀಸ್​ ಬಳಿ ಕ್ಷಮೆಯಾಚಿಸಿದ್ದಾರೆ. ಏನಿದು ಘಟನೆ? ಎಲ್ಲಿ ನಡೆದಿದ್ದು ಎನ್ನುವ ವಿವರ ಇಲ್ಲಿದೆ.

ಸಿಗ್ನಲ್ ಜಂಪ್: ಕ್ಷಮೆಯಾಚಿಸಿದ ಮಾಲೀಕ,ಕೋಟ್ಯಾಧೀಶ್ವರನ ಸೌಮ್ಯತೆ ಕಂಡು ಬಿಟ್ಟು ಕಳುಹಿಸಿದ ಪೊಲೀಸ್
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ರಮೇಶ್ ಬಿ. ಜವಳಗೇರಾ

Updated on: Jan 10, 2024 | 10:09 PM

ರಾಮನಗರ, (ಜನವರಿ 10): ಕೆಲವರಿಗೆ ಶ್ರೀಮಂತಿಕೆಯ ಅಹಂಕಾರ, ದಿಮಾಕು ಇರುತ್ತೆ. ಕೋಟ್ಯಾಧೀಶರ ಜೀವನ ಸ್ಟೈಲೇ ಹಾಗೇ. ಕೆಲವರಿಗೆ ಮುಂದಿರುವ ದಾರಿಯೇ ಕಾಣುವುದಿಲ್ಲ. ಆ ರೀತಿಯ ಶ್ರೀಮಂತಿಕೆಯ ಅಹಂ ಅವರಲ್ಲಿರುತ್ತೆ. ಇದರ ಮಧ್ಯೆ ಇಲ್ಲೋರ್ವ ಕೋಟ್ಯಾಧೀಶ ವ್ಯಕ್ತಿ, ಜಸ್ಟ್ ಜೀಬ್ರಾ ಲೈನ್ ಕ್ರಾಸ್  (Traffic Rules) ಮಾಡಿದ್ದಕ್ಕೆ ಕಾರಿನಿಂದ ಇಳಿದುಬಂದು ಟ್ರಾಫಿಕ್​ ಪೊಲೀಸ್ (Traffic Police) ಬಳಿ ಕ್ಷಮೆಯಾಗಿಸಿದ್ದಾರೆ. ಕೋಟ್ಯಾಧೀಶ್ವರನ ಈ ಸೌಮ್ಯತೆ ಟ್ರಾಫಿಕ್​ ಪೊಲೀಸ್​ ಮನಸೋತು ಬಿಟ್ಟು ಕಳುಹಿಸಿದ್ದಾರೆ. ಈ ಒಂದು ಅಪರೂಪದ ಘಟನೆ ರಾಮನಗರದಲ್ಲಿ(Ramanagara)) ನಡೆದಿದೆ.

ಹೌದು… ವೇಗವಾಗಿ ಹೋಗುತ್ತಿದ್ದಾಗ ದಿಢೀರ್ ಸಿಗ್ನಲ್ ಬಿದ್ದಿದೆ. ಕೂಡಲೇ ಫೇರಾರಿ ಕಾರು ಚಾಲನ ಬ್ರೇಕ್ ಹಾಕಿದ್ದಾನೆ. ಆದರೂ ಸಹ ಸಹ ಕಾರು ಜೀಬ್ರಾ ಲೈನ್​ ಕ್ರಾಸ್​ ಆಗಿದೆ. ಇದರಿಂದ ಎಚ್ಚೆತ್ತ ಚಾಲಕ, ಕಾರಿನಿಂದ ಇಳಿದು ಸ್ಥಳದಲ್ಲಿದ್ದ ಟ್ರಾಫಿಕ್​ ಪೊಲೀಸ್ ಬಳಿ ಹೋಗಿ ಕ್ಷಮೆ ಕೋರಿದ್ದಾರೆ. ಕೋಟ್ಯಾಧೀಶ್ವರನ ಸೌಮ್ಯತೆ ಕಂಡು ಟ್ರಾಫಿಕ್ ಪೊಲೀಸ್, ಕಾರಿಗೆ ಯಾವುದೇ ದಂಡ ಹಾಕದೇ ಬಿಟ್ಟು ಕಳುಹಿಸಿದ್ದಾರೆ.

ವೇಗದಲ್ಲಿದ್ದ ಕಾರನ್ನು ಚಾಲಕ ಕಂಟ್ರೋಲ್ ಮಾಡಿದ್ದಾರೆ. ಆದರೂ ಸಹ ಸಿಗ್ನಲ್ ದಿಢೀರ್ ಬಿದ್ದಿದ್ದರಿಂದ ಕಾರು ಜೀಬ್ರಾ ಲೈನ್ ಕ್ರಾಸ್ ಆಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬರುವ ಮುಂಚೆಯೇ ಕಾರು ಮಾಲೀಕ ಸ್ವತಃ ತಾವೇ ಕಾರನಿಂದ ಕೆಳಗಿಳಿದು ಹೋಗಿ ಕ್ಷಮೆಯಾಚಿಸಿದ್ದಾರೆ.

ಒಮ್ಮೆಲೆ ಸಿಗ್ನಲ್ ಬಿತ್ತು. ಆದರೂ ಲೈನ್ ಕ್ರಾಸ್ ಆಯ್ತು. ಅದಕ್ಕೆ ಕಾರು ನಿಲ್ಲಿಸಿದೆ ಎಂದು ತಪ್ಪೊಪ್ಪೊಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್, ದಂಡ ಹಾಕದೇ ಫೇರಾರಿ ಕಾರು ಬಿಟ್ಟು ಕಳುಹಿಸಿದ್ದಾರೆ. ಬೈಕ್​ ಮಾಲೀಕನೇ ಹೇ ಹೋಗಯ್ಯ ಎಂದು ಬೈದು ಹೋಗುವ ಈ ಕಾಲದಲ್ಲಿ ಕೋಟ್ಯಾಧೀಶ ಬಂದು ತಪ್ಪಾಯ್ತು ಎಂದು ಕೇಳಿಕೊಂಡಿರುವುದು ದೊಡ್ಡ ಗುಣ.

ಕಾನೂನು ಎಲ್ಲರಿಗೂ ಒಂದೇ. ಶ್ರೀಮಂತರಿಗೆ, ಬಡವರಿಗೆ ಅಂತ ಬೇರೆ ಬೇರೆ ಇಲ್ಲ ನಿಜ. ಆದ್ರೆ, ಎಲ್ಲಾ ಸಮಯ ಸಂದರ್ಭದಲ್ಲೂ ಸಹ ದಂಡ ವಿಧಿಸುವುದೊಂದೇ ಗುರಿಯಲ್ಲ. ಫೇರಾರಿ ಕಾರಿನ ಚಾಲಕನಿಗೆ ತಪ್ಪಿನ ಅರಿವಾಗಿದೆ. ಹಾಗೇ ಬೇಕಂತಲೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ತಪ್ಪಾಗಿದೆ ಎಂದು ತಿಳಿದು ಪೊಲೀಸ್​ ಬಳಿ ಬಂದು ಕ್ಷಮೆ ಕೋರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ