ಪಟ್ಟಣ ಪಂಚಾಯಿತಿ ಸದಸ್ಯನ ವಿರುದ್ಧ ಮದುವೆ ಮಾಡಿಸೋದಾಗಿ ವಂಚನೆ, ಲೈಂಗಿಕ ಕಿರುಕುಳ ಆರೋಪ; ಕಟ್ಟುಕಥೆ ಎಂದ ಸದಸ್ಯ
ಹುನಗುಂದ(Hunagunda) ತಾಲ್ಲೂಕಿನ ಅಮೀನಗಢ ಪಟ್ಟಣ ಪಂಚಾಯಿತಿ ಸದಸ್ಯ ಸಂಜು ಐಹೊಳಿ ವಿರುದ್ಧ ಮದುವೆ ಮಾಡಿಸುವುದಾಗಿ ವಂಚನೆ ಹಾಗೂ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಆದರೆ, ಇದಕ್ಕೆ ಆರೋಪಕ್ಕೆ ಗುರಿಯಾದ ವೃತ್ತಿಯಲ್ಲಿ ವಕೀಲ, ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಜಯಕರ್ನಾಟಕ ಸಂಘಟನೆ ಹುನಗುಂದ ತಾಲ್ಲೂಕಾಧ್ಯಕ್ಷ ಆಗಿರುವ ಸಂಜು ಐಹೊಳಿ ಅಲ್ಲಗಳೆದಿದ್ದಾರೆ.
ಬಾಗಲಕೋಟೆ, ಜ.07: ಜಿಲ್ಲೆಯ ಹುನಗುಂದ(Hunagunda) ತಾಲ್ಲೂಕಿನ ಅಮೀನಗಢ ಪಟ್ಟಣ ಪಂಚಾಯಿತಿ ಸದಸ್ಯ ಸಂಜು ಐಹೊಳಿ ವಿರುದ್ಧ ಮದುವೆ ಮಾಡಿಸುವುದಾಗಿ ವಂಚನೆ ಹಾಗೂ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಅಮೀನಗಢ ಪಟ್ಟಣದ ಯುವತಿ ಭಾಗ್ಯಲಕ್ಷ್ಮಿ ಯಂಕಂಚಿ ಎಂಬ ಯುವತಿ, ತನ್ನ ಪ್ರಿಯಕರನೊಂದಿಗೆ ಮದುವೆ ಮಾಡಿಸುವುದಾಗಿ ಬರೊಬ್ಬರಿ 9 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಇದಕ್ಕೆ ಆರೋಪಕ್ಕೆ ಗುರಿಯಾದ ವೃತ್ತಿಯಲ್ಲಿ ವಕೀಲ, ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಜಯಕರ್ನಾಟಕ ಸಂಘಟನೆ ಹುನಗುಂದ ತಾಲ್ಲೂಕಾಧ್ಯಕ್ಷ ಆಗಿರುವ ಸಂಜು ಐಹೊಳಿ ಅಲ್ಲಗಳೆದಿದ್ದಾರೆ.
ಇದೆಲ್ಲ ಕಟ್ಟುಕಥೆ ಶುದ್ದು ಸುಳ್ಳು ಎಂದ ಆರೋಪಕ್ಕೆ ಗುರಿಯಾದ ಸಂಜು ಐಹೊಳಿ
ಇನ್ನು ಘಟನೆ ಕುರಿತು ಆರೋಪಕ್ಕೆ ಗುರಿಯಾದ ವಕೀಲ ಸಂಜು ಐಹೊಳಿ ಮಾತನಾಡಿ ‘ಇದೆಲ್ಲ ಕಟ್ಟುಕಥೆ, ಶುದ್ದು ಸುಳ್ಳು. ಆಕೆಯ ಲವರ್ ಸಾಗರ್ ಎಂಬಾತ ಲವ್ ಮಾಡಿ ಮದುವೆ ಮಾಡಿಕೊಳ್ಳಲು ಒಪ್ಪುತ್ತಿಲ್ಲ ಎಂದು ಭಾಗ್ಯಲಕ್ಷ್ಮಿ ಹಾಗೂ ಕುಟುಂಬಸ್ಥರು ನನ್ನ ಬಳಿ ಬಂದಿದ್ದರು. ನಾನೇ ನಮ್ಮ ಜಯಕರ್ನಾಟಕ ಸಂಘಟನೆ ಮೂಲಕ ಇಬ್ಬರ ಮದುವೆಯನ್ನು ಮಾಡಿಸಿದ್ದೇನೆ.
ಇದನ್ನೂ ಓದಿ:ಟಿವಿ9 ವರದಿ ಫಲಶ್ರುತಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಹಾಸ್ಟೆಲ್ ವಾರ್ಡನ್ ಅಮಾನತು
ಆಕೆಯ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ
ನಂತರ ಸಾಗರ ಅವಳನ್ನು ತನ್ನ ಮನೆಗೆ ಕರೆದೊಯ್ಯಲಿಲ್ಲ. ಅವಳಿಗೆ ಐದು ಲಕ್ಷ ಕೊಡುತ್ತೇನೆ ಅವಳ ಪಾಡಿಗೆ ಅವಳು ಇರಲಿ ಎಂದು ಹೇಳಿದ. ಇದಕ್ಕೆ ಒಪ್ಪಿದ ಭಾಗ್ಯಲಕ್ಷ್ಮಿ ಕುಟುಂಬ 5 ಲಕ್ಷ ಹಣ ಪಡೆದಿದೆ. ನಾವೇ ಮುಂದೆ ನಿಂತು ಹಣ ಕೊಡಿಸಿದ್ದೇವೆ. ಅವಳು ತಂಗಿ ಸಮಾನ, ಅತ್ಯಾಚಾರ ಆರೋಪ ಹಣ ವಂಚನೆ ಎಲ್ಲವೂ ಸುಳ್ಳು. ಅತ್ಯಾಚಾರ ಯತ್ನ ಮಾಡಿದ್ದೇ ಆದರೆ ಆಗಲೇ ದೂರು ಕೊಡಬಹುದಿತ್ತು. ಒಂದು ತಿಂಗಳ ನಂತರ ಯಾಕೆ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಂಜು ಐಹೊಳಿ ಹೇಳಿದರು.
ಇಂಜಿನಿಯರಿಂಗ್ ಓದುವಾಗ ಅರಳಿದ ಪ್ರೇಮ
ಬೆಳಗಾವಿ ಅಂಗಡಿ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜಿನಲ್ಲಿ ಇಬ್ಬರು ಇಂಜಿನಿಯರ್ಸ್ ಓದುತ್ತಿದ್ದರು. ಇಂಜಿನಿಯರಿಂಗ್ ಓದುವಾಗ 2019 ರಲ್ಲಿ ಇಬ್ಬರಲ್ಲಿ ಪ್ರೇಮ ಹುಟ್ಟಿದೆ. ನಂತರ ಮದುವೆಯಾಗಲು ಸಾಗರ್ ನಿರಾಕರಿಸಿದ್ದ. ಈ ಪ್ರಕರಣ ಬಾಗಲಕೋಟೆ ಮಹಿಳಾ ಠಾಣೆ ಮೆಟ್ಟಿಲೇರಿತ್ತು. ಬಳಿಕ 2023 ನವೆಂಬರ್ 17 ರಂದು ಬಾಗಲಕೋಟೆ ಮಹಿಳಾ ಠಾಣೆ ಎದುರು ಅರಿಶಿಣ ಕೊಂಬು ಕಟ್ಟಿಸಿ ಮದುವೆ ಮಾಡಿಸಿದ್ದರು. ಮದುವೆ ನಂತರ ಭಾಗ್ಯಲಕ್ಷ್ಮಿಯನ್ನು ಸಾಗರ್ ದೂರ ಮಾಡಿದ್ದ. ಈ ವೇಳೆ ಇಬ್ಬರನ್ನು ಒಂದು ಮಾಡೋದಾಗಿ ಬಂದಿದ್ದ ಸಂಜು ಐಹೊಳಿ 9 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಬೆಳಗಾವಿ ಲಾಡ್ಜ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪವನ್ನು ಯುವತಿ ಮಾಡಿದ್ದಾಳೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ