ಹಾವೇರಿಯಲ್ಲಿ ನೈತಿಕ ಪೊಲೀಸ್ಗಿರಿ: ಲಾಡ್ಜ್ನಲ್ಲಿ ಅನ್ಯಕೋಮಿನ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಥಳಿತ
ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿಬಿದಿದ್ದು, ಇದರಿಂದ ರೊಚ್ಚಿಗೆದ್ದ ಯುವತಿ ಪತಿಚಯಸ್ಥ ಯುವಕರ ಗುಂಪು ಪುರುಷನ ಮೇಲೆ ಹಲ್ಲೆ ಮಾಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ಕೇಸ್ ತಡವಾಗಿ ಬೆಳಕಿಗೆ ಬಂದಿದೆ. ಹಾನಗಲ್ ಪಟ್ಟಣದ ನಾಲ್ಕರ ಕ್ರಾಸ್ ಬಳಿ ಇರುವ ಖಾಸಗಿ ಹೊಟೇಲ್ನಲ್ಲಿ ಘಟನೆ ನಡೆದಿದೆ.
ಹಾವೇರಿ, ಜನವರಿ 10: ಅನ್ಯಕೋಮಿನ ವಿವಾಹಿತ ಮಹಿಳೆಯೊಂದಿಗೆ ಪುರುಷ ಸಿಕ್ಕಿಬಿದಿದ್ದು, ಇದರಿಂದ ರೊಚ್ಚಿಗೆದ್ದ ಯುವತಿ ಪತಿಚಯಸ್ಥ ಯುವಕರ ಗುಂಪು ಪುರುಷನ ಮೇಲೆ ಹಲ್ಲೆ ಮಾಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ (Moral policing) ಕೇಸ್ ತಡವಾಗಿ ಬೆಳಕಿಗೆ ಬಂದಿದೆ. ಬುರ್ಖಾ ಧರಿಸಿಕೊಂಡು ಬಂದಿದ್ದೀಯಾ ಎಂದು ವ್ಯಕ್ತಿ ಜೊತೆಗಿದ್ದ ಮಹಿಳೆಯನ್ನೂ ಥಳಿಸಿದ್ದಾರೆ. ಘಟನೆ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾನಗಲ್ ಪಟ್ಟಣದ ನಾಲ್ಕರ ಕ್ರಾಸ್ ಬಳಿ ಇರುವ ಖಾಸಗಿ ಹೊಟೇಲ್ನಲ್ಲಿ ಘಟನೆ ನಡೆದಿದೆ. ರೂಂನಲ್ಲಿ ನೀರು ಬರುತ್ತಿದೆಯಾ ಎಂದು ಬಾಗಿಲು ತೆರೆಸಿದ್ದಾರೆ. ಬಾಗಿಲು ಓಪನ್ ಮಾಡುತ್ತಿದ್ದಂತೆ ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಹುಡುಗಿನೇ ಬೇಕಿತ್ತಾ ನಿಂಗೆ ಅಂತ ವ್ಯಕ್ತಿ ಮೇಲೂ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಬೆಳಗಾವಿ: ಅನ್ಯಕೋಮಿನ ಯುವಕರಿಂದ ನೈತಿಕ ಪೊಲೀಸ್ಗಿರಿ: 7 ಆರೋಪಿಗಳ ಬಂಧನ, 17 ಜನರ ವಿರುದ್ಧ ಎಫ್ಐಆರ್
ಸದ್ಯ ಮಹಿಳೆ ಮೇಲೆ ಬೇರೆ ದೌರ್ಜನ್ಯ ನಡೆದಿದೆಯಾ ಎಂಬ ಬಗ್ಗೆ ತನಿಖೆ ಪೊಲೀಸರು ನಡೆಸುತ್ತಿದ್ದಾರೆ. ಮಹಿಳೆ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಮಹಿಳೆಗೆ ಹಾನಗಲ್ ತಾಲೂಕ ಆಸ್ಪತ್ರೆಯಲ್ಲಿ ಪೊಲೀಸರು ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ.
ಇದನ್ನೂ ಪದಿ: ಮಂಗಳೂರು ಮೂಡಾ ಆಯುಕ್ತರ ವಿರುದ್ಧ ಮಹಿಳಾ ಉದ್ಯೋಗಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲು
ಲಾಡ್ಜ್ನಿಂದ ಎಳೆತಂದು ಬಳಿಕ ಸಂತ್ರಸ್ಥೆಯನ್ನು ಬೈಕ್ ಮೇಲೆ ಅಜ್ಞಾತ ಸ್ಥಳಕ್ಕೆ ಕರೆದೊಯಲಾಗಿದೆ. ಸಂತ್ರಸ್ಥೆ ಜೊತೆಗಿದ್ದ ಬಸ್ ಡ್ರೈವರ್ ಸೋಮಶೇಖರ್ ನನ್ನ ಥಳಿಸಿ ಎಳೆದು ಬೈಕ್ ಮೇಲೆ ಕೂರಿಸಿಕೊಂಡು ಆರೋಪಿಗಳು ಹೋಗಿದ್ದಾರೆ. ಸದ್ಯ ಹಲ್ಲೆಗೊಳಗಾದ ಬಸ್ ಡ್ರೈವರ್ ಸೋಮಶೇಖರ್ ನಾಪತ್ತೆಯಾಗಿದ್ದು, ಹಾನಗಲ್ ಪೊಲೀಸರು ಹುಡುಕಾಟದಲ್ಲಿದ್ದಾರೆ. ಹಲವು ಅನುಮಾನಗಳಿಗೆ ಪ್ರಕರಣ ಎಡೆಮಾಡಿಕೊಟ್ಟಿದೆ.
ಇಬ್ಬರನ್ನ ಬಂಧಿನ: ಎಸ್ ಪಿ ಅಂಶುಕುಮಾರ
ಎಸ್ ಪಿ ಅಂಶುಕುಮಾರ ಪ್ರತಿಕ್ರಿಯಿಸಿದ್ದು, ಜನವರಿ 8 ರಂದು 1 ರಿಂದ 2 ಗಂಟೆಗೆ ಘಟನೆ ನಡೆದಿದೆ. ಹೊಟೇಲ್ಗೆ ಮಹಿಳೆ ಮತ್ತು ಪುರುಷ ಹೋಗಿದ್ದರು. ಈ ವೇಳೆ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಕರಣದಲ್ಲಿ 5 ರಿಂದ 6 ಜನರಿದ್ದಾರೆ. ಸದ್ಯ ಇಬ್ಬರನ್ನ ಬಂಧಿಸಲಾಗಿದೆ. ಇನ್ನುಳಿದವರ ಬಂಧನಕ್ಕೆ ತಂಡ ರಚಿಸಲಾಗಿದೆ. ಗ್ಯಾಂಗ್ ರೇಪ್ ಬಗ್ಗೆ ಕಂಪ್ಲೇಂಟ್ ಕೊಟ್ಟಿಲ್ಲ. ಆರೋಪಿಗಳು ಈ ಮುಂಚೆ ಇಂತಹ ಪ್ರಕರಣದಲ್ಲಿ ಭಾಗಿಯಾದ್ದರಾ ಎನ್ನುವುದನ್ನು ತನಿಖೆ ಮಾಡುತ್ತೇವೆ ಎಂದಿದ್ದಾರೆ.
ವರದಿ: ರವಿ ಹೂಗಾರ, ಟಿವಿ9 ಹಾವೇರಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:47 pm, Wed, 10 January 24