ಲೈಂಗಿಕ ಕಿರುಕುಳ ಪ್ರತಿಭಟಿಸಿದ ದಲಿತ ಯುವತಿಯನ್ನು ಬಿಸಿ ಎಣ್ಣೆ ಕಡಾಯಿಗೆ ತಳ್ಳಿದ ಪಾಪಿಗಳು
ಆಯಿಲ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ದಲಿತ ಯುವತಿ ಕೆಲಸದ ಸ್ಥಳದಲ್ಲಿ ನಿತ್ಯ ಲೈಂಗಿಕ ಕಿರುಕುಳ ಎದುರಿಸುತ್ತಿದ್ದಳು. ಅದನ್ನು ಪ್ರತಿಭಟಿಸಿದ್ದಕ್ಕೆ ಆರೋಪಿಗಳು ಆಕೆಯನ್ನು ಬಿಸಿ ಎಣ್ಣೆಯ ಕಡಾಯಿಗೆ ತಳ್ಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಕೆಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ದೆಹಲಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಮಿಲ್ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ನಿನ್ನೆ ಮಹಿಳೆಯ ಸಹೋದರ ನೀಡಿದ ದೂರಿನ ಪ್ರಕಾರ, ಆತನ ಕುಟುಂಬದ ಸದಸ್ಯರು ಧನೂರ ಸಿಲ್ವರ್‌ನಗರ ಗ್ರಾಮದ ಆಯಿಲ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಆಕೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಿಲ್ ಮಾಲೀಕ ಪ್ರಮೋದ್, ಮತ್ತು ಆತನ ಇಬ್ಬರು ಸಹಚರರಾದ ರಾಜು ಹಾಗೂ ಸಂದೀಪ್ ಕಿರುಕುಳ ನೀಡಿದ್ದಾರೆ. ಆಕೆ ಆರೋಪಿಗಳ ವಿರುದ್ಧ ಪ್ರತಿಭಟಿಸಿದಾಗ ಜಾತಿ ನಿಂದನೆ ಮಾಡಿದ್ದಾರೆ. ಬಳಿ ಬಿಸಿ ಎಣ್ಣೆ ತುಂಬಿದ ಕಡಾಯಿಗೆ ಆಕೆಯನ್ನು ಎಸೆದಿದ್ದಾರೆ.
ಮತ್ತಷ್ಟು ಓದಿ: ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ: ವಿಕೃತ ಕಾಮಿಯ ಕೈ ಆಟ ಬಯಲು
ಆಕೆಯ ಕಾಲುಗಳು ಹಾಗೂ ಕೈಗಳು ಸೇರಿದಂತೆ ಯುವತಿಯ ದೇಹದ ಅರ್ಧಕ್ಕಿಂತಲೂ ಹೆಚ್ಚು ಭಾಗ ಸುಟ್ಟು ಹೋಗಿದೆ. ಆಕೆಯ ಸಹೋದರನ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಯತ್ನ, ಮಹಿಳೆಯ ಮೇಲೆ ಹಲ್ಲೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಲ್ ಆಫೀಸರ್ ವಿಜಯ್ ಚೌಧರಿ ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ